"ಡ್ಯಾಡಿ ಬ್ಯಾಡ್ ಬಾಯ್.. ಮಮ್ಮಿ ಗುಡ್ ಗರ್ಲ್" ಎಂದ ಯಥರ್ವ್ ಹಳೇ ವಿಡಿಯೋ ಮತ್ತೆ ವೈರಲ್; ಯಶ್ ಪ್ರತಿಕ್ರಿಯೆ ಏನಿತ್ತು?
ಸೋಶಿಯಲ್ ಮೀಡಿಯಾನೇ ಹಾಗೆ. ಯಾವತ್ತಿನದ್ದೋ ವಿಡಿಯೋ ಇನ್ಯಾವತ್ತೋ ವೈರಲ್ ಆಗಿ ಬಿಡುತ್ತವೆ. ಅಭಿಮಾನಿಗಳು ಮತ್ತೆ ಆ ವಿಡಿಯೋಗಳನ್ನು ನೆನಪಿಸಿಕೊಂಡು ಕಾಮೆಂಟ್ ಮಾಡುವುದಕ್ಕೆ ಶುರುವಿಟ್ಟುಕೊಳ್ಳುತ್ತಾರೆ. ಅದರಲ್ಲೂ ಸೆಲೆಬ್ರಿಟಿಗಳ ಜೀವನದಲ್ಲಿ ಈ ಘಟನೆ ಪ್ರತಿ ದಿನವೂ ನಡೆಯುತ್ತಲೇ ಇರುತ್ತೆ. ರಾಕಿ ಭಾಯ್ ಯಶ್ ಹಾಗೂ ರಾಧಿಕಾ ಪಂಡಿತ್ ಲೈಫ್‌ನಲ್ಲೂ ಇದೆಲ್ಲ ಕಾಮನ್ ಆಗಿಬಿಟ್ಟಿದೆ.
ನಟಿ ರಾಧಿಕಾ ಪಂಡಿತ್ ಆಗಾಗ ತಮ್ಮ ಮಕ್ಕಳ ಫೋಟೊ ಹಾಗೂ ವಿಡಿಯೋಗಳನ್ನು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಪುತ್ರ ಯಥರ್ವ್ ಹಾಗೂ ಪುತ್ರಿ ಐರಾ ಅವರೊಂದಿಗೆ ಕಳೆದ ಕೆಲವು ಫನ್ನಿ ಸನ್ನಿವೇಶಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಎರಡು ವರ್ಷಗಳ ಹಿಂದೆ ಇಂತಹದ್ದೇ ಒಂದು ವಿಡಿಯೋವನ್ನು ರಾಧಿಕಾ ಪಂಡಿತ್ ಶೇರ್ ಮಾಡಿದ್ದರು. ಅದೀಗ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಈ ವಿಡಿಯೋದಲ್ಲಿ ಯಶ್ ಪುತ್ರ ಯಥರ್ವ್ ಅಪ್ಪ ಮೇಲೆ ಮುನಿಸಿಕೊಂಡಿದ್ದ. ಅಳು ಮುಖದಲ್ಲೇ "ಡ್ಯಾಡಿ ಬ್ಯಾಡ್ ಬಾಯ್" ಎಂದು ಹೇಳಿದ್ದ ವಿಡಿಯೋ ಎರಡು ವರ್ಷಗಳ ಹಿಂದೆ ವೈರಲ್ ಆಗಿತ್ತು. ಈಗ ದಿಢೀರನೇ ಮತ್ತೆ ಅದೇ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವುದಕ್ಕೆ ಶುರು ಮಾಡಿದೆ. ಮಗನಿಗೆ ಅಪ್ಪ ಯಶ್ ಕೊಟ್ಟ ಪ್ರತಿಕ್ರಿಯೆಗೆ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಏನಿದೆ? ತಿಳಿಯಲು ಮುಂದೆ ಓದಿ.
ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಸ್ಯಾಂಡಲ್‌ವುಡ್‌ನ ಕ್ಯೂಟ್ ಜೋಡಿ. ಯಶ್ ತಮ್ಮ ಕೆಲಸದಲ್ಲಿ ಅದೆಷ್ಟೇ ಬ್ಯುಸಿಯಾಗಿದ್ದರೂ ಫ್ಯಾಮಿಲಿಗೋಸ್ಕರ ಸಮಯವನ್ನು ಮೀಸಲಿಡುತ್ತಾರೆ. ಪತ್ನಿ ರಾಧಿಕಾ ಪಂಡಿತ್ ಜೊತೆ ಮಕ್ಕಳೊಂದಿಗೆ ಹೆಚ್ಚು ಸಮಯವನ್ನು ಕಳೆಯುತ್ತಾರೆ. ಕೆಲವೊಮ್ಮೆ ಆ ಕ್ಯೂಟ್ ಮೂವ್ಮೆಂಟ್ ಅನ್ನು ಹಂಚಿಕೊಳ್ಳುತ್ತಾರೆ. 2022ರಲ್ಲಿ ಹೀಗೊಮ್ಮೆ ರಾಧಿಕಾ ಪಂಡಿತ್ ಪುತ್ರ ಯಥರ್ವ್ ವಿಡಿಯೋವನ್ನು ಹಂಚಿಕೊಂಡಿದ್ದರು. ಆ ಕ್ಯೂಟ್ ವಿಡಿಯೋಗೆ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗಿತ್ತು.
ಈ ವಿಡಿಯೋದಲ್ಲಿ ಯಥರ್ವ್ ಅಪ್ಪನೊಂದಿಗೆ ಮುನಿಸಿಕೊಂಡಿದ್ದಾನೆ. ಯಶ್ ಪದೇ ಮಗನಿಗೆ ಡ್ಯಾಡಿ ಗುಡ್ ಬಾಯ್ ಎನ್ನುತ್ತಾರೆ. ಆದರೆ ಅದನ್ನು ಒಪ್ಪಿಕೊಳ್ಳುವುದೇ ಇದೆ. ಅಮ್ಮ ರಾಧಿಕಾ ಪಂಡಿತ್ ಅನ್ನು ಅಪ್ಪಿಕೊಂಡಿರುವ ಯಥರ್ವ್ "ಡ್ಯಾಡಿ ಬಾಡ್ ಬಾಯ್.. ಅಮ್ಮ ಗುಡ್ ಗರ್ಲ್" ಎಂದು ಹೇಳುತ್ತಾನೆ. ಆಗ ಯಶ್ ಮಗನಿಗೆ ಡ್ಯಾಡಿ ಗುಡ್ ಬಾಯ್ ಎಂದು ಹೇಳುತ್ತಾರೆ. ಅದೆಷ್ಟೇ ಬಾರಿ ಹೇಳಿದರೂ ಯಥರ್ವ್ ಮಾತ್ರ ಅದನ್ನು ಒಪ್ಪಿಕೊಳ್ಳುವುದಿಲ್ಲ.

ಒಂದಿಷ್ಟು ಹೊತ್ತು ಮಗನೊಂದಿಗೆ ವಾದ ಮಾಡಿದರೂ ಯಥರ್ವ್ ಮಾತ್ರ ಒಪ್ಪಿಕೊಳ್ಳುವುದೇ ಇಲ್ಲ. ಆ ವೇಳೆ ಯಶ್ ಸೋತು ಮಗನಿಗೆ ಪ್ರತಿಕ್ರಿಯೆ ನೀಡಿದ್ದಾರೆ. "ಹೊಗೊಲೇ, ಬಂದ್ಬಿಟ್ಟ ಇವನೊಬ್ಬ ಬಾಕಿ ಇದ್ದ" ಎಂದು ಯಶ್ ಹೇಳುತ್ತಾರೆ. ಈ ವಿಡಿಯೋ ಅಭಿಮಾನಿಗಳಿಗೆ ಸಖತ್ ಕ್ಯೂಟ್ ಅಂತ ಅನಿಸಿದೆ. ಎರಡು ವರ್ಷದ ಹಿಂದಿನ ಈ ವಿಡಿಯೋ ಮತ್ತೆ ಯಾಕೆ ವೈರಲ್ ಆಗುತ್ತಿರೋ ಗೊತ್ತಿಲ್ಲ. ಆದರೆ, ಸೋಶಿಯಲ್ ಮೀಡಿಯಾದಲ್ಲಂತೂ ದಿಢೀರನೇ ಹರಿದಾಡುತ್ತಿದೆ.
ಯಶ್ ಸದ್ಯಕ್ಕೀಗ 'ಟಾಕ್ಸಿಕ್' ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. 'ಕೆಜಿಎಫ್ 2' ಯಶಸ್ಸಿನ ಬಳಿಕ ನಟಿಸುತ್ತಿರುವುದರಿಂದ ಈ ಸಿನಿಮಾ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳ ಪಟ್ಟಿಯಲ್ಲಿದೆ. ಇದರೊಂದಿಗೆ 'ರಾಮಾಯಣ' ಸಿನಿಮಾದಲ್ಲಿ ರಾವಣನಾಗಿಯೂ ಯಶ್ ನಟಿಸುತ್ತಿದ್ದಾರೆ. ಜೊತೆ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಯಶ್ ಮುಂದಿನ ಪ್ರಾಜೆಕ್ಟ್‌ಗಳನ್ನು ಅಭಿಮಾನಿಗಳು ಕುತೂಹಲದಿಂದ ನೋಡುತ್ತಿದ್ದಾರೆ.


Click it and Unblock the Notifications










