For Quick Alerts
  ALLOW NOTIFICATIONS  
  For Daily Alerts

  ಮುಂಬೈನಲ್ಲಿ ಯಶ್ ಮೋಡಿ: ಹೊಸ ಹೇರ್ ಸ್ಟೈಲ್ ನಲ್ಲಿ ಮಿಂಚಿದ ರಾಕಿಂಗ್ ಸ್ಟಾರ್

  By ಫಿಲ್ಮಿಬೀಟ್ ಡೆಸ್ಕ್
  |

  ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್, ಪ್ಯಾನ್ ಇಂಡಿಯಾ ಹೀರೋ ಯಶ್ ಮತ್ತೆ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೆ ಮುಂಬೈನಲ್ಲಿ ಕಾಣಿಸಿಕೊಂಡಿದ್ದ ಯಶ್ ಇದೀಗ ಮತ್ತೆ ಮುಂಬೈಗೆ ತೆರಳಿ ಅಚ್ಚರಿ ಮೂಡಿಸಿದ್ದಾರೆ. ಮುಂಬೈನ ಬೀದಿಯಲ್ಲಿ ಓಡಾಡುತ್ತಿರುವ ರಾಕಿಂಗ್ ಸ್ಟಾರ್ ಯಶ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಉದ್ದ ಕೂದಲು ಬಿಟ್ಟು ಯಶ್ ಸ್ಟೈಲಿಶ್ ಲುಕ್ ನಲ್ಲಿ ಮುಂಬೈ ಬೀದಿ ಸುತ್ತಾಡಿದ್ದಾರೆ.

  ಅಂದಹಾಗೆ ಯಶ್ ಪ್ರಸಿದ್ಧ ಹೇರ್ ಸ್ಟೈಲಿಶ್ ಆಲಿಮ್ ಹಕೀಮ್ ಅವರ ಸಲೂನ್ ಗೆ ಹೋಗುತ್ತಿರುವ ಫೋಟೋಗಳು ಇದಾಗಿವೆ. ಯಶ್ ಸಖತ್ ರಾ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಯಶ್ ನೋಡಲು, ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದರು. ಮತ್ತೊಂದು ವಿಡಿಯೋದಲ್ಲಿ ಯಶ್ ಆಲೀಮ್ ಹಕೀಮ್ ಸಲೂನ್ ನಲ್ಲಿದ್ದಾರೆ. ಹೊಸ ಹೇರ್ ಸ್ಟೈಲ್ ಮಾಡಿಸುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ. ತಮ್ಮ ಉದ್ದನೆಯ ಕೂದಲಿಗೆ ಕಲರಿಂಗ್ ಮಾಡಿದ್ದಾರೆ. ಯಶ್ ನ್ಯೂ ಹೇರ್ ಸ್ಟೈಲ್ ನೋಡಿ ಅಭಿಮಾನಿಗಳು ಸಹ ಥ್ರಿಲ್ ಆಗಿದ್ದಾರೆ.

  ಕೆಜಿಎಫ್ ಸಿನಿಮಾ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿರುವ ಯಶ್ ಗೆ ಬಾಲಿವುಡ್‌ ನಲ್ಲೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಮುಂಬೈ ಬೀದಿಯಲ್ಲಿ ಯಶ್ ಕಾಣಿಸಿಕೊಳ್ಳುತ್ತಿದ್ದಂತೆ ಅಭಿಮಾನಿಗಳು ರಾಕಿಂಗ್ ಸ್ಟಾರ್ ನನ್ನು ನೋಡಿ ಫುಲ್ ಖುಷ್ ಆಗಿದ್ದಾರೆ.

  ಅಂದಹಾಗೆ ಯಶ್ ನಟನೆಯ ಬಹಿನಿರೀಕ್ಷೆಯ ಕೆಜಿಎಫ್-2 ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾಗಾಗಿ ಭಾರತ ಮಾತ್ರವಲ್ಲದೆ ಹೊರ ದೇಶದ ಅಭಿಮಾನಿಗಳು ಕಾಯುತ್ತಿದ್ದಾರೆ. ಅಂದಹಾಗೆ ಬಹುನಿರೀಕ್ಷೆಯ ಸಿನಿಮಾ ಮುಂದಿನ ವರ್ಷ ಏಪ್ರಿಲ್ 14ಕ್ಕೆ ತೆರೆಗೆ ಬರುತ್ತಿದೆ. ತೆರೆಮೇಲೆ ರಾಕಿಂಗ್ ಸ್ಟಾರ್‌ನನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇನ್ನು ಯಶ್ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಸಹ ಎಲ್ಲರಲ್ಲಿದೆ. ಈ ನಡುವೆ ಯಶ್ ದಿಢೀರ್ ಅಂತ ಮುಂಬೈನಲ್ಲಿ ಕಾಣಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ.

  ಈ ಹಿಂದೆ ಜಾಹೀರಾತು ಚಿತ್ರೀಕರಣಕ್ಕೆಂದು ಮುಂಬೈಗೆ ತೆರಳಿದ್ದ ಯಶ್ ಈ ಬಾರಿ ಮತ್ತೆ ಮುಂಬೈನಲ್ಲಿ ಕಾಣಿಸಿಕೊಂಡಿರುವುದು ನ್ಯೂ ಹೇರ್ ಸ್ಟೈಲ್ ಗೆ ಮಾತ್ರನಾ ಅಥವಾ ಬೇರೆ ಇನ್ನೇನಾದರು ಕಾರಣ ಇದಿಯಾ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಕೆಜಿಎಫ್ ಬಿಡುಗಡೆಗೆ ಸಿದ್ಧವಾಗಿದೆ. ಹಾಗಾಗಿ ಮುಂದಿನ ಸಿನಿಮಾದ ತಯಾರಿಯಲ್ಲಿರುವ ಯಶ್ ಅಭಿಮಾನಿಗಳಿಗೆ ಸದ್ಯದಲ್ಲೇ ಸಿಹಿ ಸುದ್ದಿ ನೀಡುವ ಸಾಧ್ಯತೆ ಇದೆ.

  English summary
  Rocking star Yash visits to Aalim Hakim salon in Mumbai, video goes viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X