ತಮಿಳುನಾಡಿನಲ್ಲೊಬ್ಬ 'ಅಣ್ತಮ್ಮ': ಬ್ರದರ್ ಗೆ ವಿಶ್ ಮಾಡಿದ 'ರಾಜಾಹುಲಿ'

Recommended Video

ತಮಿಳು ಅಣ್ತಮ್ಮನ ಬಗ್ಗೆ ಯಶ್ ಬರೆದುಕೊಂಡಿದ್ದೇನು..? | Filmibeat Kannada

ರಾಕಿಂಗ್ ಸ್ಟಾರ್ ಯಶ್ ಅಪ್ಪಟ ಕನ್ನಡ ಕಲಾವಿದ. ಸ್ಯಾಂಡಲ್ ವುಡ್ ನಲ್ಲಿ ಬಹುದೊಡ್ಡ ಅಭಿಮಾನಿ ಬಳಗ ಹೊಂದಿರುವ ಸ್ಟಾರ್ ನಟರಲ್ಲಿ ಪ್ರಮುಖರು. ಯಶ್ ಇದುವರೆಗೂ ಕನ್ನಡ ಬಿಟ್ಟು ಬೇರೆ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿಲ್ಲ. ಆದ್ರೆ, ಪರಭಾಷೆ ತಾರೆಯರ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ.

ಸದ್ಯ, ಕೆಜಿಎಫ್ ಚಿತ್ರದ ಮೂಲಕ ತೆಲುಗು, ತಮಿಳು ಇಂಡಸ್ಟ್ರಿಗೂ ಕಾಲಿಡ್ತಿರುವ ಯಶ್ ಗೆ ಸೌತ್ ಸಿನಿದುನಿಯಾದಲ್ಲಿ ಕ್ರೇಜ್ ಹೆಚ್ಚಿದೆ. ತಮಿಳುನಾಡು, ಆಂಧ್ರ ಪ್ರದೇಶಗಳಲ್ಲಿ ರಾಜಾಹುಲಿಯ ಅಭಿಮಾನಿಗಳಿದ್ದಾರೆ.

ಹೀಗೆ, ದಕ್ಷಿಣ ಭಾರತದಲ್ಲಿ ಹವಾ ಮಾಡ್ತಿರುವ ಯಶ್ ಗೊಬ್ಬರು ಕಾಲಿವುಡ್ ನಲ್ಲಿ ಬ್ರದರ್ ಇದ್ದಾರೆ ಎಂಬುದು ಈಗ ಗಮನ ಸೆಳೆಯುತ್ತಿದೆ. ಇಷ್ಟು ದಿನ ಚಂದನವನದ ಅಣ್ತಮ್ಮಂದಿರ ಜೊತೆ ಕಾಣಿಸಿಕೊಳ್ಳುತ್ತಿದ್ದ 'ಮಾಸ್ಟರ್ ಪೀಸ್' ತಮಿಳು ಬ್ರದರ್ ಜೊತೆ ಸ್ನೇಹದ ಭಾವುಟ ಹಾರಿಸುತ್ತಿದ್ದಾರೆ. ಅಷ್ಟಕ್ಕೂ ಯಾರದು ತಮಿಳುನಾಡಿನ ಅಣ್ತಮ್ಮ.? ಮುಂದೆ ಓದಿ....

ವಿಶಾಲ್ ಮತ್ತು ಯಶ್ ಅಣ್ತಮ್ಮ

ವಿಶಾಲ್ ಮತ್ತು ಯಶ್ ಅಣ್ತಮ್ಮ

ತಮಿಳು ನಟ ವಿಶಾಲ್ ಕರ್ನಾಟಕದಲ್ಲೂ ಹೆಚ್ಚು ಜನಪ್ರಿಯ. ತಮಿಳು ನಿರ್ಮಾಪಕರ ಸಂಘದ ಅಧ್ಯಕ್ಷನಾಗಿರುವ ವಿಶಾಲ್, ಕಾಲಿವುಡ್ ನಲ್ಲಿ ತನ್ನದೇ ಅಭಿನಯದಿಂದ ವಿಶೇಷ ಅಭಿಮಾನಿ ಬಳಗ ಹೊಂದಿರುವ ನಟ. ಈ ನಟ ಮತ್ತು ನಮ್ಮ ಯಶ್ ಇಬ್ಬರು ಅಣ್ತಮ್ಮಸ್ ಎಂಬುದು ಈಗ ಇಂಟ್ರೆಸ್ಟಿಂಗ್.

ಬ್ರದರ್ ಚಿತ್ರಕ್ಕೆ ವಿಶ್ ಮಾಡಿದ ರಾಮಾಚಾರಿ

ಬ್ರದರ್ ಚಿತ್ರಕ್ಕೆ ವಿಶ್ ಮಾಡಿದ ರಾಮಾಚಾರಿ

ತಮಿಳು ನಟ ವಿಶಾಲ್ ಅಭಿನಯಿಸುತ್ತಿರುವ 'ಸಂಡೈಕೋಳಿ-2' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಟ್ರೈಲರ್ ನ್ನ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಶೇರ್ ಮಾಡಿರುವ ಯಶ್, ''ನನ್ನ ಸಹೋದರನ 25ನೇ ಚಿತ್ರದ ಟ್ರೈಲರ್. ತುಂಬಾ ಇಂಟ್ರೆಸ್ಟಿಂಗ್ ಆಗಿದೆ. ಎಲ್ಲರಿಗೂ ಇಷ್ಟವಾಗುತ್ತೆ. ಅವರಿಗೆ ಸಪೋರ್ಟ್ ಮಾಡಿ'' ಎಂದು ವಿಶ್ ಮಾಡಿದ್ದಾರೆ.

ಕೆಜಿಎಫ್ ಗೆ ಸಾಥ್ ನೀಡಿದ್ದ ವಿಶಾಲ್

ಕೆಜಿಎಫ್ ಗೆ ಸಾಥ್ ನೀಡಿದ್ದ ವಿಶಾಲ್

ಈ ಹಿಂದೆ ರಾಕಿಂಗ್ ಸ್ಟಾರ್ ಅಭಿನಯಿಸುತ್ತಿರುವ ಬಹುಭಾಷಾ ಮತ್ತು ಬಹುಕೋಟಿ ಚಿತ್ರ 'ಕೆಜಿಎಫ್' ರಿಲೀಸ್ ದಿನಾಂಕವನ್ನ ಬಹಿರಂಗಪಡಿಸಿದ್ದು ಇದೇ ವಿಶಾಲ್. ತೆಲುಗು ಮತ್ತು ತಮಿಳು ಭಾಷೆಯಲ್ಲಿ 'ಕೆಜಿಎಫ್' ಚಿತ್ರದ ಟ್ರೈಲರ್ ಮತ್ತು ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದರು.

ಅಕ್ಟೋಬರ್ ಅಣ್ತಮ್ಮಂದಿರಿಗೆ ಖುಷಿ

ಅಕ್ಟೋಬರ್ ಅಣ್ತಮ್ಮಂದಿರಿಗೆ ಖುಷಿ

ಅಕ್ಟೋಬರ್ 14 ರಂದು ಯಶ್ ಅವರ 'ಕೆಜಿಎಫ್' ಸಿನಿಮಾದ ಟ್ರೈಲರ್ ರಿಲೀಸ್ ಆಗುತ್ತಿದೆ. ಸಿನಿಮಾ ನವೆಂಬರ್ 16 ರಂದು ತೆರೆಕಾಣಲಿದೆ. ಇನ್ನು ಅಕ್ಟೋಬರ್ 18 ರಂದು ವಿಶಾಲ್ ಅಭಿನಯದ 'ಸಂಡೈಕೋಳಿ-2' ಸಿನಿಮಾ ರಿಲೀಸ್ ಆಗುತ್ತಿದೆ.

More from Filmibeat

English summary
Kannada actor yash has taken his facebook account to wish tamil actor vishal 25th movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X