For Quick Alerts
  ALLOW NOTIFICATIONS  
  For Daily Alerts

  'ಕೆಜಿಎಫ್' ನಂತರ ಮತ್ತೆ 'ಕಿರಾತಕ' ಆಗ್ತಾರಾ ಅಣ್ತಮ್ಮ ಯಶ್ ?

  By Naveen
  |

  ನಟ ಯಶ್ 'ಕೆಜಿಎಫ್' ಸಿನಿಮಾ ತಯಾರಿಯಲ್ಲಿ ಇದ್ದಾರೆ. ಈ ಸಿನಿಮಾಗಾಗಿ ಯಶ್ ಅವರ ಅಭಿಮಾನಿಗಳು ಸಹ ಕಾಯುತ್ತಿದ್ದಾರೆ. ಆದರೆ, ಈ ಚಿತ್ರದ ಜೊತೆಗೆ ಈಗ ಯಶ್ ಮತ್ತೆ 'ಕಿರಾತಕ' ಆಗಲು ಹೊರಟಿದ್ದಾರೆ.

  ಇತ್ತೀಚಿಗಷ್ಟೆ 'Rambo 2' ಸಿನಿಮಾದ ನಿರ್ದೇಶಕ ಅನಿಲ್ ಕುಮಾರ್ ನಟ ಯಶ್ ಗೆ ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಈಗ ಈ ಚಿತ್ರಕ್ಕೆ 'ಕಿರಾತಕ 2' ಎಂಬ ಹೆಸರನ್ನು ಇಡಲಾಗಿದೆಯಂತೆ. ಈ ಚಿತ್ರದಲ್ಲಿ ಮತ್ತೆ ಮಂಡ್ಯ ಹುಡುಗನ ಗೆಟಪ್ ನಲ್ಲಿ ಅಣ್ತಮ್ಮನಾಗಿ ಯಶ್ ಮಿಂಚಲಿದ್ದಾರಂತೆ.

  ಮತ್ತೊಬ್ಬ ನಿರ್ದೇಶಕನಿಗೆ ಸಿಕ್ತು ಯಶ್ ಕಾಲ್ ಶೀಟ್ ಮತ್ತೊಬ್ಬ ನಿರ್ದೇಶಕನಿಗೆ ಸಿಕ್ತು ಯಶ್ ಕಾಲ್ ಶೀಟ್

  'ಕಿರಾತಕ' ಸಿನಿಮಾ 2011ರಲ್ಲಿ ಬಿಡುಗಡೆಯಾಗಿದ್ದು, ಯಶ್ ಕೆರಿಯರ್ ನಲ್ಲಿ ದೊಡ್ಡ ಬ್ರೇಕ್ ಕೊಟ್ಟ ಸಿನಿಮಾ ಇದಾಗಿತ್ತು. ಪ್ರದೀಪ್ ರಾಜ್ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಇದೀಗ ಏಳು ವರ್ಷಗಳ ನಂತರ ಮತ್ತೆ ಅದೇ ಟೈಟಲ್ ನಲ್ಲಿ ಸಿನಿಮಾ ಬರುತ್ತಿದೆ.

  Yashs new movie may be titeld as Kirathaka 2

  ಅಂದಹಾಗೆ, 'ಕೆ ಜಿ ಎಫ್' ನಂತರ 'ಕೆ ಜಿ ಎಫ್' ಎರಡನೇ ಭಾಗ ಬರಲಿದೆ. ಆ ಬಳಿಕ ನಿರ್ದೇಶಕ ಹರ್ಷ ಚಿತ್ರದಲ್ಲಿ ಯಶ್ ನಟಿಸಲಿದ್ದಾರೆ. ಅದು ಮುಗಿದ ಮೇಲೆ 'ಮಫ್ತಿ' ಖ್ಯಾತಿಯ ನರ್ತನ್ ಅವರು ಯಶ್ ಗೆ ಡೈರೆಕ್ಷನ್ ಮಾಡಲಿದ್ದಾರೆ. ಈ ಎಲ್ಲ ಸಿನಿಮಾಗಳ ಜೊತೆಗೆ ಈಗ ಯಶ್ 'ಕಿರಾತಕ 2' ಸಿನಿಮಾವನ್ನು ಶುರು ಮಾಡಲಿದ್ದಾರೆ.

  English summary
  Rocking Star Yash's new movie which will be directed by Kannada Director Anil Kumar maybe titeld as 'Kirathaka 2'. 'Rambo 2'

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X