ರಾಜ್ಯೋತ್ಸವಕ್ಕೆ ರಾಕಿ ರೀಎಂಟ್ರಿ ಕನ್ಫರ್ಮ್.. ಆದರೆ ನೀವು ಅಂದುಕೊಂಡಗಲ್ಲ!

ಅಭಿಮಾನಿಗಳು ಯಶ್19 ಅಪ್‌ಡೇಟ್ ಕೇಳಿ ಕೇಳಿ ಸುಸ್ತಾಗಿದ್ದಾರೆ. ರಾಜ್ಯೋತ್ಸವ ಸಂಭ್ರಮದಲ್ಲಿ ಯಶ್ ಮುಂದಿನ ಸಿನಿಮಾ ಘೋಷಣೆ ಆಗುತ್ತದೆ ಎನ್ನುವ ನಿರೀಕ್ಷೆಯಿದೆ. ಒಂದೂವರೆ ವರ್ಷದಿಂದ ಅದೊಂದು ಅಪ್‌ಡೇಟ್‌ಗಾಗಿ ಅಭಿಮಾನಿಗಳು ಕಾಯುತ್ತಲೇ ಇದ್ದಾರೆ.

ಕಳೆದ ವರ್ಷ ಏಪ್ರಿಲ್ 14ಕ್ಕೆ 'KGF- 2' ಸಿನಿಮಾ ರಿಲೀಸ್ ಆಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಯಶ್ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಒಂದಷ್ಟು ಸಿನಿಮಾಗಳಲ್ಲಿ ಯಶ್ ನಟಿಸುತ್ತಾರೆ. ಯಶ್ ಮುಂದಿನ ಚಿತ್ರಕ್ಕೆ ಮಲಯಾಳಂ ನಿರ್ದೇಶಕಿ ಆಕ್ಷನ್ ಕಟ್ ಹೇಳ್ತಾರೆ, ರಾಕಿಂಗ್ ಸ್ಟಾರ್ ಬಾಲಿವುಡ್‌ಗೆ ಎಂಟ್ರಿ ಕೊಡ್ತಾರೆ, ಹೀಗೆ ಒಂದಷ್ಟು ಸುದ್ದಿ ಹರಿದಾಡಿತ್ತು. ಆದರೆ ಯಾವುದು ಕೂಡ ನಿಜವಾಗಲಿಲ್ಲ. ಅಚ್ಚರಿ ಅಂದ್ರೆ ಸ್ವತಃ ಯಶ್ ಮಾತನಾಡಿ ನಾನು ಹೇಳುವವರೆಗೂ ಯಾವುದೇ ಸುದ್ದಿ ನಂಬಬೇಡಿ. ನನ್ನ ಮುಂದಿನ ಸಿನಿಮಾ ಅಪ್‌ಡೇಟ್ ನಾನೇ ಕೊಡ್ತೀನಿ ಎಂದುಬಿಟ್ಟರು.

ಗಣೇಶ ಹಬ್ಬಕ್ಕಾಗಲಿ ದಸರಾ ಹಬ್ಬಕ್ಕಾಗಲಿ ಯಶ್19 ಅಪ್‌ಡೇಟ್ ಸಿಗಲಿಲ್ಲ. ಈಗ ಕನ್ನಡ ರಾಜ್ಯೋತ್ಸವ ಅಥವಾ ದೀಪಾವಳಿ ಸಂಭ್ರಮದಲ್ಲಿ ಯಶ್ ಬ್ರೇಕಿಂಗ್ ನ್ಯೂಸ್ ಕೊಡ್ತಾರಾ? ಎನ್ನುವ ನಿರೀಕ್ಷೆಯಿದೆ. ರಾಜ್ಯೋತ್ಸವಕ್ಕೆ ಯಶ್‌19 ಘೋಷಣೆ ಆಗುತ್ತೋ ಇಲ್ಲವೋ ಅಭಿಮಾನಿಗಳಿಗಂತೂ ಭರ್ಜರಿ ಗಿಫ್ಟ್ ಸಿಕ್ತಿದೆ. ಅದು ಮತ್ತೇನು ಅಲ್ಲ 'KGF-2' ರೀ ರಿಲೀಸ್ ಆಗ್ತಿದೆ.

Yashs KGF chapter- 2 Re-release on nov 1st on the occasion of kannada rajyotsava

ನವೆಂಬರ್ 1ರಂದು ರಾಜ್ಯೋತ್ಸವ ಸಂಭ್ರಮದಲ್ಲಿ 'KGF-2' ಸಿನಿಮಾ ಪ್ರದರ್ಶನ ಕಾಣಲಿದೆ. ಆಯ್ದ ಚಿತ್ರಮಂದಿರಗಳಲ್ಲಿ ಅಭಿಮಾನಿಗಳು ಮತ್ತೊಮ್ಮೆ ರಾಕಿಭಾಯ್ ಆರ್ಭಟ ನೋಡಿ ಕಣ್ತುಂಬಿಕೊಳ್ಳಬಹುದು. ಈಗಾಗಲೇ ಆನ್‌ಲೈನ್‌ನಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಸಹ ಓಪನ್ ಆಗಿದೆ. ಜೆಸಿ ರಸ್ತೆಯ ಸ್ವಾಗತ್ ಪೂರ್ಣಿಮಾ, ವಿವೇಕ್ ನಗರದ ಶ್ರೀ ಬಾಲಾಜಿ ಸೇರಿದಂತೆ ನಗರದ ಕೆಲ ಚಿತ್ರಮಂದಿರಗಳಲ್ಲಿ 'KGF-2' ಸಿನಿಮಾ ಪ್ರದರ್ಶನವಾಗಲಿದೆ. ರಾಜ್ಯೋತ್ಸವಕ್ಕೆ ಯಾವುದೇ ದೊಡ್ಡ ಸಿನಿಮಾಗಳು ಕನ್ನಡದಲ್ಲಿ ರಿಲೀಸ್ ಆಗುತ್ತಿಲ್ಲ. ಹಾಗಾಗಿ ಹಳೇ ಸಿನಿಮಾವನ್ನೇ ರೀ ರಿಲೀಸ್ ಮಾಡಲಾಗುತ್ತಿದೆ.

ಪ್ರಶಾಂತ್ ನೀಲ್ ನಿರ್ದೇಶನದ 'KGF' ಸರಣಿ ಸಿನಿಮಾಗಳು ಸೃಷ್ಟಿಸಿದ ಸಂಚಲನ ಗೊತ್ತೇಯಿದೆ. ಸಣ್ಣ ಸಿನಿಮಾ ಆಗಿ ಶುರುವಾಗಿದ್ದ ಸಿನಿಮಾ ನೋಡ ನೋಡುತ್ತಲೇ ದೈತ್ಯಾಕಾರ ತಾಳಿತ್ತು. ನೀಲ್ ಟೇಕಿಂಗ್, ಯಶ್ ಪರ್ಫಾರ್ಮನ್ಸ್, ಹೊಂಬಾಳೆ ಸಂಸ್ಥೆ ಪ್ರಯತ್ನಕ್ಕೆ ಭರ್ಜರಿ ಸಕ್ಸಸ್ ಸಿಕ್ಕಿತ್ತು. ಸರಣಿಯ ಮೊದಲ ಸಿನಿಮಾ 250 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. 2ನೇ ಸಿನಿಮಾ 1000 ಕೋಟಿ ರೂ.ಗೂ ಹೆಚ್ಚು ಗಳಿಕೆ ಕಂಡು ಹಳೇ ಬಾಕ್ಸಾಫೀಸ್ ದಾಖಲೆಗಳನ್ನು ಧೂಳಿಪಟ ಮಾಡಿತ್ತು.

ಕನ್ನಡ ಸಿನಿಮಾಗಳು 50 ಕೋಟಿ ರೂ. ಗಳಿಸೋದೆ ಕಷ್ಟ ಎನ್ನುವ ಸಮಯದಲ್ಲಿ 'KGF' ಸಿನಿಮಾ 200 ಕೋಟಿ ರೂ. 1000 ಕೋಟಿ ರೂ. ದಾಟಿ ಎಲ್ಲರ ಹುಬ್ಬೇರಿಸಿತು. ಯಶ್ ರಾತ್ರೋರಾತ್ರಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿಬಿಟ್ಟರು. ಇದೀಗ ಯಶ್ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುವಂತಾಗಿದೆ. ಬಾಲಿವುಡ್ ಮಂದಿ ಕೂಡ ಯಶ್‌ ಕಾಲ್‌ಶೀಟ್‌ಗಾಗಿ ಕ್ಯೂ ನಿಂತಿದ್ದಾರೆ. ನಿತೀಶ್ ತಿವಾರಿ ರಾಮಾಯಣ ಕಾವ್ಯ ಆಧರಿಸಿ ಅದ್ಧೂರಿ ಚಿತ್ರಕ್ಕೆ ಸಿದ್ಧತೆ ನಡೆಸಿದ್ದು ರಾವಣನ ಪಾತ್ರದಲ್ಲಿ ಯಶ್ ನಟಿಸುವ ಬಗ್ಗೆ ಗುಸುಗುಸು ಶುರುವಾಗಿದೆ.

ಯಶ್ ಮುಂದಿನ ಚಿತ್ರಕ್ಕೆ ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಆಕ್ಷನ್ ಕಟ್ ಹೇಳ್ತಾರೆ ಎನ್ನುವ ಮಾತುಗಳು ಬಲವಾಗಿ ಕೇಳಿಬರ್ತಿದೆ. ಇನ್ನು ರಾಕಿಭಾಯ್ ಮುಂದಿನ ಸಿನಿಮಾ ಹಾಲಿವುಡ್ ಮಟ್ಟದಲ್ಲಿ ನಿರ್ಮಾಣವಾಗುತ್ತದೆ ಎನ್ನುವ ಚರ್ಚೆ ನಡೀತಿದೆ. ಹಾಲಿವುಡ್ ತಂತ್ರಜ್ಞರು, ಕಲಾವಿದರು ಚಿತ್ರದಲ್ಲಿ ನಟಿಸೋ ಸಾಧ್ಯತೆ ಇದೆ ಎನ್ನಲಾಗ್ತಿದೆ. ಯಶ್ ಮುಂದಿನ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ ಇದೆ. ಅದೇ ಕಾರಣಕ್ಕೆ ಯಶ್ ಕತೆ ಆಯ್ಕೆಯಲ್ಲಿ ಒತ್ತಡದಲ್ಲಿದ್ದಾರೆ ಎನ್ನುವ ವಾದ ಕೆಲವರದ್ದು.

More from Filmibeat

English summary
KGF- 2 is screening again on Karnataka Rajyotsava In Bengaluru;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X