KGF Japan Review: ರಾಕಿಭಾಯ್ ರಾಜ್ಯಭಾರ ನೋಡಿ ಜಪಾನ್ ಪ್ರೇಕ್ಷಕರು ಏನಂದ್ರು?

By ಫಿಲ್ಮಿಬೀಟ್ ಡೆಸ್ಕ್

ರಾಕಿಂಗ್ ಯಶ್ ನಟನೆಯ 'KGF' ಸರಣಿ ಸಿನಿಮಾಗಳು ಜಪಾನ್ ದೇಶದಲ್ಲಿ ಸಂಚಲನ ಸೃಷ್ಟಿಸಿದೆ. ಜಪಾನೀಯರು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ನಿಧಾನವಾಗಿ ಥಿಯೇಟರ್‌ಗಳು ಹೌಸ್‌ಫುಲ್ ಆಗುತ್ತಿದೆ. ಒಮ್ಮೆ ನೋಡಿದವರು ಮತ್ತೆ ನೋಡಲು ಮುಗಿಬೀಳುತ್ತಿದ್ದಾರೆ. ರಾಕಿಭಾಯ್‌ ಆರ್ಭಟ ನೋಡಿ ಥ್ರಿಲ್ಲಾಗಿದ್ದಾರೆ. ಟ್ವಿಟ್ಟರ್‌ನಲ್ಲಿ ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಸಲಾಂ ರಾಕಿಭಾಯ್ ಎಂದು ಜೈಕಾರ ಹಾಕುತ್ತಿದ್ದಾರೆ.

ಪ್ರಶಾಂತ್ ನೀಲ್ ನಿರ್ದೇಶನದ 'KGF' ಸಿನಿಮಾ 2 ಭಾಗಗಳಾಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ಹೊಂಬಾಳೆ ಸಂಸ್ಥೆ ಬಹಳ ಪ್ರತಿಷ್ಠಾತ್ಮಕವಾಗಿ ಈ ಸಿನಿಮಾ ನಿರ್ಮಿಸಿ ಪ್ರೇಕ್ಷಕರ ಮುಂದೆ ತಂದಿತ್ತು. 2018ರಲ್ಲಿ ಮೊದಲ ಭಾಗ ರಿಲೀಸ್ ಆಗಿ 250 ಕೋಟಿ ರೂ. ಗಳಿಕೆ ಕಂಡಿತ್ತು. ಇನ್ನು 2ನೇ ಭಾಗ ಕಳೆದ ವರ್ಷ ತೆರಗಪ್ಪಳಿಸಿ 1200 ಕೋಟಿ ರೂ. ಅಧಿಕ ಕೊಳ್ಳೆ ಹೊಡೆದಿತ್ತು. ಕಳೆದ ವಾರ ಚಿತ್ರವನ್ನು ಜಪಾನ್ ದೇಶಗಳಲ್ಲಿ ರಿಲೀಸ್ ಮಾಡಲಾಗಿದೆ. ನಿಧಾನವಾಗಿ ಸಿನಿಮಾ ಟೇಕಾಫ್ ಆಗ್ತಿದ್ದು ಜಪಾನ್ ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆಯುವ ಸುಳಿವು ಸಿಗುತ್ತಿದೆ.

Yashs KGF Chapter-1 and Chapter-2 Twitter Review by Japan Audience

KGF ಚಾಪ್ಟರ್-1 ಒಟ್ಟು 91ಕ್ಕೂ ಅಧಿಕ ಶೋಗಳಲ್ಲಿ ಪ್ರದರ್ಶನವಾಗುತ್ತಿದೆ. ಇನ್ನು ಚಾಪ್ಟರ್- 2 ಸಿನಿಮಾ 85 ಶೋಗಳಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಿದೆ. ಫಸ್ಟ್ ವೀಕೆಂಡ್‌ನಲ್ಲಿ ಸಿನಿಮಾ 40 ಲಕ್ಷಕ್ಕೂ ಹೆಚ್ಚು ಕಲೆಕ್ಷನ್ ಮಾಡಿರುವ ಅಂದಾಜಿದೆ. ಜಪಾನ್‌ನಲ್ಲಿ ಥಿಯೇಟರ್‌ ಸೀಟ್ ಕೆಪಾಸಿಟಿ ಬಹಳ ಕಮ್ಮಿ ಇರುತ್ತದೆ. ಹಾಗಾಗಿ ಸಿನಿಮಾಗಳು ದೀರ್ಘಾವಧಿಯ ಪ್ರದರ್ಶನ ಕಾಣುತ್ತವೆ. ಇನ್ನು 'KGF' ಸರಣಿ ಸಿನಿಮಾಗಳನ್ನು ನೋಡಿದ ಕೆಲ ಪ್ರೇಕ್ಷಕರು ಟ್ವಿಟ್ಟರ್‌ನಲ್ಲಿ ಜಪಾನೀಸ್ ಭಾಷೆಯಲ್ಲಿ ರಿವ್ಯೂ ಬರೆದುಕೊಂಡಿದ್ದಾರೆ.

'KGF' ರಿಲೀಸ್ ಮಾಡಿದ್ದಕ್ಕೆ ಥ್ಯಾಂಕ್ಸ್

"ಸಲಾಮ್ ರಾಕಿ ಭಾಯ್, ವಿಲನ್ ಮತ್ತು ಹೀರೋ ಎರಡೂ ಆಗಿರುವ ರಾಕಿಯ ಜಬರ್ದಸ್ತ್ ಆಕ್ಷನ್, ಬಿಂಬಾಟ್ ಸಂಗೀತ ಮತ್ತು ಕೂಲ್ ರಾಕಿ ನನ್ನನ್ನು ಬಹಳ ಆಕರ್ಷಿಸಿತು. ಚಾಪ್ಟರ್- 1 ಮತ್ತು ಚಾರ್ಟ್- 2 ಅನುಕ್ರಮವಾಗಿ ವೀಕ್ಷಿಸುವುದು ನಿಜವಾಗಿಯೂ ಒಳ್ಳೆಯದು. ಈ ಚಿತ್ರವನ್ನು ಜಪಾನ್‌ನಲ್ಲಿ ಬಿಡುಗಡೆ ಮಾಡಿದ್ದಕ್ಕಾಗಿ ತುಂಬಾ ಧನ್ಯವಾದಗಳು" ಎಂದು ಜಪಾನ್ ಪ್ರೇಕ್ಷಕರೊಬ್ಬರು ಟ್ವೀಟ್ ಮಾಡಿದ್ದಾರೆ.

Yashs KGF Chapter-1 and Chapter-2 Twitter Review by Japan Audience

ಅಧೀರ ಬಹಳ ಇಷ್ಟವಾದ

"ಬಿಗ್ ಬ್ರದರ್ ರಾಕಿ ಆ ಧೂಳಿನ ಗಣಿಯಲ್ಲಿ ಗಿಗೋಲೊ ಸೂಟ್‌ನಲ್ಲಿ ಕಾಣಿಸಿಕೊಳ್ಳುವುದು ನಿಜವಾಗಿಯೂ ಕಾನೂನುಬಾಹಿರ. ಅಲ್ಲದೇ ನೀವು ಸಿಗರೇಟ್ ಸೇದುವ ರೀತಿ ನೋಡಿದ ಮೇಲೆ ನನಗೂ ಸಿಗರೇಟ್ ಸೇದಬೇಕು ಎನಿಸುತ್ತಿದೆ. ನೀವು ಯಾವ ಸಿಗರೇಟ್ ಸೇದಿದ್ದೀರಾ ? ನಾನು ಅದೇ ಸಿಗರೇಟ್ ಸೇದಲು ಬಯಸುತ್ತೇನೆ. ಅಲ್ಲದೇ, ನಾನು ವೈಕಿಂಗ್ ಅಭಿಮಾನಿ ಆಗಿದ್ದರೂ ಅಧೀರ ಬಹಳ ಇಷ್ಟವಾದ" ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.

ರಾಕಿ- ಅಧೀರ ಮುಖಾಮುಖಿ ಸೂಪರ್

"ನಾನು ಈಗಷ್ಟೇ KGF-1 ಆ ನಂತರ KGF- 2 ಸಿನಿಮಾಗಳನ್ನು ನೋಡಿ ಮುಗಿಸಿದೆ. ಆ ರೀತಿ ಗರುಡನನ್ನು ಮೀರಿ ಬೆಳೆಯುವುದು ನಿಜಕ್ಕೂ ಅದ್ಭುತ. ರಾಕಿಯಾಗಿ ನಟಿಸಿದ ಯಶ್ ಲುಕ್ಸ್, ಬಲ, ಬುದ್ಧಿವಂತಿಕೆ ನಿಜಕ್ಕೂ ಚೆಂದ. ಕರುಣೆಯ ಹಿನ್ನೆಲೆಯ ರಾಕಿ ತಂತ್ರಗಳನ್ನು ತೋರಿಸುತ್ತಾ ಸಾಗಿದ್ದಾರೆ. ಸಂಜಜಯ್ ದತ್ ಪಾತ್ರವನ್ನು ಕಟ್ಟಿಕೊಟ್ಟಿರುವ ರೀತಿ ಅದ್ಭುತವಾಗಿದೆ. ರಾಕಿ ಮತ್ತು ಅಧೀರ ನಡುವಿನ ಮುಖಾಮುಖಿ ಸನ್ನಿವೇಶ ನನ್ನನ್ನು ಬಹಳ ಸೆಳೆಯಿತು" ಅನ್ನೋದು ಮತ್ತೊಬ್ಬರ ರಿವ್ಯೂ.

ರಾಕಿನ ನೋಡೋದೆ ಚೆಂದ

"KGF ಚಾಪ್ಟರ್- 1 ಮತ್ತು ಚಾಪ್ಟರ್- 2. ಪವರ್‌ಫುಲ್ ದೃಶ್ಯಗಳು. ಹಿಂಸೆಯ ವಿಶಿಷ್ಟ ಚಿತ್ರಣಗಳು, ಬಲವಾದ ಇಚ್ಛಾಶಕ್ತಿಯ ಪಾತ್ರಗಳು, ಪವರ್‌ಫುಲ್ ಡೈಲಾಗ್ಸ್, ತಂಪಾದ ಸಾಹಿತ್ಯ, ಸಂಗೀತ, ಎಲ್ಲವೂ ನನಗೆ ಇಷ್ಟವಾಯಿತು. ತನ್ನ ತಾಯಿಯ ಬೋಧನೆ ಮತ್ತು ನಂಬಿಕೆ, ಆಸೆಗಳು, ಪ್ರೀತಿ, ಹಿಂಸೆ ಮತ್ತು ಹಿಂಸೆ ಮತ್ತು ಹಿಂಸೆ. ರಾಕಿ ಎಷ್ಟು ಚೆನ್ನಾಗಿ ಕಾಣುತ್ತಿದ್ದನೆಂದರೆ ಅದು ನನ್ನ ಹೃದಯವನ್ನು ನೋಯಿಸುತ್ತಿತ್ತು" ಎನ್ನುವ ಮತ್ತೊಂದು ಟ್ವೀಟ್ ಗಮನ ಸೆಳೆಯುತ್ತಿದೆ. ಇದೇ ರೀತಿ ಸಾಕಷ್ಟು ಜನ ಸಲಾಂ ರಾಕಿಭಾಯ್ ಹ್ಯಾಷ್‌ಟ್ಯಾಗ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

More from Filmibeat

English summary
Yash's KGF Chapter-1 and Chapter-2 Twitter Review by Japan Audience. Last week Super hit Movie series Released in Japan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X