Toxic the Movie: ಎಚ್ಚರ.. ಎಚ್ಚರ.. ಎಚ್ಚರ; 'ಟಾಕ್ಸಿಕ್' ಟೀಂ ಎಚ್ಚರಿಕೆ ಕೊಟ್ಟಿದ್ದು ಯಾರಿಗೆ? ಯಾಕೆ?

ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಇತ್ತೀಚೆಗೆ ಸೆಟ್ಟೇರಿದೆ. ಸದ್ದಿಲ್ಲದೇ ಸಿನಿಮಾ ಚಿತ್ರೀಕರಣ ಕೂಡ ಶುರುವಾಗಿದೆ. ಮಹತ್ವಾಕಾಂಕ್ಷೆಯ ಚಿತ್ರಕ್ಕಾಗಿ ಹಾಲಿವುಡ್ ತಂತ್ರಜ್ಞರು ಅಖಾಡಕ್ಕೆ ಇಳಿದಿದ್ದಾರೆ. ಅದ್ಭುತ ಪ್ರತಿಭೆಗಳ ತಂಡ ಕಟ್ಟಿಕೊಂಡು ಯಶ್ ಸಾಹಸಕ್ಕೆ ಕೈ ಹಾಕಿದ್ದಾರೆ.

ಗೀತು ಮೋಹನ್ ದಾಸ್ ನಿರ್ದೇಶನದ ಚಿತ್ರವನ್ನು ಕೆ. ವಿ. ಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ಬಜೆಟ್ 150 ಕೋಟಿ ರೂ. ದಾಟಲಿದೆ ಎನ್ನುವ ಅಂದಾಜಿದೆ. ಯಶ್ ಬಿಟ್ಟು ಇನ್ನುಳಿದ ತಾರಾಗಣದ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಸದ್ಯಕ್ಕೆ ಹೆಚ್‌ಎಂಟಿ ಫ್ಯಾಕ್ಟರಿ ಆವರಣದಲ್ಲಿ ಹಾಕಿರುವ ಸೆಟ್‌ನಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ.

Yash s Toxic makers warn of legal action against those leaking photos videos from sets

ಸೆಟ್‌ಬಾಯ್ ಕೈಯಲ್ಲಿ ಯಶ್ 'ಟಾಕ್ಸಿಕ್' ಚಿತ್ರಕ್ಕೆ ಕ್ಲ್ಯಾಪ್ ಮಾಡಿಸಿದ್ದರು. ಇನ್ನು ನಿರ್ದೇಶಕಿ ಗೀತು ಮೋಹನ್ ದಾಸ್ ಪತಿ ರಾಜೀವ್ ರವಿ ಚಿತ್ರದ ಛಾಯಾಗ್ರಹಣ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ರಾಷ್ಟ್ರಪ್ರಶಸ್ತಿಯನ್ನು ಪಡೆದಿರುವ ಛಾಯಾಗ್ರಾಹಕ ಚಿತ್ರವನ್ನು ಕಟ್ಟಿಕೊಡುತ್ತಿರುವುದು ಕುತೂಹಲ ಮೂಡಿಸಿದೆ. ಹಾಲಿವುಡ್‌ನ ಸ್ಟೀವನ್ ಗ್ರಿಫಿನ್ ಇದೀಗ 'ಟಾಕ್ಸಿಕ್' ಚಿತ್ರದ 2ನೇ ಯೂನಿಟ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ.

'ಮ್ಯಾಡ್ ಮ್ಯಾಕ್ಸ್: ಫ್ಯೂರಿ ರೋಡ್', 'ಫಾಸ್ಟ್ ಎಕ್ಸ್', 'ದಿ ಬ್ಯಾಟ್‌ಮನ್' ರೀತಿ ಹಾಲಿವುಡ್ ಹಿಟ್ ಸಿನಿಮಾಗಳಿಗೆ ಸ್ಟೀವನ್ ಗ್ರಿಫಿನ್ ಕೆಲಸ ಮಾಡಿದ್ದರು. 'ಟಾಕ್ಸಿಕ್' ಮುಹೂರ್ತ ಸಮಾರಂಭದಲ್ಲಿ ಕೂಡ ಅವರು ಭಾಗಿ ಆಗಿದ್ದರು. ಇನ್ನು ಹಾಲಿವುಡ್ ಸ್ಟಂಟ್ ಡೈರೆಕ್ಟರ್ ಜೆ. ಜೆ ಪೆರ್ರಿ 'ಟಾಕ್ಸಿಕ್' ಚಿತ್ರದಲ್ಲಿ ಕೆಲಸ ಮಾಡುವುದು ಖಚಿತವಾಗಿದೆ. ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ ಇದು ಹಾಲಿವುಡ್ ಲೆವೆಲ್ ಸಿನಿಮಾ. ಅದಕ್ಕೆ ತಕ್ಕಂತೆ ಮೇಕಿಂಗ್, ರಿಲೀಸ್ ಪ್ಲ್ಯಾನ್ ನಡೀತಿದೆ.

ವಿದೇಶಿ ಭಾಷೆಗಳಲ್ಲಿ ಕೂಡ 'ಟಾಕ್ಸಿಕ್' ಸಿನಿಮಾ ಡಬ್ ಆಗಿ ಬಿಡುಗಡೆ ಆಗಲಿದೆ. ಎಲ್ಲಾ ಸಿದ್ಧತೆಯೊಂದಿಗೆ ಟೀಂ ಚಿತ್ರೀಕರಣ ಆರಂಭಿಸಿದೆ. ಇನ್ನು ಯಶ್ ಮತ್ತೊಮ್ಮೆ ಗ್ಯಾಂಗ್‌ಸ್ಟರ್ ಪಾತ್ರದಲ್ಲೇ ನಟಿಸುತ್ತಾರೆ ಎನ್ನಲಾಗ್ತಿದೆ. ಇತ್ತೀಚೆಗೆ ಹೇರ್‌ಸ್ಟೈಲ್ ಕೊಂಚ ಬದಲಿಸಿಕೊಂಡು ಕಾಣಿಸಿಕೊಳ್ಳುತ್ತಿದ್ದಾರೆ. ಅದೇ ಲುಕ್ ಚಿತ್ರದಲ್ಲಿ ಇರಲಿದೆ. ಈಗಾಗಲೇ ಸಿನಿಮಾ ಚಿತ್ರೀಕರಣದ ಕೆಲ ಫೋಟೊ, ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿದೆ.

Yash s Toxic makers warn of legal action against those leaking photos videos from sets

'ಟಾಕ್ಸಿಕ್' ಮೇಕಿಂಗ್ ಸ್ಟಿಲ್ಸ್ ನೋಡಿ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ. ಆದರೆ ಚಿತ್ರತಂಡ ಈ ರೀತಿ ಫೋಟೊ, ವೀಡಿಯೋ ಪೋಸ್ಟ್ ಮಾಡುವವರಿಗೆ ಖಡಕ್ ಎಚ್ಚರಿಕೆ ಕೊಟ್ಟಿದೆ. ಕಾನೂನು ಕ್ರಮದ ಮುಂದಾಗುವುದಾಗಿ ತಿಳಿಸಿದೆ. ಬಹುನಿರೀಕ್ಷಿತ ಸಿನಿಮಾ 'ಟಾಕ್ಸಿಕ್'. ಹಾಗಾಗಿ ಚಿತ್ರದ ಬಗ್ಗೆ ಯಾವುದೇ ಅಪ್‌ಡೇಟ್, ಫೋಟೊ, ವೀಡಿಯೋ ಇದ್ದರೆ ಚಿತ್ರತಂಡವೇ ಅಧಿಕೃತವಾಗಿ ಬಿಡುಗಡೆ ಮಾಡುತ್ತದೆ.

ಮೇಕಿಂಗ್ ಹಂತದಲ್ಲೇ ರೀತಿ ಫೋಟೊ, ವಿಡಿಯೋ ಹೊರಬಂದರೆ ಕುತೂಹಲ ಕಮ್ಮಿ ಆಗುತ್ತದೆ. ಇದು ಸಿನಿಮಾ ಮೇಲೆ ಕೂಡ ಕೆಟ್ಟ ಪರಿಣಾಮ ಬೀರುತ್ತದೆ. ಅದೇ ಕಾರಣಕ್ಕೆ ಸಾಕಷ್ಟು ಚಿತ್ರತಂಡಗಳು ಸೆಟ್‌ನಲ್ಲಿ ಯಾವುದೇ ಫೋನ್ ಬಳಸದಂತೆ ಎಲ್ಲರಿಗೂ ಎಚ್ಚರಿಕೆ ಕೊಡುತ್ತದೆ. ಯಾರು ಮೊಬೈಲ್ ಫೋನ್ ಸೆಟ್‌ಗೆ ತರಬೇಡಿ ಎಂದು ತಾಕೀತು ಮಾಡುತ್ತದೆ. 'ಟಾಕ್ಸಿಕ್' ತಂಡ ಕೂಡ ಈ ವಿಚಾರದಲ್ಲಿ ಬಹಳ ಮುನ್ನೆಚ್ಚರಿಕೆ ವಹಿಸಿದೆ. ಆದರೂ ಈ ರೀತಿ ಆಗಿರುವುದು ಬೇಸರ ತಂದಿದೆ.

ಸದ್ಯ ಸೋಶಿಯಲ್ ಮೀಡಿಯಾದಲ್ಲಿ 'ಟಾಕ್ಸಿಕ್' ಸಿನಿಮಾ ಮೇಕಿಂಗ್ ಫೋಟೊ, ವೀಡಿಯೋ ಪೋಸ್ಟ್ ಮಾಡುವವರ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಚಿತ್ರತಂಡ ಫಿಲ್ಮಿಬೀಟ್‌ಗೆ ಮಾಹಿತಿ ನೀಡಿದೆ. ಈ ಬಗ್ಗೆ ನಮ್ಮ ಲೀಗಲ್ ಟೀಂ ಕಾರ್ಯಪ್ರವೃತ್ತವಾಗಿದೆ. ಯಾರೂ ಕೂಡ ಇಂತಹ ಫೋಟೊ, ವೀಡಿಯೋ ಹಂಚಿಕೊಳ್ಳಬೇಡಿ, ಇದನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ತಿಳಿಸಿದೆ.

More from Filmibeat

English summary
Shooting for Yash starrer toxic on in full swing at Bengaluru;
Read more about: filmibeat original yash toxic
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X