ಜೋಕರ್, ಗ್ಯಾಂಬ್ಲರ್, ಕೌಬಾಯ್, ಗ್ಯಾಂಗ್‌ಸ್ಟರ್: ಟೀಸರ್‌ನಲ್ಲೇ ಇಷ್ಟೆಲ್ಲಾ ಮ್ಯಾಟ್ರು ಇದ್ಯಾ? 'ಟಾಕ್ಸಿಕ್' ಕಥೆ ಅದೇನಾ?

ಅಂತೂ ಇಂತೂ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಟೈಟಲ್ ಸಮೇತ ಮುಂದಿನ ಸಿನಿಮಾ ಘೋಷಣೆ ಮಾಡಿದ್ದಾರೆ. ಕೆವಿಎನ್‌ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಗೀತು ಮೋಹನ್ ದಾಸ್ ಸಿನಿಮಾ ನಿರ್ದೇಶನ ಮಾಡುವುದು ಪಕ್ಕಾ ಆಗಿದೆ. ಜೊತೆಗೆ ಸಿನಿಮಾ ರಿಲೀಸ್ ಡೇಟ್ ಕೂಡ ಘೋಷಣೆ ಆಗಿದೆ.

ಸಣ್ಣ ಟೈಟಲ್ ಟೀಸರ್ ರಿಲೀಸ್ ಮಾಡಿ ಯಶ್ ತಮ್ಮ ಮುಂದಿನ ಸಿನಿಮಾ ಬಗ್ಗೆ ಕುತೂಹಲ ಹುಟ್ಟುವಂತೆ ಮಾಡಿದ್ದಾರೆ. ಎಲ್ಲಾ ಭಾಷೆಗಳಿಗೂ ಸೂಕ್ತ ಎನ್ನುವಂತೆ ಇಂಗ್ಲೀಷ್ ಪದವನ್ನು ಚಿತ್ರಕ್ಕೆ ಟೈಟಲ್ ಆಗಿ ಫಿಕ್ಸ್ ಮಾಡಿದ್ದಾರೆ. ಟೈಟಲ್, ಟೀಸರ್ ಎಲ್ಲಾ ನೋಡುತ್ತಿದ್ದರೆ ಇದು ಡ್ರಗ್ಸ್ ಮಾಫಿಯಾ ಕುರಿತಾದ ಸಿನಿಮಾ ಎನ್ನುವುದು ಎಲ್ಲರಿಗೂ ಗೊತ್ತಾಗುತ್ತಿದೆ. ಯಶ್ ಅಭಿಮಾನಿಗಳಂತೂ ಪದೇ ಪದೆ ಟೀಸರ್‌ ನೋಡುತ್ತಿದ್ದಾರೆ. ಬೂತ ಕನ್ನಡಿ ಹಿಡಿದು ಕತೆ ಬಗ್ಗೆ ಏನಾದರೂ ಸುಳಿವು ಸಿಗುತ್ತಾ? ಎಂದು ನೋಡುತ್ತಿದ್ದಾರೆ.

Yashs Toxic title announcement teaser: Breakdown and Intriguing Plot Insights

ಟೈಟಲ್ ಅನೌನ್ಸ್‌ಮೆಂಟ್ ಟೀಸರ್‌ನಲ್ಲೇ 'ಟಾಕ್ಸಿಕ್' ಸಿನಿಮಾ ಕತೆ ಬಗ್ಗೆ ಸಾಕಷ್ಟು ವಿಚಾರಗಳನ್ನು ಬಿಟ್ಟುಕೊಟ್ಟಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ. ಮುಖ್ಯವಾಗಿ ಪದೇ ಪದೆ ಬರುವ ಜೋಕರ್ ಚಿತ್ರಗಳು, ಪೌಡರ್‌ ಚೆಲ್ಲಿದಂತೆ ಯಶ್ ಲುಕ್ ಬದಲಾಗುವುದು, ಟೈಟಲ್ ಫಾಂಟ್ ಡಿಸೈನ್ ಎಲ್ಲವೂ ಕುತೂಹಲ ಕೆರಳುವಂತೆ ಮಾಡಿದೆ.

ಜೋಕರ್ ಚಿತ್ರ ಇರುವ ಉತ್ಸವದ ಟಿಕೆಟ್‌ ಮೂಲಕ 'ಟಾಕ್ಸಿಕ್' ಚಿತ್ರದ ಟೀಸರ್ ಶುರುವಾಗುತ್ತದೆ. ಬಳಿಕ ಒಂದಷ್ಟು ಸುಟ್ಟಂತೆ ಕಾಣುವ ಟಿಕೆಟ್‌ಗಳು ಹಾರಾಡಲು ಶುರುವಾಗುತ್ತದೆ. ನಡುವೆ ರಾಕಿಂಗ್ ಸ್ಟಾರ್ ಯಶ್ ಲುಕ್ ರಿವೀಲ್ ಆಗುತ್ತದೆ. ಅದು ಪೌಡರ್ ಚೆಲ್ಲಿದಂತೆ ಹುರಿ ಮೀಸೆಯ ಖಡಕ್ ಲುಕ್‌ನಲ್ಲಿ ಯಶ್ ದರ್ಶನವಾಗುತ್ತದೆ. ಮುಂದೆ ಸಾಗುತ್ತಿದ್ದಂತೆ ಕ್ಯಾಪ್ ತೊಟ್ಟ ಯಶ್ ಸಿಗಾರ್ ಹಿಡಿದು, ಗನ್ ಹಿಡಿದು ಕಾಣಿಸಿಕೊಂಡಿದ್ದಾರೆ. ಇದು ಹಾಲಿವುಡ್ ಸಿನಿಮಾಗಳ ಡ್ರಗ್ ಮಾಫಿಯಾ ಡಾನ್‌ಗಳನ್ನು ನೆನಪಿಸುವಂತಿದೆ.

Yashs Toxic title announcement teaser: Breakdown and Intriguing Plot Insights

ಥ್ರಿಡಿ ಎಫೆಕ್ಟ್‌ ರೀತಿ ಇಡೀ ಟೀಸರ್‌ನ ಚಂದಗಾಣಿಸಿದ್ದಾರೆ. ಅಷ್ಟೇ ಅಲ್ಲ ಕುತೂಹಲ ಹುಟ್ಟುವಂತೆ ಮಾಡಿದ್ದಾರೆ. ಜೋಕರ್, ಗ್ಯಾಂಬ್ಲರ್, ಕೌಬಾಯ್, ಗ್ಯಾಂಗ್‌ಸ್ಟರ್ ಹೀಗೆ ನಾನಾ ರೀತಿಯಲ್ಲಿ ಅಭಿಮಾನಿಗಳು ಚಿತ್ರದಲ್ಲಿ ಯಶ್ ಪಾತ್ರವನ್ನು ಊಹಿಸಿಕೊಳ್ಳುತ್ತಿದ್ದಾರೆ. ಜೋಕರ್ ರೀತಿ ಗ್ರೇಶೇಡ್‌ ಪಾತ್ರದಲ್ಲಿ ಯಶ್‌ ನಟಿಸುತ್ತಾರೆ ಎನ್ನುವುದು ಬಹುತೇಕರ ಲೆಕ್ಕಾಚಾರ. 60ರ ದಶಕದ ಗೋವಾ ಡ್ರಗ್ಸ್ ಮಾಫಿಯಾ ಕಥೆ ಚಿತ್ರದಲ್ಲಿ ಎನ್ನುವ ಊಹಾಪೋಹ ಕೂಡ ಇದೆ. ಯಶ್ ಕೌಬಾಯ್‌ ಗ್ಯಾಂಗ್‌ಸ್ಟರ್ ಆಗಿ ನಟಿಸುತ್ತಾರಾ? ಎನ್ನುವ ಅನುಮಾನವೂ ಕೆಲವರನ್ನು ಕಾಡುತ್ತಿದೆ.

ಪೋರ್ಚುಗೀಸರ ಕಾಲದಿಂದಲೂ ಗೋವಾದಲ್ಲಿ ಪ್ರತಿವರ್ಷ ಉತ್ಸವ ನಡೆಯುತ್ತದೆ. ಸಾವಿರಾರು ಜನ ಇದರಲ್ಲಿ ಭಾಗವಹಿಸುತ್ತಾರೆ. ಈ ವೇಳೆ ಡ್ರಗ್ಸ್ ದಂಧೆ ನಡೆಯುತ್ತದೆ. 60-70ರ ದಶಕದಲ್ಲಿ ಇದು ಬಹಳ ತಾರಕಕ್ಕೇರಿತ್ತು. ಇದರ ಸುತ್ತಾ 'ಟಾಕ್ಸಿಕ್' ಕಥೆ ಸುತ್ತುತ್ತದೆ ಎನ್ನುವುದು ಕೆಲವರ ವಾದ.

ಸರ್ಕಸ್‌ನಲ್ಲಿ ಜೋಕರ್ ಆಗಿ ನಟಿಸುವ ವ್ಯಕ್ತಿ ದೊಡ್ಡ ಗ್ಯಾಂಗ್‌ಸ್ಟರ್ ಆಗುವ ಕಥೆ 'ಟಾಕ್ಸಿಕ್' ಚಿತ್ರದಲ್ಲಿದ್ಯಾ? ಎನ್ನುವ ಚರ್ಚೆ ಕೂಡ ನಡೀತಿದೆ. ಕೆಲ ದಿನಗಳ ಹಿಂದೆ ನಟ ಯಶ್ ಫ್ಯಾಮಿಲಿ ಸಮೇತ ಗೋವಾ ಪ್ರವಾಸ ಕೈಗೊಂಡಿದ್ದರು. ಆ ಸಮಯದಲ್ಲಿ ಕ್ಲಿಕ್ಕಿಸಿದ್ದ ಫೋಟೊವೊಂದರಲ್ಲಿ ಯಶ್ ಕೈ ಮೇಲಿದ್ದ ಟ್ಯಾಟೂ ಕೂಡ ಸಾಕಷ್ಟು ಚರ್ಚೆ ಹುಟ್ಟಾಕ್ಕಿತ್ತು.

ಇನ್ನು ಯಶ್ ತಮ್ಮ ಟ್ವೀಟ್‌ನಲ್ಲಿ ಬರೆದುಕೊಂಡಿರುವ "ನೀವು ಹುಡುಕುತ್ತಿರುವುದು ನಿಮ್ಮನ್ನು ಹುಡುಕುತ್ತದೆ" - ರೂಮಿ ಸಾಲುಗಳು "ವಯಸ್ಕರಿಗೆ ಒಂದು ಕಾಲ್ಪನಿಕ ಕತೆ ಕೂಡ ಆಗಿದೆ" ಎನ್ನುವ ಚಿತ್ರದ ಸಬ್‌ಟೈಟಲ್ ಕೂಡ 'ಟಾಕ್ಸಿಕ್' ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿದೆ.

More from Filmibeat

English summary
Yash- Geethu mohandas's Toxic teaser Decoding the Hidden Clues.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X