Yash19: ಹಾಲಿವುಡ್ ರೇಂಜ್ ಜಬರ್ದಸ್ತ್ ಪೋಸ್ಟರ್ ವೈರಲ್
ರಾಜ್ಯೋತ್ಸವ ಸಂಭ್ರಮದಲ್ಲಿ ಯಶ್19 ಅಪ್‌ಡೇಟ್ ಸಿಗುತ್ತೆ ಅಂತ ಅಭಿಮಾನಿಗಳೆಲ್ಲಾ ಕಾಯ್ತಿದ್ದಾರೆ. ಆದರೆ ಯಾಕೋ ಸದ್ಯಕ್ಕೆ ಆ ಲಕ್ಷಣಗಳು ಕಾಣುತ್ತಿಲ್ಲ. ಆ ಬಗ್ಗೆ ಯಾವುದೇ ಸುಳಿವು ಸಿಗುತ್ತಿಲ್ಲ. ನಿಜಕ್ಕೂ ಕನ್ನಡದ ಹಬ್ಬಕ್ಕೆ ಯಶ್ ಮುಂದಿನ ಸಿನಿಮಾ ಘೋಷಣೆ ಆಗುತ್ತಾ ಎನ್ನುವ ಅನುಮಾನ ಕೆಲವರನ್ನು ಕಾಡುತ್ತಿದೆ.
'KGF- 2' ಸಿನಿಮಾ ಬಂದೋಗಿ ಒಂದೂವರೆ ವರ್ಷ ಕಳೆದರೂ ರಾಕಿಂಗ್ ಸ್ಟಾರ್ ಹೊಸ ಸಿನಿಮಾ ಮಾತ್ರ ಸೆಟ್ಟೇರಲೇ ಇಲ್ಲ. ಕೆಲವರು ಲೇಟ್ ಆದರೂ ಲೇಟೆಸ್ಟ್ ಆಗಿ ಸಿನಿಮಾ ಬರುತ್ತೆ ಎನ್ನುವ ಲೆಕ್ಕಾಚಾರದಲ್ಲಿದ್ದಾರೆ. ಮತ್ತೆ ಕೆಲವರು ಸಿನಿಮಾ ಘೋಷಣೆ ಯಾವಾಗ? ಶುರುವಾಗೋದು ಯಾವಾಗ? ಶೂಟಿಂಗ ಮುಗಿಸಿ ಥಿಯೇಟರ್‌ಗೆ ಬರೋದು ಯಾವಾಗ? ಎಂದು ಯೋಚಿಸಿ ಸುಮ್ಮನಾಗುತ್ತಿದ್ದಾರೆ. ಇನ್ನು ಒಂದೂವರೆ ಅಥವಾ ಎರಡು ವರ್ಷ ತೆರೆಮೇಲೆ ರಾಕಿಭಾಯ್‌ನ ನೋಡೋಕೆ ಕಷ್ಟ ಕಷ್ಟ ಎನ್ನುತ್ತಿದ್ದಾರೆ.

ಯಶ್19 ಬಗ್ಗೆ ದಿನಕ್ಕೊಂದು ಸುದ್ದಿ ವೈರಲ್ ಆಗುತ್ತಲೇ ಇದೆ. ರಾಜೋತ್ಸವ ಅಥವ ದೀಪಾವಳಿಗೆ ಸಿನಿಮಾ ಘೋಷಣೆ ಆಗುತ್ತದೆ ಎನ್ನುವ ನಿರೀಕ್ಷೆ ಇದೆ. ತಪ್ಪಿದರೆ ಮುಂದಿನ ವರ್ಷ ಜನವರಿ 8ಕ್ಕೆ ಯಶ್ ಹುಟ್ಟುಹಬ್ಬಕ್ಕೆ ಸಿನಿಮಾ ಅಪ್‌ಡೇಟ್ ಸಿಗಬಹುದು ಎನ್ನುವವರು ಇದ್ದಾರೆ. ಟೀಸರ್ ಸಮೇತ ಯಶ್19 ಅಪ್‌ಡೇಟ್ ಸಿಗುತ್ತದೆ ಎನ್ನುವ ಮಾತುಗಳು ಇತ್ತೀಚೆಗೆ ಕೇಳಿಬಂದಿತ್ತು. ಆದರೆ ಯಾವಾಗ ಅನ್ನೋದು ಮಾತ್ರ ಮಿಲಿಯನ್ ಡಾಲರ್ ಪ್ರಶ್ನೆಯಾಗಿಯೇ ಉಳಿದಿದೆ.
ಇನ್ನು ಸೋಶಿಯಲ್ ಮೀಡಿಯಾದಲ್ಲಿ ಯಶ್19 ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಫ್ಯಾನ್ ಮೇಡ್ ಪೋಸ್ಟರ್‌ಗಳು ವೈರಲ್ ಆಗುತ್ತಿದೆ. ಅದರಲ್ಲೂ AI ಫೋಟೊಗಳು ಭಾರೀ ಸದ್ದು ಮಾಡುತ್ತಿವೆ. ಸದ್ಯ ಅಂಥದ್ದೇ ಫೋಟೊವೊಂದು ಇಂಟರ್‌ನೆಟ್ ಶೇಕ್ ಮಾಡ್ತಿದೆ. ಉದ್ದನೆಯ ತಲೆ ಕೂದಲನ್ನು ಕೆದರಿ ಬಿಟ್ಟು ಸ್ಟೈಲಿಶ್ ಲುಕ್‌ನಲ್ಲಿ ಯಶ್ ಸೋಫಾ ಮೇಲೆ ಕುಳಿತಿರುವ ಫೋಟೊ ಸಖತ್ ಸದ್ದು ಮಾಡ್ತಿದೆ. 'KGF- 2' ರಾಕಿ ಭಾಯ್ ಮುಂದುವರೆದ ಭಾಗ ಎನ್ನುವಂತೆ ನೀಲಿ ಬಣ್ಣದ ಸೂಟ್ ಧರಿಸಿರುವ ಯಶ್ ಹಿಂದೆ ಹೊಗೆ ಏಳುವಂತೆ AI ಜನರೇಟೆಡ್ ಪೋಸ್ಟರ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ.
ಈ ಪೋಸ್ಟರ್ ನೋಡಿದವರು ಅಪ್ಪಿ ತಪ್ಪಿ ಯಶ್19 ಫಸ್ಟ್ ಲುಕ್ ಲೀಕ್ ಆಗಿ ಬಿಡ್ತಾ? ಎಂದು ತಲೆ ಕೆಡಿಸಿಕೊಂಡಿದ್ದಾರೆ. ಅಷ್ಟರಮಟ್ಟಿಗೆ ಲುಕ್ ವೈರಲ್ ಆಗುತ್ತಿದೆ. ಕೆಲವರು ಹಾಲಿವುಡ್ ರೇಂಜ್‌ನಲ್ಲಿದೆ ಎಂದು ಹೇಳುತ್ತಿದ್ದಾರೆ. ಈ AI ಪೋಸ್ಟರ್ ವಿಚಾರ ಪಕ್ಕಕ್ಕಿಟ್ಟರೆ ಯಶ್19 ಅಪ್‌ಡೇಟ್ ಯಾವಾಗ ಸಿಗುತ್ತೆ? ಎಂದು ಕಾದು ಕಾದು ಅಭಿಮಾನಿಗಳು ಸುಸ್ತಾಗಿದ್ದಾರೆ. 'KGF- 2' ಬಳಿಕ ಮುಂದಿನ ಸಿನಿಮಾ ಬಗ್ಗೆ ಯಶ್‌ಗೆ ಒತ್ತಡ ಹೆಚ್ಚಾಗಿದ್ಯಾ? ಎನ್ನುವ ಮಾತುಗಳು ಕೇಳಿಬರ್ತಿದೆ. ಇನ್ನು ಯಶ್ ಮುಂದಿನ ಸಿನಿಮಾದಲ್ಲಿ ಹಾಲಿವುಡ್ ತಂತ್ರಜ್ಞರು ಕೆಲಸ ಮಾಡುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಗೀತು ಮೋಹನ್ ದಾಸ್ ನಿರ್ದೇಶನದ ಚಿತ್ರದಲ್ಲಿ ಯಶ್ ನಟಿಸುತ್ತಾರೆ ಎನ್ನುವ ಸುದ್ದಿ ಬಹಳ ದಿನಗಳಿಂದ ಕೇಳಿಬರ್ತಿದೆ. ಆದರೆ ಈ ಬಗ್ಗೆ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ. ನನ್ನ ಸಿನಿಮಾ ಬಗ್ಗೆ ನಾನೇ ಅಪ್‌ಡೇಟ್ ಕೊಡ್ತೀನಿ, ಅಲ್ಲಿಯವರೆಗೂ ಯಾವುದೇ ಸುದ್ದಿಗಳನ್ನು ನಂಬಬೇಡಿ ಎಂದು ಯಶ್ ಹಿಂದೆ ಹೇಳಿದ್ದರು. ಇನ್ನು ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಚಿತ್ರದಲ್ಲಿ ರಾವಣನಾಗಿ ಯಶ್ ನಟಿಸುತ್ತಾರೆ ಎನ್ನುವ ಮಾತುಗಳು ಬಾಲಿವುಡ್‌ನಲ್ಲಿ ಕೇಳಿಬರ್ತಿದೆ. ಈ ಬಗ್ಗೆ ಕೂಡ ಖಚಿತ ಮಾಹಿತಿ ಸಿಕ್ಕಿಲ್ಲ.
ಯಶ್19 ಅಪ್‌ಡೇಟ್‌ಗಾಗಿ ಅಭಿಮಾನಿಗಳು ಪರಿಪರಿಯಾಗಿ ಮನವಿ ಮಾಡಿದ್ದು ಆಯಿತು. ಆದರೆ ಯಶ್ ಮಾತ್ರ ಸೈಲೆಂಟ್ ಆಗಿಯೇ ಇದ್ದಾರೆ. ಅದ್ಯಾವ ಘಳಿಗೆಯಲ್ಲಿ ಯಶ್19 ಸಿನಿಮಾ ಘೋಷಣೆ ಮಾಡುತ್ತಾರೆ? ಅನ್ನೋದನ್ನು ಕಾದು ನೋಡಬೇಕಿದೆ. ಇನ್ನು ರಾಜ್ಯೋತ್ಸವಕ್ಕೆ ಯಶ್19 ಅಪ್‌ಡೇಟ್ ಬರುತ್ತೋ ಇಲ್ವೋ ಗೊತ್ತಿಲ್ಲ. ಆದರೆ ಕೆಲ ಥಿಯೇಟರ್‌ಗಳಲ್ಲಿ 'KGF- 2' ಸಿನಿಮಾ ರೀ ರಿಲೀಸ್ ಆಗುತ್ತಿದೆ. ದೊಡ್ಡಪರದೆಯಲ್ಲಿ ಅಭಿಮಾನಿಗಳು ಮತ್ತೊಮಮೆ ರಾಕಿ ಆರ್ಭಟ ಕಣ್ತುಂಬಿಕೊಳ್ಳುವ ಅವಕಾಶ ಸಿಗುತ್ತಿದೆ.


Click it and Unblock the Notifications











