2021ರ ಸೆಲೆಬ್ರಿಟಿ ಬ್ರೇಕಪ್‌ ಕಹಾನಿಗಳು: ಊಹಿಸದ ಶಾಕ್ ಕೊಟ್ಟ ಜೋಡಿಗಳಿವು!

2021 ಮುಗಿಯುತ್ತಾ ಬಂತು. ಈ ವರ್ಷ ಬಣ್ಣದ ಲೋಕದಲ್ಲಿ ಆದ ಬದಲಾವಣೆಗಳು ಹತ್ತು ಹಲವು. ಹಾಗೆ ಒಮ್ಮೆ ಹಿಂದೆ ತಿರುಗಿ ಈ ವರ್ಷ ಸಿನಿಮಾರಂಗದಲ್ಲಿ ಏನೆಲ್ಲಾ ಆಯ್ತು ಅಂತ ನೋಡದಾಗ ಒಂದಷ್ಟು ಸಿಹಿ ಮತ್ತು ಕಹಿ ಸಮಾಚಾರಗಳು ಕಾಣಿಸುತ್ತವೆ.

ಅಂತೆಯೇ ವಿವಾಹ ವಿಚ್ಛೇದನ ಮತ್ತು ಬ್ರೇಕಪ್ ವಿಚಾರಕ್ಕೆ ಬಂದರೆ ಈ ವರ್ಷವೂ ಸಿನಿಮಾರಂಗಕ್ಕೆ ಹೊಸದೇನಲ್ಲ. ಪ್ರತೀ ವರ್ಷ ಸಿನಿಮಾ ತಾರೆಯರ ವಿಚ್ಚೇದ, ಬ್ರೇಕಪ್‌ ಆಗುತ್ತಲೇ ಇರುತ್ತವೆ. ಹಾಗೆ ಈ ವರ್ಷವೂ ಕೂಡ ಒಂದಷ್ಟು ಜೋಡಿಗಳು ಬೇರೆ ಆಗಿವೆ.

ಆದರೆ ಈ ವರ್ಷ ವಿಚ್ಛೇದನ ಪಡೆದ ಜೋಡಿಗಳನ್ನ ನೋಡಿದಾಗ ಕೊಂಚ ಅಚ್ಚರಿ ಆಗುತ್ತದೆ. ಯಾರೂ ಊಹಿಸದ ಜೋಡಿಗಳು ಬೇರೆ ಆಗಿದ್ದಾರೆ. ಆ ಜೋಡಿಗಳು ಯಾವುವು ಎನ್ನುವ ಲಿಸ್ಟ್ ಇಲ್ಲಿದೆ. ಮುಂದೆ ಓದಿ...

15 ವರ್ಷದ ದಾಂಪತ್ಯಕ್ಕೆ ಅಂತ್ಯ ಹಾಡಿದ ಆಮೀರ್‌ಖಾನ್-ಕಿರಣ್‌ ರಾವ್!

15 ವರ್ಷದ ದಾಂಪತ್ಯಕ್ಕೆ ಅಂತ್ಯ ಹಾಡಿದ ಆಮೀರ್‌ಖಾನ್-ಕಿರಣ್‌ ರಾವ್!

ಬಾಲಿವುಡ್​ ನಟ ಆಮಿರ್​ ಖಾನ್​ ಹಾಗೂ ಕಿರಣ್​ ರಾವ್​ ಇದೇ ವರ್ಷ(2021) ವಿಚ್ಛೇದನ ಪಡೆದುಕೊಂಡಿದ್ದಾರೆ. ಅವರು 15 ವರ್ಷಗಳ ಅವರ ದಾಂಪತ್ಯ ಜೀವನ ಅಂತ್ಯವಾಗಿದೆ. ಈ ವಿಚಾರ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿತ್ತು. ಯಾಕೆಂದರೆ ಇದು ಆಮಿರ್‌ಖಾನ್‌ ಅವರ ಎರಡನೇ ಮದುವೆ. ಅಲ್ಲದೆ ಈ ಜೋಡಿ 15 ವರ್ಷದಿಂದ ಒಟ್ಟಿಗೆ ಇದ್ದು ಯಾವುದೇ ವಿವಾದಗಳು ಇರಲಿಲ್ಲ. ಹಾಗಾಗಿ ಇವರ ವಿಚ್ಛೇದನ ಮಾಡಿಕೊಳ್ಳುತ್ತಾರೆ ಎನ್ನುವುದು ಅಚ್ಚರಿಗೆ ಕಾರಣ ಆಗಿತ್ತು. ವಿಚ್ಛೇದನದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಈ ಜೋಡಿ ಅಧಿಕೃತ ಮಾಹಿತಿ ನೀಡಿತ್ತು. 2005ರಲ್ಲಿ ಆಮಿರ್​ ಖಾನ್​ ಮತ್ತು ಕಿರಣ್​ ರಾವ್​ ಮದುವೆ ಆಗಿದ್ದರು. 2011ರಲ್ಲಿ ಅವರಿಗೆ ಗಂಡು ಮಗು ಆಜಾದ್ ಜನಿಸಿದ. ಮೊದಲ ಪತ್ನಿ ರೀನಾ ದತ್ತ ಅವರಿಂದ ವಿಚ್ಛೇದನ ಪಡೆದ ಬಳಿಕ ಆಮಿರ್‌ ಖಾನ್ ಕಿರಣ್‌ ರಾವ್‌ ಅವರನ್ನು ವಿವಾಹ ಆಗಿದ್ದರು. ಆದರೆ ಈ ವರ್ಷ ಅವರಿಂದಲೂ ದೂರ ಆಗಿದ್ದಾರೆ.

ವಿಚ್ಛೇದನ ನಂತರ ಸುದೀರ್ಘ ಪತ್ರ ಬರೆದಿದ್ದ ಆಮಿರ್ ಖಾನ್- ಕಿರಣ್ ರಾವ್!

ವಿಚ್ಛೇದನ ನಂತರ ಸುದೀರ್ಘ ಪತ್ರ ಬರೆದಿದ್ದ ಆಮಿರ್ ಖಾನ್- ಕಿರಣ್ ರಾವ್!

ವಿಚ್ಛೇದನ ಕುರಿತು ಅವರಿಬ್ಬರು ಹೇಳಿಕೆ ಬಿಡುಗಡೆ ಮಾಡಿದ್ದರು. 10 ವರ್ಷದ ಪುತ್ರ ಆಜಾದ್​ ರಾವ್​ ಖಾನ್​ನ ಜವಾಬ್ದಾರಿಯನ್ನು ಇಬ್ಬರೂ ವಹಿಸಿಕೊಂಡಿದ್ದಾರೆ. "ಈ 15 ವರ್ಷಗಳ ಜೀವನವನ್ನು ನಾವು ಖುಷಿ ಮತ್ತು ಸಂತೋಷದಿಂದ ಕಳೆದಿದ್ದೇವೆ. ನಂಬಿಕೆ, ಪ್ರೀತಿ ಮತ್ತು ಗೌರವದಿಂದ ನಮ್ಮ ಸಂಬಂಧ ಬೆಳೆದಿತ್ತು. ಈಗ ನಾವು ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸುತ್ತಿದ್ದೇವೆ. ಇನ್ನು ಮುಂದೆ ನಾವು ಪತಿ-ಪತ್ನಿ ಅಲ್ಲ. ಆದರೆ ಅಜಾದ್​ನ ಪಾಲಕರಾಗಿ, ಆ ಮೂಲಕ ಕುಟುಂಬದವರಾಗಿ ಇರುತ್ತೇವೆ. ಬೇರೆಯಾಗುವ ಬಗ್ಗೆ ಕೆಲವು ಸಮಯದ ಹಿಂದೆಯೇ ಯೋಚಿಸಿದ್ದೆವು. ಮಗನನ್ನು ಜೊತೆಯಾಗಿ ಬೆಳೆಸುತ್ತೇವೆ, ನಮಗೆ ಬೆಂಬಲವಾಗಿ ನಿಂತಿರುವ ಕುಟುಂಬದವರು ಮತ್ತು ಸ್ನೇಹಿತರಿಗೆ ಧನ್ಯವಾದಗಳು. ಈ ವಿಚ್ಛೇದನವನ್ನು ಅಂತ್ಯವೆಂದು ನೋಡದೇ ಒಂದು ಹೊಸ ಆರಂಭದ ರೀತಿ ನೋಡಿ ಎಂದು ವಿನಂತಿಸಿಕೊಳ್ಳುತ್ತೇವೆ. ಪ್ರೀತಿಯಿಂದ- ಆಮಿರ್​ ಖಾನ್​ ಮತ್ತು ಕಿರಣ್​ ರಾವ್​" ಎಂದು ಅವರ ಹೇಳಿಕೆಯಲ್ಲಿ ಬರೆಯಲಾಗಿದೆ.

ವಿಚ್ಛೇದನ ಪಡೆದು ದೂರಾದ ಸಮಂತಾ- ನಾಗಚೈತನ್ಯ!

ವಿಚ್ಛೇದನ ಪಡೆದು ದೂರಾದ ಸಮಂತಾ- ನಾಗಚೈತನ್ಯ!

ಸಮಂತಾ ನಾಗ ಚೈತನ್ಯ ಇಬ್ಬರೂ 10 ವರ್ಷಗಳ ಕಾಲ ಪ್ರೀತಿಸಿ ಮದುವೆ ಆದವರು. ಈ ಜೋಡಿಯನ್ನು ನೋಡುವುದೇ ಒಂದು ರೀತಿ ಚೆಂದ. ಸಮಂತಾ, ನಾಗಚೈತನ್ಯ ಜೋಡಿಗೆ ಅಪಾರ ಅಭಿಮಾನಿ ಬಳಗ ಇದೆ. ಆದರೆ ಇವರು ಕೂಡ ತಮ್ಮ 4 ವರ್ಷದ ದಾಂಪತ್ಯಕ್ಕೆ 2021 ಅಕ್ಟೋಬರ್ 2ರಂದು ಸಮಂತಾ, ನಾಗಚೈತನ್ಯ ತಮ್ಮ ವಿಚ್ಚೇದನದ ಸುದ್ದಿಯನ್ನು ಬಹಿರಂಗ ಪಡಿಸಿದರು. ಭಾರತೀಯ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ ಸುದ್ದಿ ಇದು. ಯಾಕೆಂದರೆ ಅತ್ಯಂತ ಅನ್ಯೋನ್ಯವಾಗಿದ್ದ ಜೋಡಿ ಇದು ಎನ್ನುವ ಮಾತುಗಳು ಸಿನಿಮಾರಂಗದಲ್ಲಿ ಕೇಳಿ ಬರುತ್ತಿದ್ದವು. ಆದರೆ ಇದ್ದಕ್ಕಿದ್ದ ಹಾಗೆ ಇವರು ವಿಚ್ಛೇದನ ಪಡೆದು ದೂರಾಗಿದ್ದಾರೆ.

2017ರಲ್ಲಿ ಅದ್ದೂರಿಯಾಗಿ ಮದುವೆ ಆಗಿದ್ದ ಜೋಡಿ!

2017ರಲ್ಲಿ ಅದ್ದೂರಿಯಾಗಿ ಮದುವೆ ಆಗಿದ್ದ ಜೋಡಿ!

ನಟಿ ಸಮಂತಾ ಮತ್ತು ನಾಗಚೈತನ್ಯ 'ಏ ಮಾಯಾ ಚೇಸಾವೆ' ಚಿತ್ರದಿಂದ ಪ್ರೀತಿಸಲು ಆರಂಭಿಸಿದ್ದರು. ಹತ್ತು ವರ್ಷಗಳಿಂದ ಈ ಜೋಡಿ ಪ್ರೀತಿಸುತ್ತಾ ಇತ್ತು. ಹಾಗೆ ಮನೆಯವರ ಒಪ್ಪಿಯ ಮೇರಿಗೆ 2017 ಅಕ್ಟೋಬರ್ 7ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿತು. ಹಿಂದು ಮತ್ತು ಕ್ರೈಸ್ತ ಸಂಪ್ರದಾಯದಂತೆ ಎರಡು ಬಾರಿ ಮದುವೆ ಆಗಿದ್ದರು. ಆದರೆ 2021ರಲ್ಲಿ ಮದುವೆಯ ನಾಲ್ಕನೆ ವಿವಾಹ ವಾರ್ಷಿಕೋತ್ಸವಕ್ಕೂ ಮೊದಲೇ ಈ ಜೋಡಿ ವಿಚ್ಛೇದನ ಪಡೆದು ದೂರಾಯಿತು.

10 ವರ್ಷದ ದಾಂಪತ್ಯಕ್ಕೆ ಅಂತ್ಯ ಹಾಡಿದ ಹನಿ ಸಿಂಗ್- ಶಾಲಿನಿ ಸಿಂಗ್!

10 ವರ್ಷದ ದಾಂಪತ್ಯಕ್ಕೆ ಅಂತ್ಯ ಹಾಡಿದ ಹನಿ ಸಿಂಗ್- ಶಾಲಿನಿ ಸಿಂಗ್!

ಹೆಸರಾಂತ ರ್‍ಯಾಪರ್‌ ಹನಿ ಸಿಂಗ್‌ ಮತ್ತು ಪತ್ನಿ ಶಾಲಿನಿ ಸಿಂಗ್ ಕೂಡ ಇದೇ ವರ್ಷ ತಮ್ಮ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಇವರಿಬ್ಬರು ಬಾಲ್ಯದ ಗೆಳೆಯರು, ಹಾಗಾಗಿ 2011ರಲ್ಲಿ ಮದುವೆ ಆಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಹತ್ತು ವರ್ಷದ ಬಳಿಕ 2021ರಲ್ಲಿ ವಿಚ್ಛೇದನ ಪಡೆದು ದೂರಗಿದ್ದಾರೆ. ತನ್ನ ಪತ್ನಿ ಶಾಲಿನಿ ಸಿಂಗ್ ಮನೆಯವರಿಗೆ ಹಿಂಸೆ ಕೊಡುತ್ತಿದ್ದಾಳೆ ಎಂದು ಹನಿ ಸಿಂಗ್‌ ದೂರಿದ್ದರು. ನಂತರ ಶಾಲಿನಿ ಸಿಂಗ್‌ ಹನಿ ಸಿಂಗ್‌ ಬೇರೆ ಅವರೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿದ್ದರು.

ವಿಚ್ಛೇದನ ಪಡೆದ ನಟಿ ಕೃತಿ ಕುಲ್ಹರಿ!

ವಿಚ್ಛೇದನ ಪಡೆದ ನಟಿ ಕೃತಿ ಕುಲ್ಹರಿ!

ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಟಿ ಕೃತಿ ಕುಲ್ಹರಿ ಪತಿ ಶಾಹಿಲ್‌ ಸೆಹ್ಗಲ್‌ ಇಂದ ವಿಚ್ಛೇದನ ಪಡೆದು ದೂರಾಗಿದ್ದಾರೆ. 2021ರ ಏಪ್ರಿಲ್‌ನಲ್ಲಿ ವಿಚ್ಛೇದನ ಪಡೆದು ಸುದ್ದಿ ಬಹಿರಂಗ ಪಡಿಸಿದರು. ಜೊತೆಗೆ ಈ ನಿರ್ಧಾರ ತೆಗೆದು ಕೊಂಡ ಬಗ್ಗೆ ಸುದೀರ್ಘವಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದು ಕೊಂಡಿದ್ದರು.


ಇದು ಈ ವರ್ಷ ವಿಚ್ಛೇದನ ಪಡೆದು ದೂರಾದ ಜೋಡಿಗಳ ಕಹಾನಿ. ಇನ್ನೂ ಸಾಲಿಗೆ ಹಲವು ಕಿರುತೆರೆ ಕಲಾವಿದರು, ಕ್ರಿಕೆಟಿಗರು ಕೂಡ ಸೇರಿಕೊಳ್ತಾರೆ.

More from Filmibeat

English summary
Celebrity breakups of 2021: Here we have brought you the complete list of celebrity couple who got Divorced In 2021; Here is the List . Take a look.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X