ರಾಜ್ ಅಭಿಮಾನಿಗಳು ಮೆಚ್ಚಿಕೊಳ್ಳುವ ಯಶ್ ಕಾರ್ಯ
Recommended Video

ಯಶ್ ಅವರ ಈ ಕಾರ್ಯದಿಂದ ಡಾ ರಾಜ್ ಕುಮಾರ್ ಅಭಿಮಾನಿಗಳಿಗೆ ಸಂತಸ | FILMIBEAT KANNADA
ಕನ್ನಡ ರಾಜ್ಯೋತ್ಸವಕ್ಕೆ ಎರಡೇ ದಿನ ಬಾಕಿ ಇದೆ. ಈ ವರ್ಷದ ಕನ್ನಡ ಹಬ್ಬವನ್ನು ಪ್ರತಿಯೊಬ್ಬರು ಒಂದೊಂದು ರೀತಿ ಆಚರಿಸಲು ತಯಾರಿ ಮಾಡಿಕೊಳ್ಳುತ್ತಿರುತ್ತಾರೆ. ಅದೇ ರೀತಿ ಯಶ್ ಕೂಡ ನವೆಂಬರ್ ಒಂದಕ್ಕಾಗಿ ಕಾಯುತ್ತಿದ್ದಾರೆ.
ಯಶ್ ಅವರ ಈ ವರ್ಷದ ರಾಜ್ಯೋತ್ಸವದ ಕಾರ್ಯ ರಾಜ್ ಕುಮಾರ್ ಅಭಿಮಾನಿಗಳಿಗೆ ಖುಷಿ ನೀಡುತ್ತದೆ. ಕಾರಣ, ಆ ದಿನ ನಟ ರಾಜ್ ಕುಮಾರ್ ಅವರ ಒಂದು ಹೊಸ ಪುತ್ಥಳಿಯನ್ನು ಯಶ್ ಅನಾವರಣಗೊಳಿಸಲಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂ ನಲ್ಲಿ ಗೋಕಾಕ್ ಚಳವಳಿಯ ಹೋರಾಟಗಾರ ಸ್ಮರಣಾರ್ಥ ಡಾ.ರಾಜ್ ಕುಮಾರ್ ಅವರ ಒಂದು ಪುತ್ಥಳಿ ಹಾಗೂ ಗೋಕಾಕ್ ಚಳವಳಿಯ ಸ್ಮರಣಾರ್ಥ ವೃತ್ತ ಲೋಕಾರ್ಪಣೆ ಆಗಲಿದೆ.

ನಟ ಯಶ್ ಈ ಕಾರ್ಯಕ್ರಮದ ಅತಿಥಿ ಆಗಿದ್ದಾರೆ. ರಾಜ್ಯದ ವಿವಿಧ ಕಡೆಯಿಂದ ಅಭಿಮಾನಿಗಳು ಹಾಗೂ ಕನ್ನಡದ ಹೋರಾಟಗಾರರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
English summary
Kannada actor Yash will launch DR Rajkumar's new idol.


Click it and Unblock the Notifications