ಚಿತ್ರೀಕರಣದ ಕೊನೆಯ ಹಂತ ತಲುಪಿದ ಕೆಜಿಎಫ್ 2
ಕನ್ನಡದ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್ 2 ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಕೊರೊನಾ ಲಾಕ್‌ಡೌನ್‌ನಿಂದಾಗಿ ಸ್ಥಗಿತಗೊಂಡಿದ್ದ ಚಿತ್ರೀಕರಣ ಆರಂಭವಾಗಿ ಎರಡು ತಿಂಗಳೇ ಆಗಿದ್ದು, ಹೆಚ್ಚಿನ ವೇಗದಲ್ಲಿ ಚಿತ್ರೀಕರಣ ಸಾಗುತ್ತಿದೆ.
ಕೊರೊನಾ ಲಾಕ್‌ಡೌನ್‌ಗೆ ಮುನ್ನವೇ ಕೆಜಿಎಫ್ 2 ನ ಚಿತ್ರೀಕರಣ ಆರಂಭಿಸಿ ಅರ್ಧದಷ್ಟು ಚಿತ್ರೀಕರಣ ಮುಗಿಸಲಾಗಿತ್ತು. ಇದೇ ವರ್ಷದ ಅಂತ್ಯಕ್ಕೆ ಸಿನಿಮಾವನ್ನು ಬಿಡುಗಡೆ ಮಾಡುವ ಇರಾದೆಯೂ ಚಿತ್ರತಂಡಕ್ಕಿತ್ತು, ಆದರೆ ಕೊರೊನಾ, ಎಲ್ಲಾ ಯೋಜನೆಗಳನ್ನು ಬುಡಮೇಲು ಮಾಡಿಬಿಟ್ಟಿತು.
ಇದೀಗ ಕೆಜಿಎಫ್ 2 ಸಿನಿಮಾದ ಚಿತ್ರೀಕರಣ ಅಂತಿಮ ಹಂತಕ್ಕೆ ಬಂದಿದೆ. ನಟ ಯಶ್ ಸಹ ತಮ್ಮ ಕೊನೆಯ ಶೆಡ್ಯೂಲ್‌ನ ಚಿತ್ರೀಕರಣದಲ್ಲಿ ತೊಡಗಿದ್ದಾರೆ ಎನ್ನಲಾಗುತ್ತಿದೆ. ಸಂಜಯ್ ದತ್ ಸಹ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದು, ಅದುವೇ ಸಿನಿಮಾದ ಅಂತಿಮ ಹಂತದ ಚಿತ್ರೀಕರಣ ಆಗಿರಲಿದೆ ಎನ್ನಲಾಗುತ್ತಿದೆ.

ಯಶ್ ಇದೇ ವಾರದಲ್ಲಿ ಹೈದರಾಬಾದ್‌ಗೆ ತೆರಳಲಲಿದ್ದು, ಡಿಸೆಂಬರ್ ಅಂತ್ಯದ ವರೆಗೆ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಇದು ಯಶ್ ಅವರ ಕೊನೆಯ ಶೆಡ್ಯೂಲ್ ಆಗಿರಲಿದೆ.
ಸಂಜಯ್ ದತ್ ಸಹ ಕ್ಯಾನ್ಸರ್‌ನಿಂದ ಗುಣಮುಖರಾಗಿದ್ದು, ಈಗಾಗಲೇ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾರೆ. ಕೆಜಿಎಫ್ 2 ಸಿನಿಮಾದ ಚಿತ್ರೀಕರಣದಲ್ಲಿ ಸಹ ಅವರು ಭಾಗವಹಿಸಲಿದ್ದಾರೆ.
Recommended Video
ಕೊರೊನಾ ನಂತರ ಕೆಜಿಎಫ್ 2 ಸಿನಿಮಾದ ಚಿತ್ರೀಕರಣವು ಬೆಂಗಳೂರು, ಮಂಗಳೂರು ನಂತರ ಹೈದರಾಬಾದ್‌ನಲ್ಲಿ ಚಿತ್ರೀಕರಣಗೊಳ್ಳುತ್ತಿದೆ. ರವೀನಾ ಟಂಡನ್, ಪ್ರಕಾಶ್ ರೈ ಸೇರಿದಂತೆ ಇನ್ನೂ ಕೆಲವರು ಹೊಸ ನಟರು ಕೆಜಿಎಫ್ 2 ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.


Click it and Unblock the Notifications











