For Quick Alerts
  ALLOW NOTIFICATIONS  
  For Daily Alerts

  ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ರಾಕಿಂಗ್ ಸ್ಟಾರ್ ಯಶ್

  By Naveen
  |
  ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ರಾಕಿಂಗ್ ಸ್ಟಾರ್ ಯಶ್ | Filmibeat Kannada

  ನಟ, ರಾಕಿಂಗ್ ಸ್ಟಾರ್ ಯಶ್ ತುಮಕೂರು ಜಿಲ್ಲೆಯ ಶ್ರೀ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದಾರೆ. ನಿನ್ನೆ ಮಠಕ್ಕೆ ಹೋಗಿ ಶ್ರೀಗಳ ಆಶೀರ್ವಾದವನ್ನು ಯಶ್ ಪಡೆದಿದ್ದಾರೆ. ತುಮಕೂರಿನ ಒಂದು ಕಾಲೇಜಿನ ಕಾರ್ಯಕ್ರಮಕ್ಕಾಗಿ ಹೋಗಿದ್ದ ಯಶ್ ಮಾರ್ಗ ಮಧ್ಯೆ ಮಠಕ್ಕೆ ಭೇಟಿ ನೀಡಿದ್ದಾರೆ.

  ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಜಿಯವರಿಂದ ಆಶೀರ್ವಾದ ಪಡೆದು ಮಠದಲ್ಲಿ ಸ್ವಲ್ಪ ಹೊತ್ತು ಯಶ್ ಇದ್ದರು. ಇನ್ನು ಯಶ್ ಸಿದ್ದಗಂಗಾ ಮಠಕ್ಕೆ ಭೇಟಿ ಕೊಟ್ಟಿರುವ ಫೋಟೋವನ್ನು ಯಶ್ ಅಭಿಮಾನಿಗಳ ಆಫೀಶಿಯಲ್ ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಳ್ಳಲಾಗಿದೆ. ಸಿನಿಮಾದ ಕೆಲಸದ ನಡುವೆಯೂ ಆಗಾಗ ಯಶ್ ಸಿದ್ದಗಂಗಾ ಮಠದ ಹೋಗಿ ಬರುತ್ತಿರುತ್ತಾರೆ.

  ಅಂದಹಾಗೆ, ಯಶ್ ಸದ್ಯ ತಮ್ಮ ಮಹಾತ್ವಾಕಾಂಕ್ಷೆಯ 'ಕೆ.ಜಿ.ಎಫ್' ಸಿನಿಮಾದ ಚಿತ್ರೀಕರಣದಲ್ಲಿ ಬಿಜಿ ಇದ್ದಾರೆ. ಈ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಟ್ರೇಲರ್ ಗಾಗಿ ಯಶ್ ಫ್ಯಾನ್ಸ್ ಕಾಯುತ್ತಿದ್ದಾರೆ.

  English summary
  Kannada actor Yash visits Siddaganga Mutt, Tumkuru Yesterday (Feb 2) and he took blessings from Sri Shivakumara Swamiji.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X