'ಕೆಜಿಎಫ್-2' ಟ್ರೈಲರ್ ನಲ್ಲಿ ಕಾಣಿಸಿದ್ರಂತೆ ಅಮಿತಾಬ್ ಬಚ್ಚನ್.!
ಮೊದಲ ಟ್ರೈಲರ್ ನಲ್ಲೇ ಭರ್ಜರಿ ಸೌಂಡ್ ಮಾಡ್ತಿದ್ದ ಕೆಜಿಎಫ್ ಈಗ ಎರಡನೇ ಟ್ರೈಲರ್ ಬಿಡುಗಡೆ ಮಾಡಿದೆ. ಅದ್ಯಾವಾಗ ಎರಡನೇ ಟ್ರೈಲರ್ ರಿಲೀಸ್ ಆಯ್ತೋ ಅಲ್ಲಿಂದ ಬಿಟೌನ್ ನಲ್ಲಿ ಇನ್ನೊಂದು ಮಾತು ಆರಂಭವಾಗಿದೆ.
ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಕೆಜಿಎಫ್ ಎರಡನೇ ಟ್ರೈಲರ್ ಲಕ್ಷಾಂತರ ವೀವ್ಸ್ ಪಡೆದುಕೊಂಡಿದೆ. ಮೊದಲ ಟ್ರೈಲರ್ ಬಿಟ್ಟು ಕೊಡದ ಅನೇಕ ವಿಷ್ಯಗಳು ಎರಡನೇ ಟ್ರೈಲರ್ ನಲ್ಲಿ ಗಮನ ಸೆಳೆದಿದೆ.
ಯಶ್ ಅವರ ಆಂಗ್ರಿ ಯಂಗ್ ಮ್ಯಾನ್ ಲುಕ್ ನೋಡ್ತಿದ್ರೆ, 80ರ ದಶಕದಲ್ಲಿದ್ದ ಅಮಿತಾಬ್ ಬಚ್ಚನ್ ನೆನಪಾಗ್ತಿದ್ದಾರೆ ಎನ್ನಲಾಗುತ್ತಿದೆ. ಇದು ಯಶ್ ಚಿತ್ರಕ್ಕೆ ಮತ್ತು ಅವರ ಲುಕ್ ಗೆ ಸಿಕ್ಕಿರುವ ಬಹುದೊಡ್ಡ ಕಾಂಪ್ಲಿಮೆಂಟ್ ಅಂದ್ರು ತಪ್ಪಾಗಲಾರದು. ಮುಂದೆ ಓದಿ....

ಮುಂಬೈಗೆ ಹೊಸ ಅಧಿಪತಿ
ಕೆಜಿಎಫ್ ಸಿನಿಮಾ ಬಾಲಿವುಡ್ ಗೆ ಹತ್ತಿರವಾಗೋದಕ್ಕೆ ಪ್ರಮುಖ ಕಾರಣ, ಇಲ್ಲಿ ಮುಂಬೈ ಆಧರಿತ ಕಥೆ ಇದೆ. ಅದಕ್ಕೆ ತಕ್ಕಂತೆ ಮೊದಲ ಹಾಡು ಬಿಡುಗಡೆಯಾಗಿದೆ. ಈ ಹಾಡು ಹಿಂದಿ ಮಿಶ್ರಿತ ಕನ್ನಡದಲ್ಲಿ ಮೂಡಿಬಂದಿದ್ದು, ಬಾಲಿವುಡ್ ಗೆ ಸೂಕ್ತವಾಗಿ ಸಾಂಗ್ ಮಾಡಿದ್ದಾರೆ. ಈ ಹಾಡನ್ನ ನೋಡಿ ಬಿಟೌನ್ ಮಂದಿ ಮತ್ತಷ್ಟು ಅಚ್ಚರಿಯಿಂದ ನೋಡುವಂತಾಗಿದೆ.

ಅಂದು ಅಮಿತಾಬ್, ಇಂದು ಯಶ್?
80ರ ದಶಕದಲ್ಲಿ ಅಮಿತಾಬ್ ಬಚ್ಚನ್ ಸಿನಿಮಾಗಳು ಹಿಂದಿ ಇಂಡಸ್ಟ್ರಿಯಲ್ಲಿ ಧೂಳೆಬ್ಬಿಸಿತ್ತು. ಬಿಗ್ ಬಿ ಅವರ ರೆಬೆಲ್ ನಟನೆಯಿಂದ ದೊಡ್ಡ ಹೆಸರು ಮಾಡಿದ್ರು. ಸೂಪರ್ ಸ್ಟಾರ್ ಪಟ್ಟಕ್ಕೇರಿದ್ದರು. ಇದೀಗ, ಅವರಂತೆ ನಟ ಯಶ್ ಕೂಡ ರೆಬೆಲ್ ಅಭಿನಯದಿಂದ ಎಂಟ್ರಿ ಕೊಡ್ತಿದ್ದಾರೆ. ಹಾಗಾಗಿ, ಅಮಿತಾಭ್ ನೆನಪಾಗ್ತಿದ್ದಾರೆ ಎಂಬ ಮಾತುಗಳು ಬಾಲಿವುಡ್ ಇಂಡಸ್ಟ್ರಿಯಲ್ಲಿ ಕೇಳಿಬರ್ತಿದೆ.

ಜೀರೋ ಮುಂದೆ ಯಶ್ ಹೀರೋ?
ಶಾರೂಖ್ ಖಾನ್ ಅಭಿನಯದ 'ಜೀರೋ' ಸಿನಿಮಾ ಡಿಸೆಂಬರ್ 21ಕ್ಕೆ ಜಗತ್ತಿನಾದ್ಯಂತ ತೆರೆಕಾಣ್ತಿದೆ. ಅದೇ ದಿನ ಯಶ್ ಅವರ 'ಕೆಜಿಎಫ್' ಸಿನಿಮಾ ಬಿಡುಗಡೆಯಾಗ್ತಿರುವುದು ನಿಜಕ್ಕೂ ಬಾಲಿವುಡ್ ನಲ್ಲಿ ದೊಡ್ಡ ಕುತೂಹಲ ಕೆರಳಿಸಿದೆ. ಈಗ ಕೆಜಿಎಫ್ ಚಿತ್ರದ ಎರಡನೇ ಟ್ರೈಲರ್ ನೋಡಿದ್ಮೇಲೆ ಅಂತೂ ಯಶ್ ಮುಂದೆ ಜೀರೋ ಕೂಡ ಮಂಕಾಗುತ್ತಾ ಎಂಬ ಅನುಮಾನ ಕಾಡ್ತಿದೆ.

ಹಿಂದಿ ಮಾಧ್ಯಮಗಳು ಶಾಕ್
ಕೆಜಿಎಫ್ ಸಿನಿಮಾ ಬಾಲಿವುಡ್ ನಲ್ಲಿ ಇಷ್ಟು ದೊಡ್ಡ ಮಟ್ಟದ ಹೈಪ್ ಕ್ರಿಯೆಟ್ ಮಾಡುತ್ತಾ ಎಂಬ ನಿರೀಕ್ಷೆ ಹಿಂದಿ ಮಾಧ್ಯಮಗಳಿಗೆ ಇರಲಿಲ್ಲ. ಆದ್ರೆ,ಎರಡು ಟ್ರೈಲರ್ ಮತ್ತು ಒಂದು ಹಾಡಿನ ಮೂಲಕ ಕೆಜಿಎಫ್ ಎಂಬ ಕನ್ನಡ ಸಿನಿಮಾ ಬಾಲಿವುಡ್ ಮಾಧ್ಯಮಗಳ ಅಚ್ಚರಿಗೆ ಕಾರಣವಾಗಿದೆ. ಟ್ರೈಲರ್ ನೋಡಿದ ಪತ್ರಕರ್ತರು ಸಿನಿಮಾ ಹೇಗಿರಬಹುದು ಎಂಬ ಕಾತುರವನ್ನ ಹೆಚ್ಚು ಮಾಡಿಕೊಂಡಿದ್ದಾರೆ.


Click it and Unblock the Notifications











