twitter
    For Quick Alerts
    ALLOW NOTIFICATIONS  
    For Daily Alerts

    ಯಶ್ - ದಿಗಂತ್ ಇಬ್ಬರ ಕಥೆ ಶುರುವಾಗಿದ್ದು ಸಖತ್ ಇಂಟ್ರೆಸ್ಟಿಂಗ್

    By Naveen
    |

    Recommended Video

    ದೋಸ್ತಿ ಬಗ್ಗೆ ಯಶ್ ಮಾತನಾಡಿದ್ದು ಏನು..? | Filmibeat Kannada

    ನಟ ಯಶ್ ಮತ್ತು ದಿಗಂತ್ ಇಬ್ಬರು ಒಳ್ಳೆಯ ಸ್ನೇಹಿತರು. ಅಂದಿನಿಂದ ಇಂದಿನವರೆಗೆ ಅವರ ಸ್ನೇಹ ಹಾಗೆಯೇ ಮುಂದುವರೆಯುತ್ತಿದೆ. ಇದೀಗ ತಮ್ಮ ಗೆಳೆಯ ದಿಗಂತ್ ಅವರ 'ಕಥೆಯೊಂದು ಶುರುವಾಗಿದೆ' ಸಿನಿಮಾಗೆ ಯಶ್ ಮನಸಾರೆ ಶುಭ ಹಾರೈಸಿದ್ದಾರೆ.

    ಫೇಸ್ ಬುಕ್ ಲೈವ್ ನಲ್ಲಿ 'ಕಥೆಯೊಂದು ಶುರುವಾಗಿದೆ' ಚಿತ್ರಕ್ಕೆ ವಿಶ್ ಮಾಡಿದ ಯಶ್ ಬಳಿಕ ತಮ್ಮ ಹಾಗೂ ದಿಗಂತ್ ಸ್ನೇಹ ಹೇಗೆ ಶುರು ಆಯ್ತು ಎಂಬುದನ್ನು ತಿಳಿಸಿದ್ದಾರೆ. ಅಂದಹಾಗೆ, ಈ ಇಬ್ಬರು ನಟರು ಮೊದಲು ಭೇಟಿಯಾಗಿದ್ದು, 'ಮೊಗ್ಗಿನ ಮನಸು' ಚಿತ್ರದ ಚಿತ್ರೀಕರಣ ವೇಳೆ ಅಂತೆ.

    yash wishes to katheyondu shuruvaagide kannada movie

    'ಕಥೆಯೊಂದು ಶುರುವಾಗಿದೆ' ವಿಮರ್ಶೆ: ಇದು ದಿಗಂತ್ ಕಮ್ ಬ್ಯಾಕ್ ಸಿನಿಮಾ'ಕಥೆಯೊಂದು ಶುರುವಾಗಿದೆ' ವಿಮರ್ಶೆ: ಇದು ದಿಗಂತ್ ಕಮ್ ಬ್ಯಾಕ್ ಸಿನಿಮಾ

    ಆ ವೇಳೆಗೆ ಆಗಲೇ 'ಮುಂಗಾರು ಮಳೆ' ಸಿನಿಮಾ ಬಂದು ಸೂಪರ್ ಹಿಟ್ ಆಗಿತ್ತು. ಆ ಚಿತ್ರದ ನಿರ್ಮಾಪಕರೆ 'ಮೊಗ್ಗಿನ ಮನಸು' ಸಿನಿಮಾವನ್ನು ಮಾಡುತ್ತಿದ್ದರು. ಹಾಗಾಗಿ 'ಮೊಗ್ಗಿನ ಮನಸು' ಶೂಟಿಂಗ್ ನೋಡಲು ಬಂದಿದ್ದ ದಿಗಂತ್ ಗೆ ಯಶ್ ಪರಿಚಯ ಆಯ್ತು. ಆ ಬಳಿಕ 'ಅಮೃತ ಮಹೋತ್ಸವ' ಕಾರ್ಯಕ್ರಮದಿಂದ ಇಬ್ಬರ ಸ್ನೇಹ ಗಟ್ಟಿಯಾಗಿದೆ. ಇಂದಿಗೂ ಅವರ ಸ್ನೇಹ ಹಾಗೆಯೇ ಉಳಿದಿದೆ.

    ಅಂದಹಾಗೆ, ಕಳೆದ ಶುಕ್ರವಾರ ಬಿಡುಗಡೆಯಾಗಿರುವ 'ಕಥೆಯೊಂದು ಶುರುವಾಗಿದೆ' ಸಿನಿಮಾಗೆ ದೊಡ್ಡ ಪ್ರತಿಕ್ರಿಯೆ ಸಿಕ್ಕಿದೆ. ವಿಮರ್ಶಕರು ಸಿನಿಮಾವನ್ನು ಬಹಳ ಇಷ್ಟ ಪಟ್ಟಿದ್ದಾರೆ.

    English summary
    Kannada actor Yash wishes to Diganth's 'Katheyondu Shuruvaagide' kannada movie.
    Wednesday, August 8, 2018, 15:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X