ಯಶ್19 ಚಿತ್ರದಲ್ಲಿ ಒಬ್ಬರಲ್ಲ ಇಬ್ಬರಲ್ಲ ಮೂವರು ನಾಯಕಿಯರು
ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಟೈಟಲ್ ಘೋಷಣೆಗೆ ಕ್ಷಣಗಣನೆ ಶುರುವಾಗಿದೆ. ಕೆವಿಎನ್ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಜನವರಿಯಲ್ಲೇ ಯಶ್ ಮತ್ತೆ ಶೂಟಿಂಗ್ ಅಖಾಡಕ್ಕೆ ಕಾಲಿಡಲಿದ್ದಾರೆ. ಈ ಬಾರಿ ಹಾಲಿವುಡ್ ರೇಂಜ್ ಸಿನಿಮಾ ಪ್ಲ್ಯಾನ್ ನಡೀತಿದೆ.
ಯಶ್19 ಚಿತ್ರಕ್ಕೆ ಚಿತ್ರಕ್ಕೆ ಮಲಯಾಳಂ ನಿರ್ದೇಶಕ ಗೀತು ಮೋಹನ್ ದಾಸ್ ಆಕ್ಷನ್ ಕಟ್ ಹೇಳ್ತಾರೆ ಎನ್ನುವ ಮಾತುಗಳು ಬಲವಾಗಿ ಕೇಳಿಬರ್ತಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಯಾವುದೇ ಯಾವುದೇ ಮಾಹಿತಿ ಸಿಕ್ಕಿಲ್ಲ. 'KGF-2' ಬಳಿಕ ಯಶ್ ಯಾವುದೇ ಸಿನಿಮಾ ಒಪ್ಪಿಕೊಂಡಿರಲಿಲ್ಲ. ಯಶ್ 19ನೇ ಸಿನಿಮಾ ಯಾವ್ದು? ನಿರ್ದೇಶಕರು, ಕಲಾವಿದರು ಯಾರು? ಜಾನರ್ ಯಾವ್ದು? ಟೈಟಲ್ ಏನು? ಎನ್ನುವ ಚರ್ಚೆ ಬಹಳ ದಿನಗಳಿಂದ ನಡೀತಿತ್ತು. ಅದಕ್ಕೆಲ್ಲಾ ಬ್ರೇಕ್ ಬೀಳುವ ಸಮಯ ಹತ್ತಿರವಾಗಿದೆ.

ರಾಕಿಭಾಯ್ ಆಗಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಪ್ರಭಾಸ್ ತೆರೆಮರೆಯಲ್ಲಿ ಮುಂದಿನ ಸಿನಿಮಾಗಾಗಿ ಕಸರತ್ತು ನಡೆಸುತ್ತಾ ಬರ್ತಿದ್ದಾರೆ. ಈಗಾಗಲೇ ಕತೆ, ತಾರಾಗಣ, ತಂತ್ರಜ್ಞರ ಬಳಗ, ಶೂಟಿಂಗ್ ಶೆಡ್ಯೂಲ್ ಎಲ್ಲವೂ ಪಕ್ಕಾ ಆಗಿದೆಯಂತೆ. ಹಾಗಾಗಿ ಯಶ್ ಟೈಟಲ್ ಘೋಷಣೆಗೆ ಮುಂದಾಗಿದ್ದಾರೆ. ಸಣ್ಣ ಟೈಟಲ್ ಟೀಸರ್ ಕೂಡ ಪ್ಲ್ಯಾನ್ ಮಾಡ್ತಿದ್ದಾರೆ.
ಯಶ್19 ಚಿತ್ರದಲ್ಲಿ ಸಾಯಿ ಪಲ್ಲವಿ ಅಥವಾ ಮೃಣಾಲ್ ಠಾಕೂರ್ ನಾಯಕಿಯಾಗಿ ನಟಿಸುತ್ತಾರೆ ಎನ್ನುವ ಗುಸುಗುಸು ಭಾರೀ ಸದ್ದು ಮಾಡ್ತಿದೆ. ಸದ್ಯ ಬಾಲಿವುಡ್ ಪಿಂಕ್‌ವಿಲ್ಲಾ ವರದಿ ಪ್ರಕಾರ ಚಿತ್ರದಲ್ಲಿ ಮೂವರು ನಟಿಯರು ಲೀಡ್ ರೋಲ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನಲಾಗ್ತಿದೆ. ಮೂವರು ನಾಯಕಿಯರು ಎಂದು ಹೇಳಲು ಸಾಧ್ಯವಿಲ್ಲ. ಆದರೆ ಲೀಡ್ ರೋಲ್‌ಗಳಲ್ಲಿ ನಟಿಸುತ್ತಾರೆ. ಅವರು ಯಾರು? ಎನ್ನುವುದನ್ನು ಚಿತ್ರತಂಡ ಸೀಕ್ರೆಟ್ ಆಗಿಯೇ ಇಟ್ಟಿದೆ. ಈಗಾಗಲೇ ಸಂಪೂರ್ಣ ತಾರಾಗಣದ ಆಯ್ಕೆ ನಡೆದಿದೆ ಎಂದು ವರದಿ ಮಾಡಿದೆ.
ಗೀತು ಮೋಹನ್ ದಾಸ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಯಶ್ ನಟಿಸುತ್ತಾರೆ ಎನ್ನುವ ಮಾತುಗಳು ಕೇಳಿ ಬರ್ತಿದೆ. ಚಿತ್ರದಲ್ಲಿ ಯಶ್ ಗ್ರೇಶೇಡ್ ಇರುವ ಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾಗ್ತಿದೆ. ಹಾಲಿವುಡ್ ತಂತ್ರಜ್ಞರು ಈ ಸಿನಿಮಾದಲ್ಲಿ ಕೆಲಸ ಮಾಡುವ ಸಾಧ್ಯತೆಯಿದೆಯಂತೆ. ಚಿತ್ರಕ್ಕಾಗಿ ಯಶ್ ಭಾರೀ ಮೊತ್ತದ ಸಂಭಾವನೆಯನ್ನೇ ಪಡೆದುಕೊಂಡಿದ್ದಾರೆ ಎನ್ನುವ ಚರ್ಚೆ ನಡೀತಿದೆ. ಚಿತ್ರಕ್ಕೆ ಚರಣ್ ರಾಜ್ ಮ್ಯೂಸಿಕ್ ಕಂಪೋಸ್ ಮಾಡುವ ಸಾಧ್ಯತೆ ದಟ್ಟವಾಗಿದೆ.


Click it and Unblock the Notifications











