Yash19: ಯಶ್‌- ಗೀತು ಕಾಂಬಿನೇಷನ್ ಫಿಕ್ಸ್: ಸಿನಿಮಾ ಟೈಟಲ್ ಕೂಡ ಘೋಷಣೆ ಆಯ್ತು

ರಾಕಿಂಗ್ ಫ್ಯಾನ್ಸ್ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಯಶ್‌19 ಸಿನಿಮಾ ಬಿಗ್‌ ಅಪ್‌ಡೇಟ್ ಬಂದಿದೆ. ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾ ಯಾವ್ದು? ಟೈಟಲ್ ಏನು? ನಿರ್ಮಾಪಕರು ಯಾರು? ನಿರ್ದೇಶಕರು ಯಾರು? ಎನ್ನುವ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಹೇಳಿದಂತೆಯೇ ಯಶ್‌19 ಟೈಲ್ ರಿವೀಲ್ ಆಗಿದೆ.

4 ದಿನಗಳ ಹಿಂದೆಯಷ್ಟೆ ಯಶ್ ತಮ್ಮ ಮುಂದಿನ ಸಿನಿಮಾ ಅಪ್‌ಡೇಟ್ ಕೊಟ್ಟಿದ್ದರು. ಕೆವಿಎನ್ ಪ್ರೊಡಕ್ಷನ್‌ ಬ್ಯಾನರ್‌ನಲ್ಲಿ ನನ್ನ ಮುಂದಿನ ಸಿನಿಮಾ. ಡಿಸೆಂಬರ್ 8ಕ್ಕೆ ಟೈಟಲ್ ಅನೌನ್ಸ್‌ಮೆಂಟ್ ಎಂದಿದ್ದರು. ಈ ಸುದ್ದಿ ಕೇಳಿ ಯಶ್ ಅಭಿಮಾನಿಗಳು ಥ್ರಿಲ್ಲಾಗಿದ್ದರು. 599 ದಿನಗಳ ಬಳಿಕ ಯಶ್ ಮುಂದಿನ ಸಿನಿಮಾ ಅಪ್‌ಡೇಟ್ ಕೊಟ್ರು ಎಂದು ಖುಷಿಯಾಗಿದ್ದರು.

Yash19: KGF actor yash next film Toxic title announcement teaser out

ಬಹಳ ದಿನಗಳಿಂದ ಯಶ್‌19 ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣ ಮಾಡುತ್ತದೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಅದನ್ನು ಈಗಾಗಲೇ ಯಶ್ ಖಚಿತಪಡಿಸಿದ್ದರು. ಇದೀಗ ಚಿತ್ರಕ್ಕೆ 'ಟಾಕ್ಸಿಕ್' ಎನ್ನುವ ಟೈಟಲ್ ಫೈನಲ್ ಮಾಡಿದೆ ಚಿತ್ರತಂಡ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಎಲ್ಲಾ ಭಾಷೆಗಳಿಗೂ ಸೂಕ್ತ ಆಗುವಂತೆ ಒಂದೇ ಟೈಟಲ್‌ ಆಯ್ಕೆ ಮಾಡಿದೆ.

ಬಹಳ ದಿನಗಳಿಂದ ಯಶ್ ಮುಂದಿನ ಚಿತ್ರಕ್ಕೆ ಗೀತು ಮೋಹನ್ ದಾಸ್ ಆಕ್ಷನ್ ಕಟ್ ಹೇಳ್ತಾರೆ ಎನ್ನಲಾಗ್ತಿತ್ತು. ಅದು ಈಗ ಕನ್ಫರ್ಮ್ ಆಗಿದೆ. ಇನ್ನು ಟೈಟಲ್ ಟೀಸರ್ ನೋಡುತ್ತಿದ್ದರೆ ಇದು ಡ್ರಗ್ಸ್ ಮಾಫಿಯಾ ಕುರಿತಾದ ಕಥೆ ಎನ್ನುವ ಸುಳಿವು ಸಿಗುತ್ತಿದೆ. 60,70ರ ದಶಕದ ಗೋವಾ ಡ್ರಗ್ಸ್ ಮಾಫಿಯಾ ಕಥೆಯ ಸಿನಿಮಾದಲ್ಲಿ ಯಶ್ ನಟಿಸುತ್ತಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಅದೇ ಈಗ ನಿಜವಾಗುವಂತೆ ಕಾಣುತ್ತಿದೆ.

"ನೀವು ಹುಡುಕುತ್ತಿರುವುದು ನಿಮ್ಮನ್ನು ಹುಡುಕುತ್ತದೆ" ಎನ್ನುವ ಕವಿ ರೂಮಿ ಸಾಲುಗಳನ್ನು ಬರೆದು ಯಶ್ ತಮ್ಮ ಮುಂದಿನ ಸಿನಿಮಾ ಟೈಟಲ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ವಯಸ್ಕರಿಗೆ ಒಂದು ಕಾಲ್ಪನಿಕ ಕತೆ ಕೂಡ ಆಗಿದೆ" ಎಂದು ಬರೆದು ಕುತೂಹಲ ಮೂಡಿಸಿದ್ದಾರೆ.

ಇನ್ನು 'ಟಾಕ್ಸಿಕ್' ಸಿನಿಮಾ ಟೈಟಲ್ ಜೊತೆಗೆ ರಿಲೀಸ್ ಡೇಟ್ ಕೂಡ ಘೋಷಣೆಯಾಗಿದೆ. 2025, ಏಪ್ರಿಲ್ 10ರಂದು ಸಿನಿಮಾ ತೆರೆಗೆ ಬರಲಿದೆ. ಹೆಚ್ಚು ಕಡಿಮೆ 2 ವರ್ಷಗಳ ಬಳಿಕ ಮತ್ತೆ ಯಶ್ ಶೂಟಿಂಗ್ ಅಖಾಡಕ್ಕೆ ಇಳಿಯಲಿದ್ದಾರೆ. 'ಟಾಕ್ಸಿಕ್' ಅಂದರೆ ವಿಷಪೂರಿತ ಎನ್ನುವ ಅರ್ಥ ಬರುತ್ತದೆ. ಒಟ್ನಲ್ಲಿ ಅಭಿಮಾನಿಗಳಂತೂ ಯಶ್‌ 19ನೇ ಸಿನಿಮಾ ಅಪ್‌ಡೇಟ್‌ ಕೇಳಿ ಖುಷಿಯಾಗಿದ್ದಾರೆ.

'KGF' ಸರಣಿ ಸಿನಿಮಾಗಳಿಂದ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕ್ಕೇರಿದ್ದಾರೆ. ರಾಕಿಂಗ್ ಸ್ಟಾರ್ ಸಿನಿಮಾಗಾಗಿ ಪರಭಾಷಾ ಪ್ರೇಕ್ಷಕರು ಕಾಯುತ್ತಿದ್ದಾರೆ. 'KGF'-2 ಬಳಿಕ ಯಶ್ ಏನ್ ಮಾಡ್ತಾರೆ? ಎನ್ನುವ ಪ್ರಶ್ನೆ ಸಾಕಷ್ಟು ಜನರ ತಲೆಕೆಡಿಸಿತ್ತು. ಕೊನೆಗೂ ಅದಕ್ಕೆ ಉತ್ತರ ಸಿಕ್ಕಿದೆ. ಈ ಬಾರಿ ಹಾಲಿವುಡ್‌ ರೇಂಜ್ ಚಿತ್ರಕ್ಕೆ ಯಶ್ ಪ್ಲ್ಯಾನ್ ಮಾಡಿದ್ದಾರೆ.

ಟೈಟಲ್‌, ಸ್ಟೋರಿಲೈನ್‌ನಿಂದಲೇ 'ಟಾಕ್ಸಿಕ್' ಸಿನಿಮಾ ಭಾರೀ ಕುತೂಹಲ ಮೂಡಿಸಿದೆ. 'KGF'-2 ಬ್ಲಾಕ್‌ಬಸ್ಟರ್ ಬೆನ್ನಲ್ಲೇ ಯಶ್ ಮುಂದಿನ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗಿತ್ತು. ಸಾಮಾನ್ಯವಾಗಿ ಸ್ಟಾರ್ ನಟರು ಒಂದು ಸಿನಿಮಾ ಮುಗಿಯೋಕು ಮುನ್ನ ಮತ್ತೊಂದು ಸಿನಿಮಾ ಒಪ್ಪಿಕೊಳ್ಳುತ್ತಾರೆ. ಕೆಲವೊಮ್ಮೆ ಸಿನಿಮಾ ಆರಂಭಿಸುತ್ತಾರೆ. ಆದರೆ ಯಶ್ ಮಾತ್ರ ಚಾಪ್ಟರ್‌-2 ಬಂದೋಗಿ ಒಂದೂವರೆ ವರ್ಷ ಯಾವುದೇ ಸಿನಿಮಾ ಘೋಷಿಸಿರಲಿಲ್ಲ.

ತೆರೆಮರೆಯಲ್ಲಿ ತಮ್ಮ 19ನೇ ಸಿನಿಮಾಗಾಗಿ ತಯಾರಿ ನಡೆಸುತ್ತಿದ್ದ ಯಶ್ ಕೊನೆಗೂ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ. ಅಡುಗೆ ಬೇಯುವರೆಗೂ ಬಡಿಸಬಾರದು ಎನ್ನುತ್ತಿದ್ದ ಯಶ್ ಕೊನೆಗೂ ಎಲ್ಲಾ ಖಚಿತವಾದ ಮೇಲೆ ಸಿನಿಮಾ ಅನೌನ್ಸ್ ಮಾಡಿದ್ದಾರೆ. 'KGF' ರಾಕಿಭಾಯ್ ಛಾಯೆಯಿಂದ ಹೊರಬಂದು ಯಶ್ ಸಿನಿಮಾ ಮಾಡಬೇಕಿದೆ. ಹಾಗಾಗಿ ಅದಕ್ಕೆ ತಕ್ಕಂತ ಕತೆಯ ಹುಡುಕಾಟದಲ್ಲಿದ್ದರು. ಆದರೆ ನಾನು ಯಾವುದೇ ಒತ್ತಡದಲ್ಲಿ ಇಲ್ಲ ಎಂದು ಹೇಳಿಕೊಂಡಿದ್ದರು.

More from Filmibeat

English summary
Toxic Title Announcement Teaser: Yash and geethu mohandas Announce Their Film With a Quirky Promo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X