'KGF' ನಲ್ಲಿ ಯಶ್ ಬಳಸಿರುವ ಈ ಬೈಕ್ ಹಿಂದಿದೆ ಒಂದು ಕುತೂಹಲಕಾರಿ ವಿಷಯ!
ನಟ ಯಶ್ ಅವರ 'ಕೆಜಿಎಫ್' ಸಿನಿಮಾ ಶುರುವಾಗಿ ವರ್ಷಗಳೆ ಕಳೆದಿದೆ . ಆದರೂ ಸಹ ಇದುವರೆಗೆ ಸಿನಿಮಾದ ಬಗ್ಗೆ ಹೆಚ್ಚು ವಿಷಯಗಳು ಬಹಿರಂಗವಾಗಿಲ್ಲ. ಆದರೆ ಈಗ ಈ ಚಿತ್ರದ ಒಂದು ಪ್ರಮುಖ ಅಂಶ ರಿವೀಲ್ ಆಗಿದೆ. ಅದು ಸಿನಿಮಾದ ಬೈಕ್ ಬಗ್ಗೆ ಇರುವ ಕುತೂಹಲಕಾರಿ ಸಂಗತಿ.
ಸಾಮಾನ್ಯವಾಗಿ ಸಿನಿಮಾಗಳಲ್ಲಿ ನಟರು ಬಳಸುವ ಬೈಕ್, ಕಾರುಗಳು ಪ್ರೇಕ್ಷಕರಿಗೆ ಸಖತ್ ಸ್ಪೆಷಲ್ ಆಗುತ್ತದೆ. ಆ ಬೈಕ್, ಕಾರುಗಳು ಮುಂದೆ ದೊಡ್ಡ ಟ್ರೆಂಡ್ ಸೃಷ್ಟಿ ಮಾಡುತ್ತದೆ. ಅದೇ ರೀತಿ ನಿರ್ದೇಶಕ ಪ್ರಶಾಂತ್ ನೀಲ್ ಕೂಡ 'ಕೆ ಜಿ ಎಫ್' ಸಿನಿಮಾಗಾಗಿ ಯಶ್ ಅವರಿಗಾಗಿ ಒಂದು ಬೈಕ್ ಬೇಕು ಎಂಬ ಪ್ಲಾನ್ ಮಾಡಿದ್ದರು. ಇನ್ನು 'ಕೆ.ಜಿ.ಎಫ್' ಸಿನಿಮಾದಲ್ಲಿ ರಾಕಿ (ಯಶ್ ಪಾತ್ರದ ಹೆಸರು) ಒಂದು ಬೈಕ್ ಬಳಸಿದ್ದಾರೆ. ಈಗಾಗಲೇ ಈ ಬೈಕ್ ಸಿನಿಮಾದ ಪೋಸ್ಟರ್ ನಲ್ಲಿ ನೋಡಬಹುದಾಗಿದೆ. ಆದರೆ ಈಗ ಈ ವಿಶೇಷ ಬೈಕ್ ಎಲ್ಲರೂ ಕಣ್ಣು ಕುಕ್ಕುವಂತೆ ಮಾಡಿದೆ.
ಅಂದಹಾಗೆ, ಯಶ್ ಅವರ ಈ ಬೈಕ್ ಹೇಗೆ ರೆಡಿ ಆಯ್ತು. ಇದನ್ನು ತಯಾರು ಮಾಡಿದವರು ಯಾರು? ಎಂಬ ಕುತೂಹಲಕಾರಿ ವಿಷಯಗಳು ಸದ್ಯ ರಿವೀಲ್ ಆಗಿವೆ. ಮುಂದಿದೆ ಓದಿ..

ಭುವನ್ ಗೌಡ
'ಕೆ ಜಿ ಎಫ್' ಸಿನಿಮಾದಲ್ಲಿ ಯಶ್ ಅವರಿಗೆ ವಿಶೇಷ ಬೈಕ್ ರೆಡಿ ಮಾಡಿರುವುದು ಭುವನ್ ಗೌಡ. ಭುವನ್ 'ಕೆ ಜಿ ಎಫ್' ಸಿನಿಮಾ ಸಿನಿಮಾಟೋಗ್ರಾಫರ್ ಕೂಡ ಆಗಿದ್ದು, ಚಿತ್ರಕ್ಕಾಗಿ ಒಂದು ಬೈಕ್ ಡಿಸೈನ್ ಮಾಡಿದ್ದಾರೆ. ಸಿಕ್ಕಾಪಟ್ಟೆ ಸೊಗಸಾಗಿರುವ ಭುವನ್ ಅವರ ಬೈಕ್ ಈಗ ದೊಡ್ಡ ಕ್ರೇಜ್ ಸೃಷ್ಟಿ ಮಾಡಿದೆ.

ಬದಲಾಯಿತು ರಾಯಲ್ ಎನ್ ಫೀಲ್ಡ್ ಬೈಕ್
ಭುವನ್ ಹೊಸ ರಾಯಲ್ ಎನ್ ಫೀಲ್ಡ್ ನ ಟ್ರ್ಯಾಂಪ್ 500 ಸಿಸಿ ಬೈಕ್ ತೆಗೆದುಕೊಂಡು ಅದರ ಎಂಜಿನ್ ಮಾತ್ರ ಬಳಸಿಕೊಂಡು ಹೊಸ ರೀತಿಯ ಡಿಸೈನ್ ಮಾಡಿಸಿದ್ದಾರೆ. ಬೆಂಗಳೂರಿನ ವಿದ್ಯಾಪೀಠ ಸರ್ಕಲ್ ನಲ್ಲಿರುವ ಬೇಗ್ ಎನ್ನುವ ಗ್ಯಾರೇಜ್ ನಲ್ಲಿ ಬೈಕ್ ಗೆ ಹೊಸ ರೂಪ ನೀಡಲಾಗಿದೆ. ಈ ಕೆಲಸದಲ್ಲಿ ಭುವನ್ ಅವರಿಗೆ ಬೇಗ್ ಮತ್ತು ಆಕಾಶ ಇಬ್ಬರೂ ಸಾಥ್ ನೀಡಿದ್ದಾರೆ.

ಅಚ್ಚರಿಗೊಂಡ ರಾಕಿಂಗ್ ಸ್ಟಾರ್
ಬೈಕ್ ರೆಡಿ ಆದ ಬಳಿಕ ಭುವನ್ ಅದನ್ನು 'ಕೆ ಜಿ ಎಫ್' ಚಿತ್ರೀಕರಣದ ಸೆಟ್ ಗೆ ತೆಗೆದುಕೊಂಡು ಹೋದರಂತೆ. ಆಗ ಯಶ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಬೈಕ್ ನೋಡಿ ಆಶ್ವರ್ಯಗೊಂಡಿದ್ದಾರೆ. ಬೈಕ್ ಡಿಸೈನ್ ಅನ್ನು ಇಬ್ಬರೂ ಬಹಳ ಮೆಚ್ಚಿಕೊಂಡಿದ್ದಾರೆ. ಪ್ರಶಾಂತ್ ನೀಲ್ ಕಲ್ಪನೆಯಂತೆ ಬೈಕ್ ಸಿದ್ಧಗೊಂಡಿದೆ. ಬೈಕ್ ನೋಡಿದ ತಕ್ಷಣ ಯಶ್ ಅದರ ಮೇಲೆ ಹತ್ತಿ ಸವಾರಿ ಮಾಡಿದ್ದಾರೆ.

ವಿಶೇಷ ಬೈಕ್ ರೆಡಿ ಮಾಡುವ ಕಾಕ್ರೋಚ್
'ಟಗರು' ಸಿನಿಮಾದಲ್ಲಿ ಕಾಕ್ರೋಚ್ ಪಾತ್ರ ಮಾಡಿದ್ದ ಸುದೀ ಕೂಡ ಇದೇ ರೀತಿ ಡಿಫರೆಂಟ್ ಬೈಕ್ ಗಳನ್ನು ರೆಡಿ ಮಾಡುತ್ತಾರೆ. ಹಿಂದೆಯಿಂದ ಕನ್ನಡದ ಸ್ಟಾರ್ ನಟರ ಸಿನಿಮಾಗಳಿಗೆ ವಿಶೇಷವಾದ ಶೈಲಿಯ ಬೈಕ್ ಗಳನ್ನು ಸುದೀ ರೆಡಿ ಮಾಡುತ್ತಿದ್ದರು. ನಂತರ ಹಾಗೆ ಕೆಲ ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿ 'ಜಾಕಿ' ಸಿನಿಮಾದಿಂದ ನಿರ್ದೇಶಕ ಸೂರಿ ಜೊತೆಗೆ ಸುದೀ ಇದ್ದಾರೆ. ಈಗ 'ಟಗರು' ಸಿನಿಮಾದಿಂದ ಸುದೀ ದೊಡ್ಡ ಜನಪ್ರಿಯತೆ ಗಳಿಸಿದ್ದಾರೆ.

ಈ ವರ್ಷ ತೆರೆಗೆ
'ಕೆ ಜಿ ಎಫ್' ಸಿನಿಮಾ ಕೊನೆಯ ಹಂತದ ಚಿತ್ರೀಕರಣ ಸದ್ಯ ನಡೆಯುತ್ತಿದೆ. ಸಿನಿಮಾ ಈ ವರ್ಷ ರಿಲೀಸ್ ಆಗಲಿದೆ. 80 ದಶಕದ ಕಥೆ ಚಿತ್ರದಲ್ಲಿ ಇದ್ದು, ದೊಡ್ಡ ನಿರೀಕ್ಷೆ ಇದೆ. ಚಿತ್ರದಲ್ಲಿ ಯಶ್ ಜೋಡಿಯಾಗಿ ಶ್ರೀನಿಧಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ. 'ಉಗ್ರಂ' ನಂತರ ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಬರುತ್ತಿರುವ ಎರಡನೇ ಸಿನಿಮಾ ಇದಾಗಿದೆ. 'ಕೆ ಜಿ ಎಫ್' ನಂತರ 'ಕೆ ಜಿ ಎಫ್ 2' ಕೂಡ ಬರಲಿದೆ.


Click it and Unblock the Notifications