ನಟಸಾರ್ವಭೌಮನಿಗೆ ಶುಭಕೋರಿದ ಯಶ್, ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಪ್ಪು

Recommended Video

Nata Sarvabhouma movie : ಟ್ವಿಟ್ಟರ್ ನಲ್ಲಿ ಪುನೀತ್ ರಾಜ್ ಕುಮಾರ್ ಗೆ ಶುಭಾಶಯ ಮಾಡಿದ ಯಶ್ | FILMIBEAT KANNADA

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಮತ್ತು ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ನಡುವೆ ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ವಿಚಾರಕ್ಕಾಗಿ (ಕೆಜಿಎಫ್) ಕಿತ್ತಾಟ ನಡೆದಿತ್ತು. ಪರಸ್ಪರ ಇಬ್ಬರು ಅಭಿಮಾನಿಗಳು ದ್ವೇಷಿಸುವಂತಹ ಪೋಸ್ಟ್ ಗಳನ್ನ ಹಾಕಿ ಅಪಪ್ರಚಾರಕ್ಕೆ ಮುಂದಾಗಿದ್ದರು. ಇದು ಸಹಜವಾಗಿ ಬೇಸರ ಮೂಡಿಸಿತ್ತು.

ಆದ್ರೆ, ಇದೆಲ್ಲ ಕೆಲವು ಅಭಿಮಾನಿಗಳ ಮಾಡೋ ಕೆಲಸ ಅಷ್ಟೇ. ಇದರಿಂದ ಸ್ಟಾರ್ ನಟರಿಗೂ ಮುಜುಗರ. ಬಟ್, ಇದ್ಯಾವುದನ್ನ ತಲೆಕೆಡಿಸಿಕೊಳ್ಳದ ಯಶ್, ಅಪ್ಪು ಚಿತ್ರಕ್ಕೆ ವಿಶ್ ಮಾಡಿದ್ದಾರೆ.

''ತಮ್ಮ ವಿಶಿಷ್ಟ ರೀತಿಯ ನೃತ್ಯ ಹಾಗೂ ವಿಭಿನ್ನ ಪಾತ್ರಪೋಷಣೆಯ ಮೂಲಕ ಅಪಾರ ನಿರೀಕ್ಷೆಯನ್ನು ಹುಟ್ಟುಹಾಕಿರುವ ಪವರ್ ಸ್ಟಾರ್ ಅಪ್ಪು ಸರ್ ಅಭಿನಯದ 'ನಟಸಾರ್ವಭೌಮ' ಚಿತ್ರವು ಅಭಿಮಾನಿಗಳ ಮನತಣಿಸಿ, ಪ್ರೇಕ್ಷಕರ ಮನಗೆದ್ದು ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ'' ಎಂದು ಟ್ವಿಟ್ಟರ್ ನಲ್ಲಿ ಶುಭಕೋರಿದ್ದಾರೆ.

Yash wish to nata sarvabhouma movie

ನಟಸಾರ್ವಭೌಮ ಇಂದು ವರ್ಲ್ಡ್ ವೈಡ್ ತೆರೆಕಂಡಿದ್ದು, ಎಲ್ಲ ಕಡೆಯೂ ಪಾಸಿಟೀವ್ ರೆಸ್ಪಾನ್ಸ್ ಪಡೆದುಕೊಂಡಿದೆ. ಮತ್ತೊಂದೆಡೆ ಪುನೀತ್ ರಾಜ್ ಕುಮಾರ್ ಇಂದು ಸಿನಿಮಾ ರಿಲೀಸ್ ಹಿನ್ನೆಲೆ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಕೂಡ ಮಾಡಿಸಿದ್ದಾರೆ.

ಇನ್ನುಳಿದಂತೆ ಪವನ್ ಒಡೆಯರ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ರಾಕ್ ಲೈನ್ ವೆಂಕಟೇಶ್ ಈ ಚಿತ್ರನ್ನ ನಿರ್ಮಾಣ ಮಾಡಿದ್ದಾರೆ. ರಚಿತಾ ರಾಮ್, ಅನುಪಮಾ ಪರಮೇಶ್ವರನ್ ನಾಯಕಿಯಾಗಿ ಅಭಿನಯಿಸಿದ್ದು, ರವಿಶಂಕರ್, ಚಿಕ್ಕಣ್ಣ ಸೇರಿದಂತೆ ಹಲವರು ನಟಿಸಿದ್ದಾರೆ.

More from Filmibeat

English summary
Kannada actor yash has taken his twitter account to wish puneeth rajkumar's nata sarvabhouma movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X