ಯಶ್ - ದಿಗಂತ್ ಇಬ್ಬರ ಕಥೆ ಶುರುವಾಗಿದ್ದು ಸಖತ್ ಇಂಟ್ರೆಸ್ಟಿಂಗ್
Recommended Video

ನಟ ಯಶ್ ಮತ್ತು ದಿಗಂತ್ ಇಬ್ಬರು ಒಳ್ಳೆಯ ಸ್ನೇಹಿತರು. ಅಂದಿನಿಂದ ಇಂದಿನವರೆಗೆ ಅವರ ಸ್ನೇಹ ಹಾಗೆಯೇ ಮುಂದುವರೆಯುತ್ತಿದೆ. ಇದೀಗ ತಮ್ಮ ಗೆಳೆಯ ದಿಗಂತ್ ಅವರ 'ಕಥೆಯೊಂದು ಶುರುವಾಗಿದೆ' ಸಿನಿಮಾಗೆ ಯಶ್ ಮನಸಾರೆ ಶುಭ ಹಾರೈಸಿದ್ದಾರೆ.
ಫೇಸ್ ಬುಕ್ ಲೈವ್ ನಲ್ಲಿ 'ಕಥೆಯೊಂದು ಶುರುವಾಗಿದೆ' ಚಿತ್ರಕ್ಕೆ ವಿಶ್ ಮಾಡಿದ ಯಶ್ ಬಳಿಕ ತಮ್ಮ ಹಾಗೂ ದಿಗಂತ್ ಸ್ನೇಹ ಹೇಗೆ ಶುರು ಆಯ್ತು ಎಂಬುದನ್ನು ತಿಳಿಸಿದ್ದಾರೆ. ಅಂದಹಾಗೆ, ಈ ಇಬ್ಬರು ನಟರು ಮೊದಲು ಭೇಟಿಯಾಗಿದ್ದು, 'ಮೊಗ್ಗಿನ ಮನಸು' ಚಿತ್ರದ ಚಿತ್ರೀಕರಣ ವೇಳೆ ಅಂತೆ.

ಆ ವೇಳೆಗೆ ಆಗಲೇ 'ಮುಂಗಾರು ಮಳೆ' ಸಿನಿಮಾ ಬಂದು ಸೂಪರ್ ಹಿಟ್ ಆಗಿತ್ತು. ಆ ಚಿತ್ರದ ನಿರ್ಮಾಪಕರೆ 'ಮೊಗ್ಗಿನ ಮನಸು' ಸಿನಿಮಾವನ್ನು ಮಾಡುತ್ತಿದ್ದರು. ಹಾಗಾಗಿ 'ಮೊಗ್ಗಿನ ಮನಸು' ಶೂಟಿಂಗ್ ನೋಡಲು ಬಂದಿದ್ದ ದಿಗಂತ್ ಗೆ ಯಶ್ ಪರಿಚಯ ಆಯ್ತು. ಆ ಬಳಿಕ 'ಅಮೃತ ಮಹೋತ್ಸವ' ಕಾರ್ಯಕ್ರಮದಿಂದ ಇಬ್ಬರ ಸ್ನೇಹ ಗಟ್ಟಿಯಾಗಿದೆ. ಇಂದಿಗೂ ಅವರ ಸ್ನೇಹ ಹಾಗೆಯೇ ಉಳಿದಿದೆ.
ಅಂದಹಾಗೆ, ಕಳೆದ ಶುಕ್ರವಾರ ಬಿಡುಗಡೆಯಾಗಿರುವ 'ಕಥೆಯೊಂದು ಶುರುವಾಗಿದೆ' ಸಿನಿಮಾಗೆ ದೊಡ್ಡ ಪ್ರತಿಕ್ರಿಯೆ ಸಿಕ್ಕಿದೆ. ವಿಮರ್ಶಕರು ಸಿನಿಮಾವನ್ನು ಬಹಳ ಇಷ್ಟ ಪಟ್ಟಿದ್ದಾರೆ.


Click it and Unblock the Notifications











