ರಾಯಚೂರಿನ ಜನರಿಗೆ ನೆರವಾದ ಯಶೋಮಾರ್ಗ
ರಾಜ್ಯದ ಹಲವು ಜಿಲ್ಲೆಗಳಲ್ಲಿ ಬರ ಎದುರಾಗಿದೆ. ಪ್ರಾಣಿಗಳು ನೀರಿಲ್ಲದೇ ಸಾಯುವ ಸ್ಥಿತಿ ನಿರ್ಮಾಣವಾಗಿದ್ದರೇ, ಜನರಿಗೆ ಕುಡಿಯಲು ನೀರು ಸಿಗದೇ ಕಿಲೋ ಮಿಟರ್ ಗಳಷ್ಟು ದೂರು ಸಾಗಿ ಒಂದು ಬಿಂದಿಗೆ ನೀರು ತರಬೇಕಾಗಿದೆ.
ಇಂತಹ ಕಷ್ಟದ ಸಮಯದಲ್ಲಿ ಕನ್ನಡ ನಟ ರಾಕಿಂಗ್ ಸ್ಟಾರ್ ಯಶ್ ಸಾರಥ್ಯದ ಯಶೋಮಾರ್ಗ ಜನರ ಸಹಾಯಕ್ಕೆ ನಿಂತಿದೆ. ರಾಯಚೂರಿನ ಕೆಲವು ಹಳ್ಳಿಗಳಿಗೆ ನೀರು ಸರಬರಾಜು ಮಾಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.
ಈ ಬಗ್ಗೆ ಯಶೋಮಾರ್ಗ ಫೌಂಡೇಶನ್ ನ ಅಧಿಕೃತ ಫೇಸ್ ಬುಕ್ ಪೇಜ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ''ರಾಯಚೂರಿನಲ್ಲಿ ಬರದ ನಡುವೆ ಕುಡಿಯುವ ನೀರಿನ ಅಭಾವ ಹೆಚ್ಚಾಗಿದ್ದು ಇದನ್ನು ಮನಗಂಡಂತಹ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರು ಇಂದು ರಾಯಚೂರಿನಲ್ಲಿ ಯಶೋಮಾರ್ಗ ಮೂಲಕ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿಸಿದ್ದಾರೆ..!'' ಎಂದು ವಿವರ ನೀಡಿದ್ದಾರೆ.

ಟ್ಯಾಂಕರ್ ಗಳ ಮೂಲಕ ನೀರು ತುಂಬಿಸಿಕೊಂಡು ಹೋಗಿ ದೂರದ ಹಳ್ಳಿಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಯಶೋಮಾರ್ಗ ಟ್ಯಾಂಕರ್ ಗಳನ್ನ ನೋಡಿ ಖುಷಿಯಿಂದ ಜನರು ಕೂಡ ಬಿಂದಿಗೆ ತಗೊಂಡು ಬಂದು ನೀರು ತುಂಬಿಸಿಕೊಂಡು ಹೋಗುತ್ತಿದ್ದಾರೆ.
ಯಶ್ ಅವರ ಉದ್ದೇಶ ಕೂಡ ಇದೇ ಆಗಿತ್ತು. ಬರ ಎದುರಿಸುವ ಹಾಗೂ ನೀರಿಗಾಗಿ ಪರದಾಡುವಂತಹ ಹಳ್ಳಿಗಳಿಗೆ ಸಹಾಯ ಮಾಡಬೇಕು ಎಂದು ಪಣ ತೊಟ್ಟು, ಯಶೋಮಾರ್ಗ ಫೌಂಡೇಶನ್ ಆರಂಭಿಸಿದ್ದರು. ಆ ಸಂಸ್ಥೆಯ ಮೂಲಕ ಅವರ ಅಭಿಮಾನಿಗಳು ಈಗ ಇಂತಹ ಕೆಲಸ ಮಾಡುತ್ತಿರುವುದು ನಿಜಕ್ಕೂ ವಿಶೇಷ.


Click it and Unblock the Notifications











