Just In
Don't Miss!
- News
ಭಾರತದಲ್ಲಿ 20.29 ಲಕ್ಷ ಜನರಿಗೆ ಕೊರೊನಾವೈರಸ್ ಲಸಿಕೆ
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಏನಿದು? ಯಶ್ ಹೆಸರಿನಲ್ಲಿ ಸುದ್ದಿ ಆಗ್ತಿರೋ ಹೊಸ ವಿವಾದ!

ರಾಕಿಂಗ್ ಸ್ಟಾರ್ ಯಶ್ ಕೆರಿಯರ್ ನಲ್ಲಿ ಬ್ರೇಕ್ ನೀಡಿದ್ದ ಸಿನಿಮಾ 'ಕಿರಾತಕ'. ಈ ಚಿತ್ರದ ಬಳಿಕ ಯಶ್ ಮುಟ್ಟಿದ್ದೆಲ್ಲ ಚಿನ್ನವಾಯ್ತು. ಸಾಲು ಸಾಲು ಸಿನಿಮಾಗಳು ಗೆಲುವು ಕಂಡವು. ಇನ್ನು ಗೆದ್ದ ಚಿತ್ರದ ಹೆಸರಿನಲ್ಲಿ ಮತ್ತೆ ಸಿನಿಮಾಗಳು ಬರುವುದು ಹೊಸತೇನಲ್ಲ. ಅದೇ ರೀತಿ ಈಗ 'ಕಿರಾತಕ 2' ಹೆಸರಿನಲ್ಲಿ ಹೊಸ ಚಿತ್ರ ಬರುತ್ತಿದೆ.
'ಕಿರಾತಕ 2' ಸಿನಿಮಾದ ಟೈಟಲ್ ಕೇಳುತ್ತಿದ್ದ ಹಾಗೆ ಯಶ್ ಅಭಿಮಾನಿಗಳಿಗೆ ನಿರೀಕ್ಷೆ ಹುಟ್ಟುತ್ತದೆ. ಆದರೆ, ಈ ಚಿತ್ರದ ಹೆಸರು ನಿರೀಕ್ಷೆಗಳಿಗಿಂತ ವಿವಾದವನ್ನು ಸೃಷ್ಟಿ ಮಾಡಿದೆ. ಇತ್ತೀಚಿಗಷ್ಟೆ ನಿರ್ದೇಶಕ ಅನಿಲ್ ಕುಮಾರ್ ನಟ ಯಶ್ ಗೆ ಒಂದು ಸಿನಿಮಾ ಮಾಡುವುದು ಪಕ್ಕಾ ಆಗಿತ್ತು. ಅನಿಲ್ ತಮ್ಮ ಕಥೆಗೆ 'ಕಿರಾತಕ 2' ಎಂಬ ಶೀರ್ಷಿಕೆ ಸೂಕ್ತ ಎಂಬ ಕಾರಣಕ್ಕೆ ಅದೇ ಹೆಸರನ್ನು ಫಿಕ್ಸ್ ಮಾಡಿದ್ದರು.
ವರಮಹಾಲಕ್ಷ್ಮಿ ಹಬ್ಬಕ್ಕೆ ಸೆಟ್ಟೇರಲಿದೆ ಯಶ್ ಹೊಸ ಸಿನಿಮಾ
ಆದರೆ, ಇದೀಗ 'ಕಿರಾತಕ' ಸಿನಿಮಾ ನಿರ್ದೇಶಕ ಪ್ರದೀಪ್ ರಾಜ್ 'ಕಿರಾತಕ 2' ಅನ್ನು ಯಾವುದೇ ಕಾರಣಕ್ಕೆ ನೀಡುವುದಿಲ್ಲ ಎಂದಿದ್ದಾರೆ. ಅಂದಹಾಗೆ, 'ಕಿರಾತಕ 2' ಚಿತ್ರದ ಟೈಟಲ್ ವಿವಾದದ ಸಂಪೂರ್ಣ ವಿವರ ಮುಂದಿದೆ ಓದಿ..

'ಕಿರಾತಕ 2' ಹೆಸರಿನಲ್ಲಿ ಪ್ರದೀಪ್ ರಾಜ್ ಚಿತ್ರ
'ಕಿರಾತಕ 2' ಸಿನಿಮಾದ ಹೆಸರಿನಲ್ಲಿ ನಿರ್ದೇಶಕ ಪ್ರದೀಪ್ ರಾಜ್ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಈಗಾಗಲೇ ಶುರು ಆಗಿದೆ. ತಮ್ಮ ಮೊದಲ ಸಿನಿಮಾದ ಮುಂದುವರೆದ ಭಾಗ ಇದಾಗಿದೆ. ಮಂಡ್ಯದಲ್ಲಿ ಇದ್ದ ನಾಯಕನ ಪಾತ್ರ ಸಿಟಿಗೆ ಬಂದರೆ ಹೇಗಿರುತ್ತದೆ ಎನ್ನುವುದು ಈ ಚಿತ್ರದ ಕಥೆಯಾಗಿದೆ.

ಅನಿಲ್ ಚಿತ್ರಕ್ಕೆ ಕೂಡ ಅದೇ ಹೆಸರು
ಒಂದು ಕಡೆ 'ಕಿರಾತಕ 2' ಎಂಬ ಹೆಸರಿನಲ್ಲಿ ಪ್ರದೀಪ್ ರಾಜ್ ಸಿನಿಮಾ ಪ್ರಾರಂಭ ಮಾಡಿದ್ದಾರೆ. ಇತ್ತ ನಿರ್ದೇಶಕ ಅನಿಲ್ ಕುಮಾರ್ ಕೂಡ ತಮ್ಮ ಚಿತ್ರಕ್ಕೆ ಅದೇ ಟೈಟಲ್ ಫಿಕ್ಸ್ ಮಾಡಿದ್ದಾರೆ. ಪ್ರದೀಪ್ ರಾಜ್ ಚಿತ್ರದಲ್ಲಿ ಹೊಸ ಕಲಾವಿದರು ನಟಿಸಲಿದ್ದು, ಅನಿಲ್ ಸಿನಿಮಾಗೆ ಯಶ್ ಕಾಲ್ ಶೀಟ್ ನೀಡಿದ್ದಾರೆ.
ಯಶ್ ಜೊತೆಗೆ ಹೆಜ್ಜೆ ಹಾಕಲು ಓಡಿ ಬಂದ ತಮನ್ನಾ

ಸಿಟ್ಟಿಗೆದ್ದ ಪ್ರದೀಪ್ ರಾಜ್
''ನನ್ನ ಟೈಟಲ್ ನಲ್ಲಿ ಅವರು ಸಿನಿಮಾ ಮಾಡಲು ಹೇಗೆ ಸಾಧ್ಯ'' ಎಂದು ನಿರ್ದೇಶಕ ಪ್ರದೀಪ್ ರಾಜ್ ಕೋಪಗೊಂಡಿದ್ದಾರೆ. ''ನಾನು ಮತ್ತು ನೀವು ಮತ್ತೆ ಸಿನಿಮಾ ಮಾಡಿದರೆ ಮಾತ್ರ 'ಕಿರಾತಕ 2' ಟೈಟಲ್ ನೀಡುತ್ತೇನೆ. ಬೇರೆ ನಿರ್ದೇಶಕರಿಗೆ ಆ ಟೈಟಲ್ ಕೊಡುವುದಿಲ್ಲ'' ಎಂದು ಈ ಹಿಂದೆಯೇ ಯಶ್ ಅವರಿಗೆ ಪ್ರದೀಪ್ ರಾಜ್ ತಿಳಿಸಿದ್ದರಂತೆ.

ವಾಣಿಜ್ಯ ಮಂಡಳಿಗೆ ದೂರು ನೀಡಿದ ನಿರ್ದೇಶಕ
ಈ ಟೈಟಲ್ ವಿವಾದಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಪ್ರದೀಪ್ ರಾಜ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಅವರ ಟೈಟಲ್ ಅನ್ನು ಇನ್ನೊಬ್ಬರು ಬಳಕೆ ಮಾಡಬಾರದು ಎಂಬ ಉದ್ದೇಶದಿಂದ ದೂರು ಕೊಟ್ಟಿದ್ದಾರಂತೆ. ಅಲ್ಲದೆ ಯಾವುದೇ ಕಾರಣಕ್ಕೆ ಈ ಟೈಟಲ್ ಅನ್ನು ಬಿಟ್ಟುಕೊಡುವುದಿಲ್ಲ ಎಂದಿದ್ದಾರೆ.

ವಿವಾದ ಇಲ್ಲ ಎಂದ ಜಯಣ್ಣ
ಯಶ್ ಜೊತೆಗೆ ಸದ್ಯ 'ಕಿರಾತಕ 2' ಸಿನಿಮಾವನ್ನು ಮಾಡುತ್ತಿರುವುದು ನಿರ್ಮಾಪಕ ಜಯಣ್ಣ. ಇದು ಯಶ್ ಹಾಗೂ ಜಯಣ್ಣ ಕಾಂಬಿನೇಶನ್ ನಲ್ಲಿ ಬರುತ್ತಿರುವ ಆರನೇ ಚಿತ್ರವಾಗಿದೆ. ಈ ಚಿತ್ರದ ವಿವಾದದ ಬಗ್ಗೆ ಮಾತನಾಡಿರುವ ಅವರು ''ಯಾವುದೇ ವಿವಾದ ಇಲ್ಲ. ಎಲ್ಲವೂ ಸರಿ ಇದೆ. ಅಲ್ಲದೆ ನಮ್ಮ ಟೈಟಲ್ ರಿಜಿಸ್ಟರ್ ಆಗಿದೆ''. ಎಂಬ ಉತ್ತರ ನೀಡಿದ್ದಾರೆ.

ಲೊಕೇಶನ್ ಹುಡುಕಾಟ ನಡೆಯುತ್ತಿದೆ
ಸದ್ಯ ಈ ಸಿನಿಮಾಗಾಗಿ ನಿರ್ದೇಶಕ ಅನಿಲ್ ಕುಮಾರ್ ಹಾಗೂ ನಿರ್ಮಾಪಕ ಜಯಣ್ಣ ಲೊಕೇಶನ್ ಹುಡುಕಾಟ ನಡೆಸುತ್ತಿದ್ದಾರೆ. ಆಗಸ್ಟ್ 27 ರಿಂದ ಶೂಟಿಂಗ್ ಶುರು ಆಗಲಿದ್ದು, ಸದ್ಯ ದುಬೈಗೆ ಲೊಕೇಶನ್ ನೋಡಲು ಹೋಗಿದ್ದಾರೆ. ಚಿತ್ರದ ಚಿತ್ರೀಕರಣ ದುಬೈ ನಲ್ಲಿ 50 ದಿನಗಳ ನಡೆಯಲಿದ್ದು, 30 ದಿನ ಮಂಡ್ಯ, ಪಾಂಡವಪುರ ಭಾಗಗಳಲ್ಲಿ ನಡೆಯಲಿದೆಯಂತೆ.

ಯಾರ ಪಾಲಿಗೆ 'ಕಿರಾತಕ 2' ಟೈಟಲ್?
ಇತ್ತ ಅನಿಲ್ ಕುಮಾರ್ 'ಕಿರಾತಕ 2' ಹೆಸರಿನಲ್ಲಿ ಸಿನಿಮಾ ಮಾಡಲು ಸಜ್ಜಾಗಿದ್ದಾರೆ. ಅತ್ತ ಪ್ರದೀಪ್ ರಾಜ್ ಅದೇ ಹೆಸರಿನಲ್ಲಿ ಈಗಾಗಲೇ ಚಿತ್ರೀಕರಣ ಶುರು ಮಾಡಿದ್ದಾರೆ. ಮಾತ್ರವಲ್ಲ ಫಿಲ್ಮ್ ಚೆಂಬರ್ ಗೆ ದೂರು ನೀಡಿದ್ದಾರೆ. ಮತ್ತೊಂದು ಕಡೆ ನಿರ್ಮಾಪಕ ಜಯಣ್ಣ ಯಾವುದೇ ವಿವಾದ ಇಲ್ಲ ಎಂದಿದ್ದಾರೆ. ಈ ಎಲ್ಲ ಬೆಳೆವಣಿಗೆಗಳಲ್ಲಿ 'ಕಿರಾತಕ 2' ಟೈಟಲ್ ಪಾಲಿಗೆ ಸಿಗಲಿದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.