ರಿಷಬ್ ಶೆಟ್ಟಿ ಜೊತೆ ಸಿನಿಮಾ ಮಾಡ್ತೀನಿ ಎಂದ ರಾಕಿಂಗ್ ಸ್ಟಾರ್

Recommended Video

ಯಶ್ ಮುಂದಿನ ಸಿನಿಮಾ ಯಾರ ಜೊತೆ ಮಾಡ್ತಾರೆ ..? | FILMIBEAT KANNADA

''ನಿರ್ದೇಶಕರು ಕಥೆ ಮಾಡಿಕೊಂಡು ಬರಬೇಕು. ಆ ರೀತಿಯ ಅವಕಾಶ ಸಿಕ್ಕರೆ ಖಂಡಿತ ಅವರ ಜೊತೆಗೆ ಸಿನಿಮಾ ಮಾಡುತ್ತೇನೆ.'' ಎಂದು ನಿರ್ದೇಶಕ ರಿಷಬ್ ಶೆಟ್ಟಿ ಅವರ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ.

ನಿನ್ನೆ ನಟ ಯಶ್ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ' ಸಿನಿಮಾವನ್ನು ನೋಡಿದರು. ಚಿತ್ರ ವೀಕ್ಷಿಸಿ ಸಿಕ್ಕಾಪಟ್ಟೆ ಖುಷಿಯಾದ ಯಶ್ ಸಿನಿಮಾದ ಬಗ್ಗೆ ಮೆಚ್ಚುಗೆ ಮಾತನ್ನು ಆಡಿದರು. ತಮಗೆ ತುಂಬ ಇಷ್ಟ ಆದ ಅಂಶಗಳನ್ನು ವಿವರಿಸಿದರು.

ಈಗಾಗಲೇ ನಟ ಪುನೀತ್ ರಾಜ್ ಕುಮಾರ್, ಸುದೀಪ್ ಸೇರಿದಂತೆ ಅನೇಕರು ಸಿನಿಮಾ ಬಗ್ಗೆ ಮಾತನಾಡಿದ್ದು, ಈಗ ಯಶ್ ಕೂಡ ಶಾಲೆ ಮಕ್ಕಳನ್ನು ಹೊಗಳಿದ್ದಾರೆ. ಈ ವೇಳೆ ರಿಷಬ್ ಜೊತೆಗೆ ಸಿನಿಮಾ ಮಾಡುವ ಬಗ್ಗೆಯೂ ಅವರು ಮಾತನಾಡಿದ್ದಾರೆ. ಮುಂದೆ ಓದಿ...

ಮಾತೇ ಬರುತ್ತಿಲ್ಲ ಅಷ್ಟೊಂದು ಖುಷಿಯಾಗಿದೆ

ಮಾತೇ ಬರುತ್ತಿಲ್ಲ ಅಷ್ಟೊಂದು ಖುಷಿಯಾಗಿದೆ

''ಸಿನಿಮಾ ನೋಡಿ ನನಗೆ ಮಾತೇ ಬರುತ್ತಿಲ್ಲ ಅಷ್ಟೊಂದು ಖುಷಿಯಾಗಿದೆ. ಚಪ್ಪಾಳೆ, ಶಿಳ್ಳೆ ಹೊಡೆದುಕೊಂಡು, ಕುಣಿದಾಡುಕೊಂಡು ಈ ಸಿನಿಮಾ ನೋಡಿದ್ದೇನೆ. ಈ ರೀತಿಯ ಒಂದು ಸಿನಿಮಾ ಮಾಡಬೇಕು ಎಂದರೆ ಸಿನಿಮಾ ಮೇಲೆ ಹಾಗೂ ಭಾಷೆಯ ಮೇಲೆ ಅಭಿಮಾನ, ಪ್ರೀತಿ ಇರಬೇಕು. ಅವರ ಮೇಲೆ ನನಗೆ ಇನ್ನೂ ಗೌರವ ಬಂದಿದೆ. ಹ್ಯಾಟ್ಸ್ ಆಫ್.'' - ಯಶ್, ನಟ

ಅನಂತ್ ಸರ್ ಅದ್ಭುತವಾಗಿ ನಟಿಸಿದ್ದಾರೆ

ಅನಂತ್ ಸರ್ ಅದ್ಭುತವಾಗಿ ನಟಿಸಿದ್ದಾರೆ

''ಕಾಸರಗೋಡಿನ ಸಂಸೃತಿ, ಬಾಲ್ಯ ಎಲ್ಲವನ್ನು ಅವರು ತೋರಿಸಿರುವ ರೀತಿ ಇಷ್ಟ ಅಯ್ತು. ಬಾಲ್ಯದ ದೃಷ್ಟಿಕೋನದಿಂದ ಸಿನಿಮಾ ತೋರಿಸಿದ್ದಾರೆ. ಸಾಕಷ್ಟು ವಿಷಯಗಳು ಸಿನಿಮಾದಲ್ಲಿ ಇದೆ. ಅನಂತ್ ಸರ್ ಅದ್ಭುತವಾಗಿ ನಟಿಸಿದ್ದಾರೆ. ನಮ್ಮ ಭಾಷೆಯಲ್ಲಿ ಈ ರೀತಿಯ ಸಿನಿಮಾ ಬಂದಿದೆ ಎಂದು ಹೆಮ್ಮೆ ಪಡಬೇಕು''. - ಯಶ್, ನಟ

ಕಥೆ ಹೇಳಲು ತುಂಬ ಚೆನ್ನಾಗಿ ಬರುತ್ತದೆ

ಕಥೆ ಹೇಳಲು ತುಂಬ ಚೆನ್ನಾಗಿ ಬರುತ್ತದೆ

''ಅವರು ನಿರ್ಧಾರ ಮಾಡಬೇಕು. ನಿರ್ದೇಶಕರು ಕಥೆ ಮಾಡಿಕೊಂಡು ಬರಬೇಕು. ಆ ರೀತಿಯ ಅವಕಾಶ ಸಿಕ್ಕರೆ ಖಂಡಿತ ಅವರ ಜೊತೆಗೆ ಸಿನಿಮಾ ಮಾಡುತ್ತೇನೆ. ಅವರಿಗೆ ಕಥೆ ಹೇಳಲು ತುಂಬ ಚೆನ್ನಾಗಿ ಬರುತ್ತದೆ. ಈ ರೀತಿ ಕಥೆ ಹೇಳಿ ಗೆದ್ದಿದ್ದಾರೆ ಎಂದರೆ, ಅವರು ಏನು ಬೇಕಾದರು ಮಾಡಬಹುದು'' - ಯಶ್, ನಟ

ದೇಶ ಮಟ್ಟದಲ್ಲಿ ಹೆಸರು ಮಾಡಲಿ

''ನನಗೆ ಸಿನಿಮಾ ನೋಡಿ ತುಂಬ ಖುಷಿಯಾಯ್ತು. ಇದು ಒಂದು ದೊಡ್ಡ ಪ್ರಯತ್ನ. ನಮ್ಮ ಸಿನಿಮಾವನ್ನು ಬೇರೆ ಭಾಷೆಯವರೂ ನೋಡುವಂತೆ ಮಾಡುವುದಕ್ಕೆ ಈ ರೀತಿಯ ಚಿತ್ರಗಳು ಕಾರಣ ಆಗುತ್ತದೆ. ಅವರು (ರಿಷಬ್ ಶೆಟ್ಟಿ) ಇನ್ನು ಒಳ್ಳೆಯ ಸಿನಿಮಾಗಳನ್ನ ಮಾಡಲಿ. ದೇಶ ಮಟ್ಟದಲ್ಲಿ ಹೆಸರು ಮಾಡಲಿ.'' - ಯಶ್, ನಟ

More from Filmibeat

English summary
Rocking Star Yash watched Rishab Shetty directional 'Sarkari Hiriya Prathamika Shale.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X