Yash19: ಅಂತೂ ಇಂತೂ ಯಶ್‌19 ಅಪ್‌ಡೇಟ್ ಬಂತು: ಅಭಿಮಾನಿಗಳ ಲೆಕ್ಕಾಚಾರ ನಿಜವಾಯ್ತು!

ರಾಕಿಂಗ್ ಸ್ಟಾರ್ ಅಭಿಮಾನಿಗಳು ಕಾಯ್ತಿದ್ದ ಆ ಟೈಮ್ ಬಂದೇಬಿಡ್ತು. ಕೊನೆಗೂ ತಮ್ಮ ಮುಂದಿನ ಸಿನಿಮಾ ಬಗ್ಗೆ ಯಶ್ ಮೌನ ಮುರಿದಿದ್ದಾರೆ. ಅಧಿಕೃತವಾಗಿ ತಮ್ಮ 19ನೇ ಸಿನಿಮಾ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಒಂದೂವರೆ ವರ್ಷದಿಂದ ಕಾಯುತ್ತಿದ್ದ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಕೆವಿಎನ್‌ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಮುಂದಿನ ಸಿನಿಮಾ ಎಂದು ಯಶ್ ಘೋಷಿಸಿದ್ದಾರೆ. ಡಿಸೆಂಬರ್ 8ರಂದು ಮುಂದಿನ ಸಿನಿಮಾ ಟೈಟಲ್ ಸೇರಿದಂತೆ ಮತ್ತಷ್ಟು ಮಾಹಿತಿ ಹಂಚಿಕೊಳ್ಳುವುದಾಗಿ ಹೇಳಿದ್ದಾರೆ. ಅಲ್ಲಿಗೆ ಅಭಿಮಾನಿಗಳ ಲೆಕ್ಕಾಚಾರ ನಿಜವಾಗಿದೆ. ಹಲವು ದಿನಗಳಿಂದ ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಯಶ್ ಮುಂದಿನ ಸಿನಿಮಾ ಎನ್ನುವ ಗುಸುಗುಸು ಕೇಳಿಬಂದಿತ್ತು. ಅದು ಈಗ ಪಕ್ಕಾ ಆದಂತಾಗಿದೆ.

Yash19: KGF actor Yashs next with KVN Productions will be announced on 8th December

ಯಶ್‌19 ಅಪ್‌ಡೇಟ್‌ಗಾಗಿ ಅಭಿಮಾನಿಗಳು ಕಾದು ಕಾದು ಸುಸ್ತಾಗಿದ್ದರು. ಸಿನಿಮಾ ಬಗ್ಗೆ ಯೋಚಿಸುವುದನ್ನೇ ಬಿಟ್ಟುಬಿಟ್ಟಿದ್ದರು. ಇನ್ನು ಕಾಯಿಸಿದರೆ ತಪ್ಪಾಗುತ್ತದೆ ಎಂದು ನಿರ್ಧರಿಸಿರುವ ಯಶ್ ಅಪ್‌ಡೇಟ್ ಕೊಟ್ಟುಬಿಟ್ಟಿದ್ದಾರೆ. ಅಭಿಮಾನಿಗಳು ಸುದ್ದಿ ಕೇಳಿ ಥ್ರಿಲ್ ಆಗಿದ್ದು ಯಾವಾಗ ಡಿಸೆಂಬರ್ 8 ಬರುತ್ತೋ ಎಂದು ಕಾಯುತ್ತಿದ್ದಾರೆ.

'KGF'ಚಾಪ್ಟರ್-2 ಸಿನಿಮಾ ಬಿಡುಗಡೆಯಾಗಿ 599 ದಿನಳ ಬಳಿಕ ಯಶ್ ತಮ್ಮ ಮುಂದಿನ ಸಿನಿಮಾ ಬಗ್ಗೆ ಅಪ್‌ಡೇಟ್ ಕೊಟ್ಟಿದ್ದಾರೆ. ಡಿಸೆಂಬರ್ 8ರಂದು ಬೆಳಗ್ಗೆ 9 ಗಂಟೆ 55 ನಿಮಿಷಕ್ಕೆ ಯಶ್‌19 ಟೈಟಲ್ ಅನೌನ್ಸ್ ಮಾಡುವುದಾಗಿ ಹೇಳಿದ್ದಾರೆ. ಇತ್ತೀಚೆಗೆ ಕೆವಿಎನ್‌ ಪ್ರೊಡಕ್ಷನ್ಸ್ ಸಂಸ್ಥೆ ತನ್ನ ಸೋಶಿಯಲ್ ಮೀಡಿಯಾ ಖಾತೆಗಳಿಗೆ ಬ್ಲೂ ಟಿಕ್ ಪಡೆದಿತ್ತು. ಅದನ್ನು ನೋಡಿ ಅಭಿಮಾನಿಗಳು ಯಶ್‌19 ಅಪ್‌ಡೇಟ್ ಬರ್ತಿದೆ. ಕೆವಿಎನ್ ಪ್ರೊಡಕ್ಷನ್‌ನಲ್ಲೇ ಸಿನಿಮಾ ನಿರ್ಮಾಣವಾಗುತ್ತದೆ ಎಂದಿದ್ದರು. ಅಭಿಮಾನಿಗಳ ಊಹೆಯಂತೆ ಯಶ್‌-ಕೆವಿಎನ್ ಕಾಂಬಿನೇಷನ್‌ನಲ್ಲಿ ಯಶ್‌19 ಸಿನಿಮಾ ನಿರ್ಮಾಣವಾಗಲಿದೆ.

ಇನ್ನು ಯಶ್‌19 ಚಿತ್ರಕ್ಕೆ ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ ದಾಸ್ ಆಕ್ಷನ್ ಕಟ್ ಹೇಳ್ತಾರೆ ಎನ್ನುವ ಮಾತುಗಳು ಬಹಳ ದಿನಗಳಿಂದ ಕೇಳಿಬರ್ತಿದೆ. ಇನ್ನು ಸೆನ್ಸೇಷನಲ್ ಸಂಗೀತ ನಿರ್ದೇಶಕ ಚರಣ್ ರಾಜ್ ಚಿತ್ರಕ್ಕೆ ಟ್ಯೂನ್ ಹಾಕುತ್ತಾರೆ ಎನ್ನುವ ಚರ್ಚೆ ಕೂಡ ನಡೀತಿದೆ. ಇದೂ ಕೂಡ ನಿಜವಾಗುತ್ತಾ ಕಾದು ನೋಡಬೇಕಿದೆ.

'KGF' ಸರಣಿ ಸಿನಿಮಾಗಳಿಂದ ಯಶ್ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆಗಿದ್ದಾರೆ. ಅಕ್ಕಪಕ್ಕದ ರಾಜ್ಯಗಳಲ್ಲಿ ಯಶ್ ಅಭಿಮಾನಿ ಸಂಘಗಳು ಹುಟ್ಟಿಕೊಂಡಿವೆ. ಹಾಗಾಗಿ ಮುಂದಿನ ಸಿನಿಮಾ ಬಗ್ಗೆ ಬೆಟ್ಟದಷ್ಟು ನಿರೀಕ್ಷೆಯಿದೆ. ಆ ನಿರೀಕ್ಷೆಗೆ ತಕ್ಕಂತ ಕತೆ ಬೇಕು ಎಂದು ರಾಕಿಂಗ್ ಸ್ಟಾರ್ ಇಷ್ಟು ದಿನ ಕಾಯ್ತಿದ್ದರು. ಅಭಿಮಾನಿಗಳನ್ನು ಕೂಡ ಕಾಯಿಸಿದ್ದರು. ಕೊನೆಗೂ ಅಂತಾದೊಂದು ಕತೆ ಸಿಕ್ಕಿದ್ದು ಇದೀಗ ಸಿನಿಮಾ ಮಾಡಲು ಮುಂದಾಗಿದ್ದಾರೆ.

ಯಶ್‌ ತಮ್ಮ ಮುಂದಿನ ಸಿನಿಮಾ ಬಗ್ಗೆ ಬಹಳ ಒತ್ತಡದಲ್ಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಯಶ್ ಅದನ್ನು ಒಪ್ಪಲಿಲ್ಲ. ಸಂದರ್ಶನವೊಂದರಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದರು. ಇನ್ನು 'ಸಲಾರ್' ಚಿತ್ರಕ್ಕೂ 'KGF' ಕತೆಗೂ ಲಿಂಕ್ ಇದೆ. ಹಾಗಾಗಿ 'ಸಲಾರ್' ಚಿತ್ರದಲ್ಲಿ ಯಶ್ ಗೆಸ್ಟ್ ಅಪಿಯರೆನ್ಸ್ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ಇದು ಸುಳ್ಳು ಎಂದು ಇತ್ತೀಚೆಗೆ ಪ್ರಶಾಂತ್ ನೀಲ್ ಹೇಳಿ ಯಶ್ ಅಭಿಮಾನಿಗಳಿಗೆ ಬೇಸರ ಉಂಟು ಮಾಡಿದ್ದರು.

ರಾಕಿಂಗ್ ಸ್ಟಾರ್ ಯಶ್ ಬಾಲಿವುಡ್‌ಗೆ ಹೋಗುವ ಬಗ್ಗೆಯೂ ಸಾಕಷ್ಟು ಚರ್ಚೆ ನಡೀತು. ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಚಿತ್ರದಲ್ಲಿ ಯಶ್ ರಾವಣನಾಗಿ ನಟಿಸುತ್ತಾರೆ ಎನ್ನಲಾಗ್ತಿದೆ. ಈ ಚಿತ್ರದಲ್ಲಿ ರಾಮನಾಗಿ ರಣ್‌ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ. ಆದರೆ ರಾವಣನಾಗಿ ಯಶ್ ನಟಿಸೋ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ.

More from Filmibeat

English summary
Yash is all set to announce the title of his next film in his birthday;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X