ಮುಂಬೈನಲ್ಲಿ ಯಶ್ ನೋಡಲು ಮುಗಿಬಿದ್ದ ಫ್ಯಾನ್ಸ್; ವಿಡಿಯೋ ವೈರಲ್

By ಫಿಲ್ಮಿಬೀಟ್ ಡೆಸ್ಕ್

ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್, ಪ್ಯಾನ್ ಇಂಡಿಯಾ ಹೀರೋ ಯಶ್ ಸದ್ಯ ಮುಂಬೈನಲ್ಲಿದ್ದಾರೆ. ಇತ್ತೀಚಿಗಷ್ಟೆ ಯಶ್ ಮುಂಬೈ ತೆರಲಿದ್ದಾರೆ. ರಾಕಿಂಗ್ ಸ್ಟಾರ್ ಮುಂಬೈ ಏರ್‌ನಲ್ಲಿ ಕಾಣಿಸಿಕೊಂಡ ಫೋಟೋಗಳು ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸ್ಟೈಲಿಶ್ ಲುಕ್‌ನಲ್ಲಿ ಮುಂಬೈ ಸಿಟಿಯಲ್ಲಿ ಮಿಂಚಿದ ಸ್ಯಾಂಡಲ್ ವುಡ್ ಸ್ಟಾರ್‌ಗೆ ಭಾರತದ ಮೂಲೆ ಮೂಲೆಯಲ್ಲಿರುವ ಅಭಿಮಾನಿಗಳು ಫಿದಾ ಆಗಿದ್ದಾರೆ.

Recommended Video

ಇದ್ದಕ್ಕಿದ್ದಂತೆ ಮುಂಬೈಗೆ ಹಾರಿದ ಯಶ್, ಮುಂದಿನ ಸಿನಿಮಾ ಯಾವುದು..?

ಯಶ್ ಅವರನ್ನು ಮುಂಬೈನಲ್ಲಿ ಅದ್ದೂರಿಯಾಗಿ ಸ್ವಾಗತ ಮಾಡಲಾಗಿದೆ. ಕೆಜಿಎಫ್ ಸಿನಿಮಾ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿರುವ ಯಶ್‌ಗೆ ಬಾಲಿವುಡ್‌ನಲ್ಲೂ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಮುಂಬೈನಲ್ಲಿರುವ ಯಶ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ರಾಕಿಂಗ್ ಸ್ಟಾರ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು, ರಾಕಿಂಗ್ ಸ್ಟಾರ್‌ನನ್ನು ನೋಡಲು ಅಭಿಮಾನಿಗಳ ದಂಡೇ ಸೇರಿತ್ತು.

ಯಶ್ ನೋಡಲು ಅಭಿಮಾನಿಗಳು ಮುಗಿಬಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಕಿಂಗ್ ಸ್ಟಾರ್ ಅಭಿಮಾನಿಗಳ ಜೊತೆ ನಿಂತು ಸೆಲ್ಫಿಗೆ ಪೋಸ್ ನೀಡಿದ್ದಾರೆ. ಅಭಿಮಾನಿಗಳ ಜೊತೆ ರಾಕಿಂಗ್ ಸ್ಟಾರ್ ನಡೆದುಕೊಂಡ ರೀತಿಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಬೌನ್ಸರ್ ಫ್ಯಾನ್ಸ್ ಅವರನ್ನು ಬದಿಗೆ ಸರಿಸಿದ್ದಕ್ಕೆ ಯಶ್ ಅಲ್ಲೇ ಕ್ಷಮೆ ಕೇಳಿದ್ದಾರೆ. ಯಶ್ ವರ್ತನೆ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

Yash visits to Mumbai, fans taking selfie with him video viral on social media

ಅಂದಹಾಗೆ ಯಶ್ ನಟನೆಯ ಕೆಜಿಎಫ್-2 ಸಿನಿಮಾ ಬಿಡುಗಡೆ ಸಿದ್ಧವಾಗಿದೆ. ಬಹುನಿರೀಕ್ಷೆಯ ಸಿನಿಮಾ ಮುಂದಿನ ವರ್ಷ ಏಪ್ರಿಲ್ 14ಕ್ಕೆ ತೆರೆಗೆ ಬರುತ್ತಿದೆ. ತೆರೆಮೇಲೆ ರಾಕಿಂಗ್ ಸ್ಟಾರ್‌ನನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇನ್ನು ಯಶ್ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಸಹ ಎಲ್ಲರಲ್ಲಿದೆ. ಈ ನಡುವೆ ಯಶ್ ದಿಢೀರ್ ಅಂತ ಮುಂಬೈನಲ್ಲಿ ಕಾಣಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ.

ಮೂಲಗಳ ಪ್ರಕಾರ ಯಶ್ ಮುಂಬೈಗೆ ಪಯಣ ಬೆಳೆಸಲು ಕಾರಣ ಚಿತ್ರೀಕರಣ ಎನ್ನಲಾಗುತ್ತಿದೆ. ರಾಕಿಂಗ್ ಸ್ಟಾರ್ ಜಾಹೀರಾತು ಚಿತ್ರೀಕರಣಕ್ಕಾಗಿ ಮುಂಬೈಗೆ ಹೋಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ದೊಡ್ಡ ಜಾಹೀರಾತು ಬ್ರ್ಯಾಂಡ್ ಒಂದರ ಚಿತ್ರೀಕರಣದಲ್ಲಿ ಯಶ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

'ಕೆಜಿಎಫ್ 2' ಬಳಿಕ ಯಶ್ ಯಾವುದೇ ಸಿನಿಮಾಗೂ ಗ್ರೀನ್ ಸಿಗ್ನಲ್ ನೀಡಿಲ್ಲ. ಹಾಗಂತ ಯಶ್ ಖಾಲಿ ಕುಳಿತಿಲ್ಲ. ಹಲವು ಜಾಹೀರಾತುಗಳಲ್ಲಿ ಯಶ್ ಕಾಣಿಸಿಕೊಳ್ಳುತ್ತಲೇ ಇದ್ದಾರೆ. ಪತ್ನಿ ರಾಧಿಕಾ ಜೊತೆಗೆ ಅಡುಗೆ ಎಣ್ಣೆಯ ಜಾಹೀರಾತಿನಲ್ಲಿ ಕಾಣಿಸಿಕೊಂಡ ಯಶ್, ಗಡ್ಡಕ್ಕೆ ಹಚ್ಚುವ ತೈಲ, ಕಬ್ಬಿಣ, ಸೆಲ್ಕಾನ್ ಮೊಬೈಲ್, ಫ್ಲಿಪ್ ಕಾರ್ಟ್ ಇನ್ನೂ ಕೆಲವು ಬ್ರ್ಯಾಂಡ್‌ಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಕಾರಣ ಹಲವು ಬ್ರ್ಯಾಂಡ್‌ಗಳು ಯಶ್ ಅನ್ನು ತಮ್ಮ ರಾಯಭಾರಿಯನ್ನಾಗಿ ನೇಮಿಸಿಕೊಂಡಿದ್ದಾರೆ.

More from Filmibeat

English summary
Rocking star Yash visits to Mumbai, fans taking selfie with him video viral on social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X