ರಾಯಚೂರಿನ ನಂತರ ಬೀದರ್ ಜನರಿಗೆ ನೆರವಾದ ಯಶೋಮಾರ್ಗ
Recommended Video
ರಾಜ್ಯದ ಹಲವು ಜಿಲ್ಲೆಗಳಲ್ಲಿ ಬೀಕರ ಬರಗಾಲ ಎದುರಾಗಿದೆ. ಜನರಿಗೆ ಹಾಗೂ ಪ್ರಾಣಿ ಪಕ್ಷಿಗಳಿಗೆ ಕುಡಿಯಲು ನೀರಿಲ್ಲದ ಸ್ಥಿತಿ ಅನೇಕ ಕಡೆ ನಿರ್ಮಾಣವಾಗಿದೆ. ನೀರಿಗಾಗಿ ಕಿಲೋಮೀಟರ್ ಗಟ್ಟಲೆ ಅಲೆದಾಡುವಂತಾಗಿದೆ. ಬಿಂದಿಗೆ ನೀರಿಗಾಗಿ ಜನರು ಕಷ್ಟಪಡುತ್ತಿದ್ದಾರೆ.
ಇಂತಹ ಕಷ್ಟಕರ ಸಮಯದಲ್ಲಿ ರಾಕಿಂಗ್ ಸ್ಟಾರ್ ಯಶ್ ಜನರ ಮತ್ತು ಪ್ರಾಣಿ ಪಕ್ಷಿಗಳ ನೀರಿನ ದಾಹ ತೀರಿಸುತ್ತಿದ್ದಾರೆ. ಹೌದು, ಯಶೋಮಾರ್ಗ ಫೌಂಡೇಶನ್ ಮೂಲಕ ಬರಗಾಲದ ಪ್ರದೇಶಗಳಿಗೆ ತೆರಳಿ ನೀರು ಸರಬರಾಜು ಮಾಡುವ ಮೂಲಕ ಜನರ ಸಹಾಯಕ್ಕೆ ನಿಂತಿದ್ದಾರೆ.
ಯಶೋಮಾರ್ಗ ಇತ್ತೀಚಿಗಷ್ಟೆ ರಾಯಚೂರಿನ ಹಳ್ಳಿ ಹಳ್ಳಿಗಳಿಗೆ ತೆರಳಿ ಟ್ಯಾಂಕರ್ ಗಳ ಮೂಲಕ ಕುಡಿಯುವ ನೀರಿನ ಸರಬರಾಜು ಮಾಡಿತ್ತು. ಈಗ ಬೀದರ್ ಜನರ ನೀರಿನ ದಾಹವನ್ನು ತೀರಿಸಲು ಮುಂದಾಗಿದೆ. ಬೀದರ್ ನ ಅನೇಕ ಗ್ರಾಮಗಳಲ್ಲಿ ನೀರಿಲ್ಲದೆ ಜನ ಪರದಾಡುತ್ತಿದ್ದಾರೆ.

ಜನರ ಕಷ್ಟಕ್ಕೆ ಸ್ಪಂದಿಸಿದ ಯಶೋಮಾರ್ಗ ಬೀದನ್ ನ ಅನೇಕ ಗ್ರಾಮಗಳಿಗೆ ತೆರಳಿ ಟ್ಯಾಂಕರ್ ಗಳ ಮೂಲಕ ನೀರನ್ನು ಕೊಂಡೊಯ್ದು, ಅಲ್ಲಿನ ಜನರಿಗೆ ಕುಡಿಯುವ ನೀರಿನ ಸರಬರಾಜು ಮಾಡಿದೆ.
ಈ ಬಗ್ಗೆ ಯಶೋಮಾರ್ಗ ಅಧಿಕೃತ ಫೇಸ್ ಬುಕ್ ಪೇಜ್ ನಲ್ಲಿ ಮಾಹಿತಿ ಹಂಚಿಕೊಂಡಿದೆ. "ಇಂದು ಬೀದರ್ ಜಿಲ್ಲೆಯಬೋರಳ ಗ್ರಾಮದಲ್ಲಿ ಯಶೋಮಾರ್ಗ ವತಿದಿಂದ ಟ್ಯಾಂಕರ್ ಗಳ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ..!
ನೀರಿನ ಟ್ಯಾಂಕರ್ ಗಳು ಬೀದರ್ ನ ಗ್ರಾಮವನ್ನು ಪ್ರವೇಶಿಸುತ್ತಿದ್ದಂತೆ ಜನ ಬಿಂದಿಗೆಳನ್ನು ಹಿಡಿದು ನೀರಿನ ಟ್ಯಾಂಕರ್ ಗೆ ಮುತ್ತಿಗೆ ಹಾಕಿದ್ದರು. ಹನಿ ನೀರಿಗಾಗಿ ಪರದಾಡುತ್ತಿದ್ದ ಜನಕ್ಕೆ ಯಶೋಮಾರ್ಗ ನೀರಿನ ಟ್ಯಾಕರ್ ನೋಡಿ ನಿಟ್ಟುಸಿರು ಬಿಟ್ಟಿದ್ದಾರೆ. ನೀರಿನ ದಾಹತೀರಿಸಲೆಂದೆ ರಾಕಿಂಗ್ ಸ್ಟಾರ್ ಯಶ್ ನಿರ್ಮಾಣ ಮಾಡಿದ ಫೌಂಡೇಶನ್ ಯಶೋಮಾರ್ಗ. ಈ ಫೌಂಡೇಶನ್ ಉತ್ತಮ ರೀತಿಯಲ್ಲಿ ಕೆಲಸ ಮಾಡುವ ಮೂಲಕ ಮಾದರಿಯಾಗಿದೆ.


Click it and Unblock the Notifications











