Yash19: ರಾಕಿಂಗ್ ಸ್ಟಾರ್ ಯಶ್ ಜೊತೆ ತೆರೆ ಹಂಚಿಕೊಳ್ಳುತ್ತಾರಾ ಸಾಯಿ ಪಲ್ಲವಿ, ಹೊಸ ಅಪ್‌ಡೇಟ್ ಏನು?
ಕೆಜಿಎಫ್ ಚಾಪ್ಟರ್ 2 ಬಿಡುಗಡೆಯಾದ ನಂತರ ರಾಕಿಂಗ್ ಸ್ಟಾರ್ ಯಸ್ ಅವರ ಯಾವುದೇ ಸಿನಿಮಾ ಘೋಷಣೆಯಾಗಿರಲಿಲ್ಲ ಅದೇ ಕಾರಣಕ್ಕೆ ಯಶ್ 19 ಬಗ್ಗೆ ಅಭಿಮಾನಿಗಳು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸೌತ್ ಇಂಡಿಯಾ ಮಾತ್ರವಲ್ಲದೇ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ನಟನ ಸಿನಿಮಾಗೆ ಕಾಯುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಇದೇ ವೇಳೆ ಯಶ್ 19 ಬಗ್ಗೆ ನಟ ಯಶ್ ಅಪ್‌ಡೇಟ್ ಕೊಟ್ಟಿದ್ದಾರೆ.
ಯಶ್ 19 ಸಿನಿಮಾದ ಶೀರ್ಷಿಕೆ ಅನಾವರಣದ ಬಗ್ಗೆ ಈ ಈ ಡಿಸೆಂಬರ್ 8 ರಂದು ಶುಕ್ರವಾರ ಬೆಳಗ್ಗೆ 09:55ಕ್ಕೆ ಘೋಷಿಸುವುದಾಗಿ ರಾಕಿಂಗ್ ಸ್ಟಾರ್ ಮಾಹಿತಿ ನೀಡಿದ್ದಾರೆ. ಇದರ ಬೆನ್ನಲ್ಲೇ ಸಿನಿಮಾದ ಪಾತ್ರವರ್ಗ, ನಿರ್ದೇಶಕರು, ತಂತ್ರಜ್ಞರ ಬಗ್ಗೆ ಚರ್ಚೆಯಾಗುತ್ತಿದ್ದು, ಹಲವು ವರದಿಗಳು ಹಲವು ನಟ ನಟಿಯರ ಹೆಸರನ್ನು ಮುಂದೆ ತಂದಿದೆ. ಅದರಲ್ಲಿ ಯಶ್‌ಗೆ ನಾಯಕಿಯಾಗಿ ನಟಿ ಸಾಯಿ ಪಲ್ಲವಿ ಹೆಸರು ಮುಂಚೂಣಿಯಲ್ಲಿದೆ.

ರಾಕಿಂಗ್ ಸ್ಟಾರ್‌ಗೆ ನ್ಯಾಚೂರಲ್ ಬ್ಯೂಟಿ ಸಾಥ್!
ನಟಿ ಸಾಯಿ ಪಲ್ಲವಿ ಎಂಥವರನ್ನು ಮೋಡಿಮಾಡುವ ನೃತ್ಯಗಾರ್ತಿ, ಮಲಯಾಳಂನ ಪ್ರೇಮಂ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಮತ್ತೆ ಹಿಂತಿರುಗಿ ನೋಡಲಿಲ್ಲ. ಮಲಯಾಳಂ, ತೆಲುಗು, ತಮಿಳು ಚಿತ್ರಗಳ ಬಳಿಕ ಈಗ ಚಂದನವನಕ್ಕೂ ಈ ಚಂದದ ಬೆಡಗಿ ಕಾಲಿಡುತ್ತಾರೆ ಎಂದು ವರದಿಯಾಗುತ್ತಿದೆ. ಅದು ಯಶ್‌ಗೆ ನಾಯಕಿಯಾಗಿ.
ಸಾಯಿ ಪಲ್ಲವಿ ಬಹು ನಿರೀಕ್ಷಿತ ಚಿತ್ರ ಯಶ್ 19 ಗೆ ಸಹಿ ಹಾಕಿದ್ದಾರೆ ಎಂದು ಆಂತರಿಕ ವರದಿಗಳು ಸೂಚಿಸಿವೆ. ಇತ್ತೀಚಿನ ವರದಿಗಳ ಪ್ರಕಾರ, ನಟಿ ಸಾಯಿ ಪಲ್ಲವಿ ಯಶ್ ಅವರ 19 ನೇ ಚಿತ್ರಕ್ಕೆ ನಾಯಕಿಯಾಗಿದ್ದಾರೆ ಎನ್ನಲಾಗಿದೆ. ಈಗಾಗಲೇ ನಟಿ ತೆಲುಗು ನಟ ನಾಗ ಚೈತನ್ಯ ಅವರ ಮುಂಬರುವ ಚಿತ್ರ ತಾಂಡೇಲ್‌ನಲ್ಲಿ ನಟಿಸುತ್ತಿದ್ದಾರೆ.

ರಾಮಾಯಾಣದಲ್ಲೂ ಯಶ್- ಸಾಯಿ ಪಲ್ಲವಿ ನಟನೆ
ಇನ್ನು, ನಿತೀಶ್ ತಿವಾರಿ ನಿರ್ದೇಶನದ ಮುಂಬರುವ ಮಹಾಕಾವ್ಯಾ ರಾಮಾಯಣದಲ್ಲಿಯೂ ನಟಿ ಸಾಯಿ ಪಲ್ಲವಿ ಮತ್ತು ನಟ ಯಶ್ ಒಂದಾಗಲಿದ್ದಾರೆ ಎಂಬ ವರದಿಗಳಿವೆ. ಸಿನಿಮಾದಲ್ಲಿ ನಟ ರಣಬೀರ್ ಕಪೂರ್ ಸಿನಿಮಾದಲ್ಲಿ ರಾಮನ ಪಾತ್ರ ಮಾಡಲಿದ್ದಾರೆ. ನಟ ಯಶ್ ರಾವಣನಾಗಿ , ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ರಾಮಾಯಣ ಸಿನಿಮಾದಲ್ಲಿ ಸೀತೆಯಾಗಿ ಕಾಣಿಸಿಕೊಳ್ಳುವ ಬಗ್ಗೆ ನಟಿ ಸಾಯಿ ಪಲ್ಲವಿ ಮಾತನಾಡಿದ್ದಾರೆ. ಸಿನಿಮಾ ಕಥೆ ಕೇಳಲು ಮುಂಬೈಗೆ ಹೋಗುವುದಾಗಿಯೂ ಹೇಳಿದ್ದರು. ಆದರೆ, ಇದೇ ಸಿನಿಮಾದಲ್ಲಿ ರಾವಣನಾಗಿ ಬಾಲಿವುಡ್‌ಗೆ ಎಂಟ್ರಿ ಕೊಡುವ ಬಗ್ಗೆ ನಟ ಯಶ್ ಎಲ್ಲಿಯೂ ಸ್ಪಷ್ಟನೆ ನೀಡಿಲ್ಲ. ಇದರ ಬೆನ್ನಲ್ಲೆ ಇಬ್ಬರು ಯಶ್ ಅವರ 19 ನೇ ಚಿತ್ರಕ್ಕೆ ಒಂದಾಗುತ್ತಿದ್ದಾರೆ ಎಂಬ ವರದಿಗಳು ಬಂದಿವೆ.
ಯಶ್ 19 ಸಿನಿಮಾ
ನಟ ಯಶ್ ಅವರ 19 ನೇ ಚಿತ್ರದ ಶೀರ್ಷಿಕೆಯನ್ನು ಈ ಡಿಸೆಂಬರ್ 8 ರಂದು ಶುಕ್ರವಾರ ಬೆಳಗ್ಗೆ 09:55ಕ್ಕೆ ಅನಾವರಣ ಮಾಡಲಾಗುವುದು. ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ಈ ಸಿನಿಮಾಗೆ ಹಲವು ನಿರ್ದೇಶಕರ ಹೆಸರು ಕೇಳಿಬಂದಿದ್ದು, ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶನದ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾಗಿದೆ. ಚರಣ್ ರಾಜ್ ಈ ಸಿನಿಮಾಕ್ಕೆ ಸಂಗೀತ ನೀಡುವ ಸಾಧ್ಯತೆಯಿದೆ.


Click it and Unblock the Notifications











