2016: ಈ ವರ್ಷದ ಅತ್ಯುತ್ತಮ ನಾಯಕಿ ಯಾರು?

By Bharath Kumar

ನಾಯಕಿಯರ ವಿಷ್ಯದಲ್ಲಿ 2016 ಸ್ವಲ್ಪ ಡಲ್ಲು. ಯಾಕಂದ್ರೆ, ಸ್ಯಾಂಡಲ್ ವುಡ್ ನ ರಾಣಿಯರು ಎನಿಸಿಕೊಂಡಿದ್ದ ಹಲವು ನಟಿಯರು ಈ ವರ್ಷ ಪರದೆ ಮೇಲೆ ಬರಲೇ ಇಲ್ಲ. ಇನ್ನೂ ಕೆಲವರು ಎಂಗೇಜ್ ಮೆಂಟ್, ಮ್ಯಾರೇಜ್ ಅಂತೂ ಫುಲ್ ಬ್ಯುಸಿಯಾಗೋದ್ರು.

ಇನ್ನೂಳಿದಂತೆ ರಾಧಿಕಾ ಪಂಡಿತ್, ಪ್ರಿಯಾಮಣಿ, ಶೃತಿ ಹರಿಹರನ್ ಅವರೇ ಈ ವರ್ಷ ಅತಿ ಹೆಚ್ಚು ಸಿನಿಮಾ ಮಾಡಿರುವ ಬ್ಯೂಟಿಫುಲ್ ನಟಿಯರು.

ಬಹುತೇಕ ನಟಿಯರು ಈ ವರ್ಷ ಒಂದು ಸಿನಿಮಾ ಮಾಡಿದ್ದೇ ಹೆಚ್ಚು. ಉಳಿದಂತೆ ವಿಶೇಷ ಪಾತ್ರಗಳು, ಐಟಂ ಸಾಂಗ್ ಗಳಲ್ಲಿ ಹೀಗೆ ಬಂದು ಹಾಗೆ ಹೋಗಿದ್ದೇ ಈ ವರ್ಷದ ಸಾಧನೆ. ಹೀಗಿರುವಾಗ, ಈ ವರ್ಷ ಸಿಲ್ವರ್ ಸ್ಕ್ರೀನ್ ನಲ್ಲಿ ಹೆಚ್ಚು ಮಿನುಗಿದ ನಟಿಯರ ಪೈಕಿ ಯಾರಿಗೆ 'ಅತ್ತ್ಯುತ್ತಮ ನಟಿ' ಪಟ್ಟ ನೀಡಬಹುದು?[2016ರ ಅತ್ಯುತ್ತಮ ಚಿತ್ರ-ನಟ-ನಟಿ-ನಿರ್ದೇಶಕರನ್ನ ಆಯ್ಕೆ ಮಾಡಿ!]

2016 ರಲ್ಲಿ ಉತ್ತಮ ಅಭಿನಯ ನೀಡಿದ ನಾಯಕಿಯರ ಪಟ್ಟಿ ಕೆಳಗಿರುವ ಸ್ಲೈಡ್ ಗಳಲ್ಲಿದೆ. ಅವುಗಳಲ್ಲಿ ನಿಮ್ಮ ಪ್ರಕಾರ ಈ ವರ್ಷದ ಅತ್ತ್ಯುತ್ತಮ ನಾಯಕಿ ಯಾರು ಅಂತ ನಮಗೆ ತಿಳಿಸಿ.....

ಪ್ರಿಯಾಮಣಿ

ಪ್ರಿಯಾಮಣಿ

ಕಳೆದ ವರ್ಷ ಸಿನಿಮಾನೇ ಇಲ್ಲದೇ ಸೈಲಾಂಟ್ ಆಗಿದ್ದ ಪ್ರಿಯಾಮಣಿ, ಈ ವರ್ಷ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸಿದ್ದರು. ಪ್ರಿಯಾಮಣಿ ಈ ವರ್ಷ ಅಭಿನಯಿಸಿದ ಚಿತ್ರಗಳು ನಾಲ್ಕು. 'ಕಥೆ ಚಿತ್ರಕಥೆ ನಿರ್ದೇಶನ ಪುಟ್ಟಣ್ಣ', 'ಕಲ್ಪನಾ-2', 'ಇದೊಳ್ಳೆ ರಾಮಾಯಣ', 'ದನಕಾಯೋನು'. ವಿಭಿನ್ನ ಪಾತ್ರಗಳ ಮೂಲಕ ಈ ವರ್ಷ ಪ್ರೇಕ್ಷಕರನ್ನ ಮೆಚ್ಚಿಸಿರುವ ಪ್ರಿಯಾಮಣಿ ಸ್ಯಾಂಡಲ್ ವುಡ್ ನ ಲೀಡಿಂಗ್ ಹೀರೋಯಿನ್. ಹೀಗಾಗಿ ಪ್ರಿಯಾಮಣಿ ಈ ವರ್ಷದ ಅತ್ಯುತ್ತಮ ನಾಯಕಿ ಆಗಬಹುದಾ ಅಂತ ನೀವು ಹೇಳಿ?[ವಿಮರ್ಶೆ: ಪ್ರಾಣಿ ಪ್ರಿಯರು ಧಾರಾಳವಾಗಿ 'ದನ ಕಾಯ್ಬೋದು'.!]

ರಾಧಿಕಾ ಪಂಡಿತ್

ರಾಧಿಕಾ ಪಂಡಿತ್

ರಾಧಿಕಾ ಪಂಡಿತ್ ಗೆ ಈ ವರ್ಷ ವೈಯಕ್ತಿಕ ಜೀವನದಲ್ಲಿ ತುಂಬಾ ಸ್ಪೆಷಲ್. ಹಾಗೇ ಸಿನಿಮಾದಲ್ಲೂ ವಿಶೇಷವಾಗಿಯೇ ಇತ್ತು. ಈ ವರ್ಷ ಈ ಸಿಂಡ್ರೆಲಾ ಮೂರು ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. 'ಜೂಮ್', 'ದೊಡ್ಮನೆ ಹುಡುಗ', 'ಸಂತು ಸ್ಟ್ರೈಟ್ ಫಾರ್ವಾರ್ಡ್' ಚಿತ್ರಗಳಲ್ಲಿ ಮೋಡಿ ಮಾಡಿದ್ದ ರಾಧಿಕಾ 2016ನೇ ಸಾಲಿನ ಅತ್ಯುತ್ತಮ ನಾಯಕಿ ಆಗಬಹುದೇ?[ವಿಮರ್ಶೆ: ಸ್ಟ್ರೈಟ್ ಆಗಿ ಹೇಳ್ಬೇಕಂದ್ರೆ ಸ್ಟೋರಿ ಸುಮಾರು, 'ಸಂತು' ಸೂಪರ್ರು!]

ಶೃತಿ ಹರಿಹರನ್

ಶೃತಿ ಹರಿಹರನ್

ಲುಸಿಯಾ ಖ್ಯಾತಿ ನಾಯಕಿ ಶೃತಿ ಹರಿಹರನ್ ಗೂ 2016 ಸ್ಪೆಷಲ್ ವರ್ಷ. ಯಾಕಂದ್ರೆ, ಒಟ್ಟು ನಾಲ್ಕು ಸಿನಿಮಾಗಳಲ್ಲಿ ಶೃತಿ ಕಮಾಲ್ ಮಾಡಿದ್ದಾರೆ. 'ಜೈ ಮಾರುತಿ 800, ''ಗೋಧಿ ಬಣ್ಣ ಸಾಧಾರಣ ಮೈಕಟ್ಟು', 'ಸಿಪಾಯಿ', 'ಮಾದ ಮತ್ತು ಮಾನಸಿ' ಚಿತ್ರಗಳಲ್ಲಿ ಅಭಿನಯಿಸಿದ್ದ ಶೃತಿ ಹರಿಹರನ್ ಅಭಿನಯಕ್ಕೆ ನಿಮ್ಮ ಅಭಿಪ್ರಾಯವೇನು?

ಅಮೂಲ್ಯ

ಅಮೂಲ್ಯ

ಬೇಬಿ ಡಾಲ್ ಅಮೂಲ್ಯ ಈ ವರ್ಷ ನಟಿಸಿದ್ದು ಎರಡೇ ಚಿತ್ರಗಳಲ್ಲಿ. 'ಮದುವೆಯ ಮಮತೆಯ ಕರೇಯೋಲೆ' ಹಾಗೂ 'ಕೃಷ್ಣ-ರುಕ್ಕು',. ಸದ್ಯ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ನಟಿಯಾಗಿರುವ ಅಮೂಲ್ಯ ಬೇಡಿಕೆ ಜೊತೆಗೆ ಪ್ರತಿಭೆಯಲ್ಲೂ ಮುಂಚೂಣಿಯಲ್ಲಿದ್ದಾರೆ. ಹೀಗಾಗಿ ಅಮೂಲ್ಯ ಈ ವರ್ಷದ ಅತ್ತ್ಯುತ್ತಮ ನಾಯಕಿ ಪಟಕ್ಕೆ ಏರಬಹುದಾ?['ಕೃಷ್ಣ ರುಕ್ಕು' ಪ್ರೀತಿಗೆ ವಿಮರ್ಶಕರು ಏನಂದ್ರು]

ಹರಿಪ್ರಿಯಾ

ಹರಿಪ್ರಿಯಾ

ಹರಿಪ್ರಿಯಾ ಈ ವರ್ಷ ಕಾಣಿಸಿಕೊಂಡಿದ್ದು ಮೂರು ಚಿತ್ರದಲ್ಲಿ. 'ನೀರ್ ದೋಸೆ', 'ರಣತಂತ್ರ', 'ರಿಕ್ಕಿ' ಚಿತ್ರಗಳ ನಾಯಕಿ ಹರಿಪ್ರಿಯಾ ಬಗ್ಗೆ ನಿಮ್ಮ ಕಾಮೆಂಟ್ ಏನು?[ವಿಮರ್ಶೆ : ಬಾಡೂಟದ ಜೊತೆ 'ನೀರ್ ದೋಸೆ' ಸವಿದಂತೆ ಇದೇ ಜಗ್ಗೇಶ.!]

ಪ್ರಿಯಾಂಕಾ ಉಪೇಂದ್ರ

ಪ್ರಿಯಾಂಕಾ ಉಪೇಂದ್ರ

ನಟನೆಯಿಂದ ಸ್ವಲ್ಪ ದೂರುವಿದ್ದ ನಟಿ ಪ್ರಿಯಾಂಕಾ ಉಪೇಂದ್ರ ಈ ವರ್ಷ ಅಚ್ಚರಿ ಎಂಬಂತೆ ಎರಡು ಸಿನಿಮಾಗಳಲ್ಲಿ ಕಾಣಿಸಿಕೊಂಡು, ಅತ್ಯುತ್ತಮ ಫರ್ಫಾಮೆನ್ಸ್ ಕೊಟ್ಟಿದ್ದಾರೆ. 'ಪ್ರಿಯಾಂಕಾ' ಹಾಗೂ 'ಮಮ್ಮಿ ಸೇವ್ ಮಿ' ಚಿತ್ರಗಳಲ್ಲಿ ಗಮನ ಸೆಳೆದ ಪ್ರಿಯಾಂಕಾ ಉಪೇಂದ್ರ ಅವರ ಅಭಿನಯಕ್ಕೆ ಏನ್ ಅಂತೀರಾ?

ವೇದಿಕಾ

ವೇದಿಕಾ

'ಶಿವಲಿಂಗ' ಚಿತ್ರದ ನಾಯಕಿ ವೇದಿಕಾ, ಗ್ಲಾಮರ್ ಜೊತೆಗೆ ಹಾರರ್ ಪಾತ್ರದಲ್ಲಿ ಬಣ್ಣ ಹಚ್ಚಿದ್ದರು. ಇವರ ಈ ಅಭಿನಯಕ್ಕೆ ನಿಮ್ಮ ಮಾರ್ಕ್ಸ್ ಎಷ್ಟು?['ಶಿವಲಿಂಗ' ವಿಮರ್ಶೆ; ಪಿ.ವಾಸು ನಿರ್ದೇಶನದ ಮತ್ತೊಂದು 'ಆಪ್ತಮಿತ್ರ']

ರಚಿತಾ ರಾಮ್

ರಚಿತಾ ರಾಮ್

ಬುಲ್ ಬುಲ್ ರಚಿತಾ ರಾಮ್ ಈ ವರ್ಷ ಬಿಗ್ ಸ್ಕ್ರೀನ್ ಗಿಂತ ಸ್ಮಾಲ್ ಸ್ಕ್ರೀನ್ ನಲ್ಲೆ ತುಂಬಾ ಬ್ಯುಸಿಯಾಗಿದ್ದರು. 'ಚಕ್ರವ್ಯೂಹ' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ ರಚಿತಾ ಈ ವರ್ಷ ಮಾಡಿದ್ದು ಒಂದೇ ಚಿತ್ರ. ಹೀಗಾಗಿ ರಚಿತಾ ನಟನೆಗೆ ನಿಮ್ಮ ಅಭಿಪ್ರಾಯವೇನು?[ಪುನೀತ್ 'ಚಕ್ರವ್ಯೂಹ'ದ ಒಳ ನುಗ್ಗಿದ ವಿಮರ್ಶಕರು ಏನಂತಾರೆ? ]

ಪಾರುಲ್ ಯಾದವ್

ಪಾರುಲ್ ಯಾದವ್

ಪಾರುಲ್ ಈ ವರ್ಷ ಕಾಣಿಸಿಕೊಂಡಿದ್ದು 'ಜೆಸ್ಸಿ' ಹಾಗೂ 'ಕಿಲ್ಲಿಂಗ್ ವೀರಪ್ಪನ್' ಚಿತ್ರದಲ್ಲಿ ಮಾತ್ರ. ಜೆಸ್ಸಿ ಕ್ವೀನ್ ಗೆ ನಿಮ್ಮ ಪ್ರಕಾರ ಯಾವ ಸ್ಥಾನ?

ಶ್ವೇತಾ ಶ್ರೀವತ್ಸವ್

ಶ್ವೇತಾ ಶ್ರೀವತ್ಸವ್

'ಕಿರಗೂರಿನ ಗಯ್ಯಾಳಿ' ಚಿತ್ರದಲ್ಲಿ ಸೌಂಡ್ ಮಾಡಿದ ಶ್ವೇತಾ ಶ್ರೀವತ್ಸವ್ ಅಭಿನಯ ನಿಮ್ಗೆ ಇಷ್ಟವಾಗಿದ್ಯಾ?

ಸುಕೃತಾ ವಾಗ್ಲೆ

ಸುಕೃತಾ ವಾಗ್ಲೆ

'ಕಿರಗೂರಿನ ಗಯ್ಯಾಳಿ' ಚಿತ್ರದಲ್ಲಿ ಗಮನ ಸೆಳೆದ ಮತ್ತೊಬ್ಬ ನಟಿ ಸುಕೃತಾ ವಾಗ್ಲೆ. ಈ ನಟಿಯ ಅಭಿನಯ ಹೇಗಿತ್ತು?

ಮೇಘನಾ ರಾಜ್

ಮೇಘನಾ ರಾಜ್

ನಟಿ ಮೇಘನಾ ರಾಜ್ ಈ ವರ್ಷ ಎರಡು ಸಿನಿಮಾಗಳಲ್ಲಿ ಕಾಣಿಸಿಕೊಂಡರು. 'ಲಕ್ಷ್ಮಣ' ಹಾಗೂ 'ಭುಜಂಗ' ಚಿತ್ರಗಳಲ್ಲಿ ನಾಯಕಿಯಾಗಿದ್ದರು ಮೇಘನಾ ರಾಜ್. ಮೇಘನಾ ಅಭಿನಯಕ್ಕೆ ನಿಮ್ಮ ಕಾಮೆಂಟ್ ಏನು?

ರಮ್ಯಾ

ರಮ್ಯಾ

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಈ ವರ್ಷ ಮಾಡಿದ್ದು ಒಂದೇ ಚಿತ್ರ 'ನಾಗರಹಾವು'. ವಿಷ್ಣುವರ್ಧನ್ ಅವರ 201ನೇ ಸಿನಿಮಾ ಅಂತ ಬಿಂಬಿತವಾಗಿದ್ದ ಈ ಚಿತ್ರದಲ್ಲಿ, ರಮ್ಯಾ ಎರಡು ವರ್ಷಗಳ ನಂತರ ಬೆಳ್ಳಿತೆರೆಯಲ್ಲಿ ರಾರಾಜಿಸಿದ್ದರು ಮಾಡಿದ್ದರು. ಹೀಗೆ ಎರಡು ವರ್ಷದ ನಂತರ ಕಮ್ ಬ್ಯಾಕ್ ಮಾಡಿದ್ದ ರಮ್ಯಾ ಅಭಿನಯ ನಿಮಗೆ ಮೆಚ್ಚುಗೆ ಆಯ್ತಾ?

ಇವರಲ್ಲಿ ಯಾರು ಅತ್ಯುತ್ತಮ ನಾಯಕಿ?

ಇವರಲ್ಲಿ ಯಾರು ಅತ್ಯುತ್ತಮ ನಾಯಕಿ?

ಇವರೆಲ್ಲಾ ಈ ವರ್ಷದಲ್ಲಿ ಮಿಂಚಿದ ಸ್ಟಾರ್ ನಟಿಯರು. ಇವರುಗಳಲ್ಲಿ ಯಾರು ಅತ್ಯುತ್ತಮ ನಾಯಕಿ ಎಂದು ನೀವೇ ನಿರ್ಣಯ ಮಾಡಿ.

More from Filmibeat

English summary
Who is the Best Actress of Sandalwood in 2016. Tell us your choice.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X