ಮಗಳ ಮೊದಲ ವರ್ಷದ ಹುಟ್ಟುಹಬ್ಬಕ್ಕೆ ಯಶ್ ಹೇಳಿದ್ದೇನು?
ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಯ ಮುದ್ದಿನ ಮಗಳು ಆಯ್ರಾಗೆ ಇಂದು ಮೊದಲ ವರ್ಷದ ಹುಟ್ಟುಹಬ್ಬದ ಸಂಭ್ರಮ. ಆಯ್ರಾ ಹುಟ್ಟುಹಬ್ಬವನ್ನು ರಾಕಿ ಅಭಿಮಾನಿಗಳು ಕೂಡ ಜೋರಾಗಿ ಆಚರಿಸಿದ್ದಾರೆ.
ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಮನೆಗೆ ಆಯ್ರಾ ಬಂದು ಒಂದು ವರ್ಷ ಕಳೆದಿದೆ. ಮಗಳ ಮೊದಲ ಜನುಮದಿನದ ವಿಶೇಷವಾಗಿ ರಾಧಿಕಾ ಪಂಡಿತ್ ''ನನ್ನ ಹೃದಯ ಹಾಗೂ ಆತ್ಮದ ಒಂದು ಭಾಗ ನೀನು. ನನ್ನ ದೇವತೆ ನಿನಗೆ ಹುಟ್ಟುಹಬ್ಬದ ಶುಭಾಶಯಗಳು'' ಎಂದು ಶುಭ ಕೋರಿದ್ದರು.
ಇದೀಗ, ರಾಕಿ ಭಾಯ್ ಕೂಡ ಮಗಳ ಬರ್ತಡೇಗೆ ವಿಶ್ ಮಾಡಿದ್ದಾರೆ. ''ಅಪ್ಪ ಎಂದು ಬಡ್ತಿ ನೀಡಿದ ನೀನು ನನ್ನ ಮನದಲ್ಲಿನ ಮೃದುತ್ವವನ್ನು ಹೊರತೆಗೆದೆ. ನನ್ನ ಶಕ್ತಿಯೂ ನೀನೇ, ನನ್ನ ದೌರ್ಬಲ್ಯವೂ ನೀನೇ, ನನ್ನಗೆ ಎಲ್ಲವೂ ನೀನೇ. ಹ್ಯಾಪಿ ಬರ್ತಡೇ ನನ್ನ ಡಾರ್ಲಿಂಗ್'' ಎಂದು ಮಗಳ ಫೋಟೋ ಹಂಚಿಕೊಂಡಿದ್ದಾರೆ ಯಶ್.

2018 ಡಿಸೆಂಬರ್ 2 ರಂದು ಆಯ್ರಾಗೆ ರಾಧಿಕಾ ಪಂಡಿತ್ ಜನ್ಮ ನೀಡಿದ್ದರು. ರಾಕಿಂಗ್ ಮಗಳ ಬರ್ತಡೇ ಇಂಡಸ್ಟ್ರಿಯವರು ಕೂಡ ವಿಶ್ ಮಾಡಿದ್ದಾರೆ. ಕಳೆದ ತಿಂಗಳು ರಾಧಿಕಾ ಪಂಡಿತ್ ಎರಡನೇ ಮಗುವಿಗೆ ಜನ್ಮ ನೀಡಿದ್ದರು.
ಸದ್ಯ ಕೆಜಿಎಫ್ ಚಾಪ್ಟರ್ 2 ಸಿನಿಮಾದಲ್ಲಿ ನಟ ಯಶ್ ಇದ್ದಾರೆ. ಮುಂದಿನ ವರ್ಷದ ತೆರೆಕಾಣಲಿರುವ ಈ ಚಿತ್ರದ ಮೇಲೆ ಭಾರಿ ನಿರೀಕ್ಷೆ ಹುಟ್ಟಿಕೊಂಡಿದೆ. ಪ್ರಶಾಂತ್ ನೀಲ್ ನಿರ್ದೇಶನ ಹಾಗೂ ವಿಜಯ್ ಕಿರಗಂದೂರ್ ನಿರ್ಮಾಣ ಈ ಚಿತ್ರಕ್ಕಿದೆ.


Click it and Unblock the Notifications











