»   » ಯಶ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಕಾಲಿವುಡ್ ಸಿನಿಮಾ ಮಂದಿ

ಯಶ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಕಾಲಿವುಡ್ ಸಿನಿಮಾ ಮಂದಿ

Posted By:
Subscribe to Filmibeat Kannada
ಯಶ್ ಕೆಜಿಎಫ್ ಮೇಕಿಂಗ್ ಫೋಟೋಸ್ ರಿಲೀಸ್ | ಕಾಲಿವುಡ್ ನಿಂದ ಸಿಹಿ ಸುದ್ದಿ | Filmibeat Kannada

ಕನ್ನಡ ಸಿನಿಮಾರಂಗದಲ್ಲಿ ಬಹು ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗಳಲ್ಲಿ ಮೊದಲ ಸ್ಥಾನದಲ್ಲಿ ಗಿಟ್ಟಿಸಿಕೊಂಡಿರುವ ಚಿತ್ರ ಯಶ್ ಅಭಿನಯದ 'ಕೆ.ಜಿ.ಎಫ್'. 'ಸಂತು ಸ್ಟ್ರೈಟ್ ಫಾರ್ವರ್ಡ್' ಸಿನಿಮಾದ ನಂತ್ರ ಯಶ್ ಅಭಿನಯಿಸುತ್ತಿರುವ ಸಿನಿಮಾ ಇದು.

ಸಿಂಗಲ್ ಪೋಸ್ಟರ್ ನಿಂದಲೇ ಇಡೀ ಕನ್ನಡ ಸಿನಿಮಾರಂಗದಲ್ಲಿ ಕುತೂಹಲ ಕೆರಳಿಸಿರುವ 'ಕೆ.ಜಿ.ಎಫ್' ಸದ್ಯ ಚಿತ್ರೀಕರಣದ ಕೊನೆಯ ಹಂತ ತಲುಪಿದೆ. ಹೀಗಿರುವಾಗಲೇ, ಸಿನಿಮಾತಂಡ ಚಿತ್ರದ ಮೇಕಿಂಗ್ ಸ್ಟಿಲ್ಸ್ ಬಿಡುಗಡೆ ಮಾಡಿದೆ.

'ಕೆ.ಜಿ.ಎಫ್' ಚಿತ್ರದ ಮೇಕಿಂಗ್ ನೋಡಿರುವ ತಮಿಳು ಚಿತ್ರರಂಗದ ಅನೇಕರು 'ಕೆ.ಜಿ.ಎಫ್' ಸಿನಿಮಾ ತಂಡಕ್ಕೆ ಹಾಗೂ ರಾಕಿಂಗ್ ಸ್ಟಾರ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಮುಂದೆ ಓದಿರಿ...

ಮೇಕಿಂಗ್ ಸ್ಟಿಲ್ ಬಿಡುಗಡೆ ಮಾಡಿದ ಚಿತ್ರತಂಡ

'ರಾಕಿಂಗ್ ಸ್ಟಾರ್' ಯಶ್ ಅಭಿನಯದ 'ಕೆ.ಜಿ.ಎಫ್' ಸಿನಿಮಾದ ಮೇಕಿಂಗ್ ಸ್ಟಿಲ್ಸ್ ಔಟ್ ಆಗಿದೆ. ಪೋಸ್ಟರ್ ಬಿಡುಗಡೆ ಆದ ಮೂರು ತಿಂಗಳ ನಂತರ ಯಶ್ ಹೊಸ ಲುಕ್ ದರ್ಶನ ಮಾಡುವ ಅವಕಾಶ ಅಭಿಮಾನಿಗಳಿಗೆ ಸಿಕ್ಕಿದೆ.

ತಮಿಳುನಾಡಿನಲ್ಲಿ ಸೌಂಡ್ ಮಾಡ್ತಿದೆ ಕನ್ನಡ ಸಿನಿಮಾ

ಹಾಗ್ನೋಡಿದ್ರೆ, 'ಕೆ.ಜಿ.ಎಫ್' ಚಿತ್ರದ ಮೇಕಿಂಗ್ ಸ್ಟಿಲ್ ಗಳನ್ನ ರಿಲೀಸ್ ಮಾಡಿರುವುದು ಕಾಲಿವುಡ್ ಸಿನಿಮಾ ಮಂದಿ. ಕನ್ನಡ ಸೇರಿದಂತೆ ಹಿಂದಿ, ತೆಲುಗು ಹಾಗೂ ತಮಿಳಿನಲ್ಲಿ 'ಕೆ.ಜಿ.ಎಫ್' ಸಿನಿಮಾ ಬಿಡುಗಡೆಯಾಗುತ್ತಿದೆ. ಸದ್ಯ ಬಿಡುಗಡೆಗೆ ಸಿದ್ಧವಾಗಿರುವ ಸಿನಿಮಾದ ಮೇಕಿಂಗ್ ಸ್ಟಿಲ್ಸ್ ನೋಡಿ ಕಾಲಿವುಡ್ ಸಿನಿಮಾ ಮೇಕರ್ಸ್ ಖುಷಿಯಾಗಿದ್ದಾರೆ

ಭಾರತೀಯ ಸಿನಿಮಾರಂಗವೇ ಇಂಪ್ರೆಸ್

ಸದ್ಯ ಮೇಕಿಂಗ್ ವಿಷ್ಯೂವಲ್ಸ್ ನೋಡಿರುವ ಕಾಲಿವುಡ್ ಸಿನಿಮಾರಂಗದವ್ರು 'ಕೆ.ಜಿ.ಎಫ್' ಭಾರತೀಯ ಸಿನಿಮಾರಂಗದಲ್ಲೇ ಹೊಸ ರೀತಿಯ ಸಿನಿಮಾ ಆಗುತ್ತೆ ಎಂದು ಭವಿಷ್ಯ ನುಡಿದಿದ್ದಾರೆ. ಮೇಕಿಂಗ್ ಕ್ವಾಲಿಟಿಯ ಗುಣಮಟ್ಟ ತುಂಬಾ ಚೆನ್ನಾಗಿದೆ ಎಂದು ಹೊಗಳಿದ್ದಾರೆ.

ರಾಕಿಂಗ್ ಲುಕ್ ಬಗ್ಗೆ ಹೆಚ್ಚಾಯ್ತು ಕುತೂಹಲ

ಸದ್ಯ ಬಿಡುಗಡೆಯಾಗಿರುವ ಮೇಕಿಂಗ್ ಸ್ಟಿಲ್ಸ್ ನೋಡಿ ಯಶ್ ಪಾತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ. ವೈಟ್ ಅಂಡ್ ವೈಟ್ ಡ್ರೆಸ್ ನಲ್ಲಿ ಯಶ್ ಕ್ಯಾಬ್ ಡ್ರೈವರ್ ಲುಕ್ ನೋಡಿ ಸಿನಿಮಾದಲ್ಲಿ ಎರಡು ಮೂರು ಶೇಡ್ ಇರಬಹುದಾ ಅಂತ ಅಭಿಮಾನಿಗಳು ಯೋಚನೆ ಮಾಡ್ತಿದ್ದಾರೆ.

'ಕೆ.ಜಿ.ಎಫ್' ರಿಲೀಸ್ ಆಗೋದು ಯಾವಾಗ

ಸಿನಿಮಾ ಪೋಸ್ಟರ್, ಮೇಕಿಂಗ್ ಸ್ಟಿಲ್ಸ್ ಹಾಗೂ ಚಿತ್ರದ ಬಗ್ಗೆ ಕೇಳಿ ಬರುತ್ತಿರೋ ಮಾತುಗಳನ್ನ ಕೇಳಿ ಅಭಿಮಾನಿಗಳು ಚಿತ್ರದ ನೋಡಲು ತುದಿ ಕಾಲಲ್ಲಿ ನಿಂತಿದ್ದಾರೆ. ನಾಲ್ಕು ಭಾಷೆಯಲ್ಲಿ ನಿರ್ಮಾಣವಾಗುತ್ತಿರೋದ್ರಿಂದ ರಾಕಿಂಗ್ ಸ್ಟಾರ್ ಬೆಳ್ಳಿ ಪರದೆ ಮೇಲೆ ಅಭಿಮಾನಿಗಳಿಗೆ ದರ್ಶನ ನೀಡೋದು ಮುಂದಿನ ವರ್ಷವೇ.

English summary
Yash starrer KGF's making stills are out.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada