»   »  2013 ವರ್ಷ: ಕನ್ನಡ ಚಿತ್ರಗಳ ಪೋಸ್ಟ್ ಮಾರ್ಟಂ

2013 ವರ್ಷ: ಕನ್ನಡ ಚಿತ್ರಗಳ ಪೋಸ್ಟ್ ಮಾರ್ಟಂ

By: ಮಲೆನಾಡಿಗ
Subscribe to Filmibeat Kannada

2013 ವರ್ಷ ಕನ್ನಡ ಚಿತ್ರರಂಗದಲ್ಲಿ ನಿಜಕ್ಕೂ ಹೊಸ ದಾರಿ ತೋರಿದ ವರ್ಷ. ಹೊಸ ಬಗೆ ಆಲೋಚನೆಗಳು, ನಿರ್ದೇಶಕರು, ನಟ, ನಟಿಯರು ಭರವಸೆ ಬೀಜ ಬಿತ್ತಿದ ವರ್ಷ. ಆದರೆ, ವರ್ಷದಿಂದ ವರ್ಷಕ್ಕೆ ಚಿತ್ರಗಳ ಸಂಖ್ಯೆ ಹೆಚ್ಚಾದರೂ ಯಶಸ್ವಿ ಚಿತ್ರಗಳ ಸಂಖ್ಯೆ ಮಾತ್ರ ಪ್ರತಿ ವರ್ಷ ಇಳಿಮುಖವಾಗುತ್ತಿದೆ.

ಒಂದು ಚಿತ್ರ ಯಶಸ್ವಿಯಾಗಿದೆ ಎಂದರೆ ಏನರ್ಥ? ಚಿತ್ರ ಜನ ಮೆಚ್ಚುಗೆ ಗಳಿಸಿತು ಎಂದೇ? ಅಥವಾ ಹೆಚ್ಚು ಹಣ ಗಳಿಸಿತು ಎಂದೇ? ಅಥವಾ ಎರಡು ರೀತಿಯಲ್ಲೂ ಸಕ್ಸಸ್ ಆಗಿದೆ ಎಂದೇ? ಟಾಲಿವುಡ್, ಕಾಲಿವುಡ್, ಮಾಲಿವುಡ್, ಬಾಲಿವುಡ್ ಎಲ್ಲಾ ವುಡ್ ಗಳ ತಿರುಳು ತೆಗೆದು ರಾಮನ ಲೆಕ್ಕ, ಕೃಷ್ಣನ ಲೆಕ್ಕ ಹೊರ ಹಾಕಬಹುದು ಆದರೆ, ಕನ್ನಡ ಚಿತ್ರಗಳ ಬಾಕ್ಸಾಫೀಸ್ ಗುಟ್ಟು ಮಾತ್ರ ಹೆಸರಿಗೆ ತಕ್ಕಂತೆ ಚಂದನವನ(ಸ್ಯಾಂಡಲ್ ವುಡ್) ನಂತೆ ತೇಯ್ದಷ್ಟು ಪರಿಮಳ ಹೊರ ಹೊಮ್ಮುತ್ತೆ ಆದರೆ,ಬೇರಿಗೆ ಕೈ ಹಾಕುವಂತಿಲ್ಲ ಗಂಧದ ಮರ ಕಡಿಯುವುದು ಕಾನೂನಿಗೆ ವಿರೋಧ.

ಈಗೆಲ್ಲ ಸಿನಿಮಾ ಪಿಆರ್ ಒಗಳು ಮಾಡುವ ಅರ್ಧಕ್ಕೂ ಕೆಲಸ ಈಗ ಸಿನಿಮಾ ಅಭಿಮಾನಿಗಳೇ ಮಾಡುತ್ತಿದ್ದಾರೆ. ಚಿತ್ರಕ್ಕೆ ಬಿಟ್ಟಿ ಪ್ರಚಾರದ ಜತೆಗೆ ಚಿತ್ರಗಳ ಮಾಹಿತಿ ಹಾಗೂ ದಾಖಲೀಕರಣದ ಕಾರ್ಯಗಳನ್ನು ನೋಡಿಕೊಳ್ಳುತ್ತಿದ್ದಾರೆ. ಗಂಧದಗುಡಿ, ಶಿವು ಅಡ್ಡಗಳ ಜತೆಗೆ ಫೇಸ್ ಬುಕ್ ನ ಅನೇಕ ಸಿನಿಪ್ರೇಮಿ ವೆಬ್ ಪುಟಗಳು ಈ ವಿಷಯದಲ್ಲಿ ಮುಂಚೂಣಿಯಲ್ಲಿವೆ.

ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಹೊಸ ಬಗೆ ಚಿತ್ರಗಳನ್ನು ಪ್ರೇಕ್ಷಕರು ಮೆಚ್ಚಿದ್ದಾರೆ. ವರ್ಷದಿಂದ ವರ್ಷಕ್ಕೆ 60, 90 ಈಗ 120 ಸಂಖ್ಯೆ ದಾಟುತ್ತಿದ್ದರೂ ಯಶಸ್ಸಿನ ಸಂಖ್ಯೆ ಎರಡಂಕಿ ದಾಟುತ್ತಿಲ್ಲ. ಈ ಬಾರಿ ಹೊಸ ಹೊಸ ನಿರ್ದೇಶಕರು, ನಟರಿಂದ ನಿರ್ಮಾಪಕರ ಜೋಳಿಗೆ ತುಂಬಿದೆ. ಆದರೆ, ಕನ್ನಡ ಚಿತ್ರಗಳ ಗುಣಮಟ್ಟ ಮಾತ್ರ ಬರಿದಾಗಿದೆ.

ಹಿಟ್ ಚಿತ್ರಗಳು, ನಟ ನಟಿಯರು, ಕಾದಂಬರಿ ಆಧಾರಿತ/ಸ್ವಮೇಕ್ ಚಿತ್ರಗಳು, ರಿಮೇಕ್ ಚಿತ್ರಗಳು, ಕಿರಿಕ್ ಮಾಡಿಕೊಂಡ ಚಿತ್ರಗಳು, ಹೊಸ ನಿರ್ದೇಶಕರು, ನಿರ್ದೇಶಕರ ರಿಪೋರ್ಟ್ ಜತೆ 12 ತಿಂಗಳುಗಳ ಲೆಕ್ಕಾಚಾರ ಮುಂದೆ

ಟಾಪ್ ನಟ

ಶಿವರಾಜ್ ಕುಮಾರ್: ಲಕ್ಷ್ಮಿ, ಅಂದರ್ ಬಾಹರ್, ಭಜರಂಗಿ, ಕಡ್ಡಿಪುಡಿ
ದರ್ಶನ್ : ಬುಲ್ ಬುಲ್, ಬೃಂದಾವನ
ಸುದೀಪ್: ಬಚ್ಚನ್, ವರದನಾಯಕ
ಯಶ್: ಗೂಗ್ಲಿ, ರಾಜಾ ಹುಲಿ
ಪ್ರೇಮ್ ಕುಮಾರ್ : ಚಂದ್ರ, ಶತ್ರು, ದಾಸ್ವಾಳ
ನೀನಾಸಂ ಸತೀಶ್: ದ್ಯಾವ್ರೇ, ಲೂಸಿಯಾ
ದುನಿಯಾ ವಿಜಯ್ : ರಜನಿಕಾಂತ, ಜಯಮ್ಮನ ಮಗ
ಯೋಗೇಶ್: ಬಂಗಾರಿ, ಜಿಂಕೆ ಮರಿ, ಅಂಬರ,
ಜಗ್ಗೇಶ್: ಸಿಐಡಿ ಈಶ, ಕೂಲ್ ಗಣೇಶ
ಶ್ರೀನಗರ ಕಿಟ್ಟಿ: ಟೋನಿ, ಅಪ್ಪಯ್ಯ

ಟಾಪ್ ನಟಿಯರು

ಐಂದ್ರಿತಾ ರೇ: ರಜನಿಕಾಂತ, ಜಿದ್ದಿ, ಕಡ್ಡಿಪುಡಿ, ಭಜರಂಗಿ, ಟೋನಿ
ಹರ್ಷಿಕಾ ಪೂಣಚ್ಚ: ಸೈಕಲ್, ಅಲೆ, ಅದ್ವೈತ, ಮಂಗನ್ ಕೈಲಿ ಮಾಣಿಕ್ಯ, ಬಿ3
ಸಿಂಧು ಲೋಕನಾಥ್: ಸ್ಯಾಂಡಲ್ ವುಡ್ ಸರೆಗಾಮ, ಕೇಸ್ ನಂ 18/9, ಕಾಫಿ ವಿತ್ ಮೈ ವೈಫ್

ಮರೆಯಾದ ಸಿನಿ ತಾರೆಯರು

ಫೆ. 24: ಆರ್ ಜಿ ವಿಜಯಸಾರಥಿ(63 ವರ್ಷ), ನಟ ವಿಮರ್ಶಕ
ಮಾ.5: ರಾಜಸುಲೋಚನ(78): ನಟಿ, ನೃತ್ಯಗಾರ್ತಿ(ಬೇಡರ ಕಣ್ಣಪ್ಪ ಖ್ಯಾತಿ)
ಏ.14 : ಪಿಬಿ ಶ್ರೀನಿವಾಸ್(82): ಹಿನ್ನೆಲೆ ಗಾಯಕ
ಮೇ 26: ಟಿಎಂ ಸುಂದರರಾಜನ್(90) : ಸದಾರಮೆ ಖ್ಯಾತಿ ಗಾಯಕ
ಜೂನ್ 23: ಕುಣಿಗಲ್ ನಾಗಭೂಷಣ್(68): ನಟ, ಸಾಹಿತಿ
ಜೂನ್ 25: ಉಮಾ ಶಿವಕುಮಾರ್ (71) : ನಟಿ
ಜೂನ್ 30: ಎಚ್ ವಿ ಪ್ರಕಾಶ್ (53) : ನಟ
ಜುಲೈ 16 : ಶೃಂಗಾರ್ ನಾಗರಾಜ್ (74) : ನಿರ್ಮಾಪಕ, ನಟ
ಜುಲೈ 26 : ಟಿಎಸ್ ನರಸಿಂಹನ್(86) ; ಮಾಲ್ಗುಡಿ ಡೇಸ್ ಧಾರಾವಾಹಿ ನಿರ್ಮಾಪಕ
ಅಕ್ಟೋಬರ್ 9: ಶ್ರೀಹರಿ (49) : ಬಹುಭಾಷಾ ನಟ
ಅ.24: ಮನ್ನಾಡೇ (94): ಹಿನ್ನೆಲೆ ಗಾಯಕ
ನ.3 : ಡಿ. ರಾಜೇಂದ್ರ ಬಾಬು(62) : ನಿರ್ದೇಶಕ

* ರಾಜೇಶ್ : ನಟ, ರಿಯಾಲಿಟಿ ಶೋ ವಿಜೇತ
* ಡಿ.10 : ಸುಂದರನಾಥ್ ಸುವರ್ಣ : ನಿರ್ದೇಶಕ, ಛಾಯಾಗ್ರಾಹಕ
* ಜತೆಗೆ ನೆನಪಿಂಗಳ ಚಿತ್ರದ ಹೇಮಂತ್, ಸಹನಟ ಅಶೋಕ್ ಕುಮಾರ್

ಹಿಟ್ ಚಿತ್ರಗಳು-1

* ಬಚ್ಚನ್ : ನಿರ್ಮಾಪಕ ಉದಯ್ ಕೆ ಮೆಹ್ತಾ, ಸುದೀಪ್ ಭಾವನಾ ಮೆನನ್ ಅಭಿನಯ, ನಿರ್ದೇಶನ : ಶಶಾಂಕ್ ಗಳಿಕೆ ಸುಮಾರು 25 ಕೋಟಿ ರು

* ಬುಲ್ ಬುಲ್ : ನಿರ್ಮಾಪಕ ತೂಗುದೀಪ ಪ್ರೊಡೆಕ್ಷನ್, ದರ್ಶನ್, ರಚಿತಾ ರಾಮ್ ಅಭಿನಯ, ನಿರ್ದೇಶನ : ಎಂಡಿ ಶ್ರೀಧರ್ ಗಳಿಕೆ ಸುಮಾರು 39 ಕೋಟಿ ರು

* ಗೂಗ್ಲಿ : ಜಯಣ್ಣ ಫಿಲಂಸ್ ನಿರ್ಮಾಣ, ಯಶ್, ಕೃತಿ ಕರಬಂದಾ ಅಭಿನಯ, ನಿರ್ದೇಶನ : ಪವನ್ ಒಡೆಯರ್, ಗಳಿಕೆ ಸುಮಾರು 15 ಕೋಟಿ ರು

* ಬೃಂದಾವನ : ನಿರ್ಮಾಪಕ ಸುರೇಶ್ ಗೌಡ, ದರ್ಶನ್, ಕಾರ್ತಿಕಾ ನಾಯರ್, ಮಿಲನ ನಾಗರಾಜ್ ಅಭಿನಯ, ನಿರ್ದೇಶನ : ಕೆ ಮಾದೇಶ್, ಗಳಿಕೆ ಸುಮಾರು 35 ಕೋಟಿ ರು

ಹಿಟ್ ಚಿತ್ರಗಳು -2

* ಲೂಸಿಯಾ : ಹೋಂ ಟಾಕೀಸ್ ಹಾಗೂ ಪ್ರೇಕ್ಷಕರ ಹೂಡಿಕೆ, ನೀನಾಸಂ ಸತೀಶ್, ಶ್ರುತಿ ಹರಿಹರನ್ ಅಭಿನಯ, ನಿರ್ದೇಶನ : ಪವನ್ ಕುಮಾರ್, ಗಳಿಕೆ ಸುಮಾರು 25 ಕೋಟಿ ರು
* ಆಟೋರಾಜ : ಸ್ಯಾನ್ ಸಿಟಿ ಫಿಲಂಸ್, ಗಣೇಶ್, ಭಾಮಾ ಅಭಿನಯ, ನಿರ್ದೇಶನ : ಉದಯ್ ಪ್ರಕಾಶ್,
* ವರದನಾಯಕ : ಶಂಕರೇಗೌಡ, ಸುದೀಪ್, ಚಿರಂಜೀವಿ ಸರ್ಜಾ, ಸಮೀರಾ ರೆಡ್ಡಿ, ನಿರ್ದೇಶನ : ಅಯ್ಯಪ್ಪ ಶರ್ಮ, ಗಳಿಕೆ 15+ ಕೋಟಿ
* ಚಾರ್ಮಿನಾರ್ : ಆರ್ ಚಂದ್ರು ಫಿಲಂಸ್, ಪ್ರೇಮ್ ಕುಮಾರ್, ಮೇಘನಾ ಗಾಂವ್ ಕರ್ ಅಭಿನಯ, ನಿರ್ದೇಶನ : ಆರ್ ಚಂದ್ರು
* ಮೈನಾ: ಓಂಕಾರ್ ಮೂವೀಸ್ , ಚೇತನ್ ಕುಮಾರ್, ನಿತ್ಯಾ ಮೆನನ್, ನಿರ್ದೇಶನ : ನಾಗಶೇಖರ್
* ಲಕ್ಷ್ಮಿ : ಭರಣಿ ಮಿನರಲ್ಸ್ , ಶಿವರಾಜ್ ಕುಮಾರ್, ಪ್ರಿಯಾಮಣಿ, ನಿರ್ದೇಶನ : ರಾಘವ ಲೋಕಿ

ಹಿಟ್ ಚಿತ್ರಗಳು 3

* ಸಿಲ್ಕ್ : ನಿರ್ಮಾಪಕ ವೆಂಕಟಪ್ಪ, ವೀಣಾ ಮಲ್ಲಿಕ್, ಅಕ್ಷಯ್ ಅಭಿನಯ, ನಿರ್ದೇಶನ : ತ್ರಿಶೂಲ್

* ವಿಕ್ಟರಿ: ಎಸ್ ಆರ್ ಎಸ್ ಮಿಡಿಯಾ ವಿಷನ್, ಶರಣ್, ಅಸ್ಮಿತಾ ಸೂದ್ ಮೆನನ್ ಅಭಿನಯ, ನಿರ್ದೇಶನ : ನಂದ ಕಿಶೋರ್

* ರಾಜಾಹುಲಿ : ನಿರ್ಮಾಪಕ ಕೆ. ಮಂಜು, ಯಶ್, ಮೇಘನಾ ರಾಜ್ ಅಭಿನಯ, ನಿರ್ದೇಶನ : ಗುರು ದೇಶಪಾಂಡೆ, ಗಳಿಕೆ ಸುಮಾರು 25 ಕೋಟಿ ರು

* ಸಿಂಪಲ್ಲಾಗೊಂದು ಲವ್ ಸ್ಟೋರಿ, ಗಳಿಕೆ ಸುಮಾರು 10 ಕೋಟಿ ರು

ಫ್ಲಾಪ್ ಚಿತ್ರಗಳು ಹೆಚ್ಚಾಗಿರುವುದರಿಂದ ಪಟ್ಟಿ ಮಾಡುವುದು ಅಪಮಾನಕರ ಎಂದು ಕೈ ಬಿಡಲಾಗಿದೆ.

ರಿಮೇಕ್ ಚಿತ್ರಗಳು

* ವರದ ನಾಯಕ : ತೆಲುಗಿನ ಲಕ್ಷ್ಯಂ
* ಸಿಐಡಿ ಈಶ: ಮಲೆಯಾಳಂನ ಸಿಐಡಿ ಮೂಸಾ
* ಜಿದ್ದಿ : ಮಲೆಯಾಳಂ ಪುದಿಯಾ ಮುಖಂ
* ಬುಲ್ ಬುಲ್ : ತೆಲುಗಿನ ಡಾರ್ಲಿಂಗ್
* ಬೃಂದಾವನ: ತೆಲುಗಿನ ಬೃಂದಾವನಂ
* ಆನೆ ಪಟಾಕಿ :ಹಾಲಿವುಡ್ ನ ದಿ ಪಾರ್ಟಿ
* ಜಿಂಕೆ ಮರಿ : ತೆಲುಗಿನ ಬಿಂದಾಸ್
* ವಿಶಲ್ : ತಮಿಳಿನ ಪಿಜ್ಜಾ
* ಕೇಸ್ ನಂ 18/9: ತಮಿಳಿನ ವಳಕ್ಕು ಎನ್ 18/9
* ಪ್ಯಾರ್ಗೆ ಅಗ್ಬುಟೈತೆ : ಮರಾಠಿ ಮುಂಬೈ-ಪುಣೆ-ಮುಂಬೈ
* ರಾಜಾ ಹುಲಿ : ತಮಿಳಿನ ಸುಂದರ ಪಾಂಡಿಯನ್

ಭರವಸೆ ಮೂಡಿಸಿದ ನಿರ್ದೇಶಕರು

* ಗೊಂಬೆಗಳ ಲವ್: ಸಂತೋಷ್
* ಸಿಂಪಲ್ಲಾಂಗೊಂದ್ ಲವ್ ಸ್ಟೋರಿ: ಸುನಿಲ್ ಕುಮಾರ್
* ಅಂದರ್ ಬಾಹರ್: ಫಣೀಶ್ ಎಸ್ ರಾಮನಾಥಪುರ
* ಮದರಂಗಿ : ಮಲ್ಲಿಕಾರ್ಜುನ ಮುಟ್ಟಲಗೇರಿ
* ವಿಕ್ಟರಿ: ನಂದ ಕಿಶೋರ್
* ಜಟ್ಟ : ಬಿಎಂ ಗಿರಿರಾಜ್
* 6-5=2 : ಅಶೋಕ್
* ದ್ಯಾವ್ರೇ : ಗಡ್ಡ ವಿಜಿ

ಜನವರಿ ತಿಂಗಳಲ್ಲಿ

* ಪಟ್ರೆ ಅಜಿತ್ ಆಮದು ಬೆಡಗಿ ಶರಣ್ಯ ಮೋಹನ್ ಅಭಿನಯದ 'ಈ ಭೂಮಿ ಆ ಭಾನು' ಜನವರಿಯಲ್ಲಿ ಬಿಡುಗಡೆಯಾದ ಮೊದಲ ಚಿತ್ರ.

* ತಿಂಗಳಲ್ಲಿ ಒಟ್ಟು 8 ಚಿತ್ರ ರಿಲೀಸ್ ಆಗಿದ್ದು, ಎರಡು ಹಿಟ್ ಸಿನಿಮಾ ಬಂದಿದೆ.

* ಗಲ್ಲಾ ಪೆಟ್ಟಿಗೆ ಸೇಫ್ ಎನ್ನಬಹುದಾದ 4 ವಾರಗಳ ಗಡಿ ದಾಟಿದ್ದು ಮೊದಲ ಚಿತ್ರ ಶಿವರಾಜ್ ಅಭಿನಯದ ಭಾಸ್ಕರ್ ನಿರ್ಮಾಣದ ಲಕ್ಷ್ಮಿ (ಕಪಾಲಿ ಹಾಗೂ ಸಪ್ನ ಸೇರಿ 6 ವಾರ ಓಡಿತು)

* ನಂತರ ಸದ್ದು ಮಾಡಿದ್ದು ಸುದೀಪ್, ಚಿರಂಜೀವಿ ಸರ್ಜಾ ಅವರ ಶಂಕರೇಗೌಡ ನಿರ್ಮಾಣದ ವರದ ನಾಯಕ ತ್ರಿವೇಣಿ(7) ಹಾಗೂ ಸಪ್ನ (1) ವಾರ ಜತೆಗೆ ಕೆನಡಾದಲ್ಲೂ ಪ್ರದರ್ಶನದ ಹೆಗ್ಗಳಿಕೆ
* ಹೂಡಿಕೆ 9 ಕೋಟಿ ರು ಗಳಿಕೆ 13 ಕೋಟಿ ರು ಪ್ಲಸ್ 2.25 ಕೋಟಿ ಸ್ಯಾಟಲೈಟ್ ಹಕ್ಕು ಮಾರಾಟ

ಫೆಬ್ರವರಿ

* ತಿಂಗಳಲ್ಲಿ ಒಟ್ಟು 10 ಚಿತ್ರ ರಿಲೀಸ್ ಆಗಿದ್ದು, ಚಾರ್ಮಿನಾರ್, ಅಟ್ಟಹಾಸ, ಪದೇ ಪದೇ, ದೇವ್ರಾಣೆ, ಮೈನಾ ಸದ್ದು ಮಾಡಿದ ಚಿತ್ರಗಳು.
* ಚಾರ್ಮಿನಾರ್ 10 ವಾರ, ಮೈನಾ 17 ವಾರ ಓಡಿದರೆ, ಅಟ್ಟಹಾಸ ಮೂರು ಚಿತ್ರಮಂದಿರದಲ್ಲಿ ಜಂಪ್ ಮಾಡಿ 8 ವಾರ ಓಡಿತು. ಇದೇ ರೀತಿ ಪದೇ ಪದೇ ಕೂಡಾ 8 ವಾರ ಹಾಗೂ ದೇವ್ರಾಣೆ 4 ವಾರ ಚಿತ್ರಮಂದಿರದಲ್ಲಿತ್ತು.

ಮಾರ್ಚ್

* ತಿಂಗಳಲ್ಲಿ ಒಟ್ಟು 10 ಚಿತ್ರ ರಿಲೀಸ್ ಆಗಿದ್ದು, ರಜನಿಕಾಂತ, ಸಿಂಪಲ್ಲಾಗ್ ಒಂದು ಲವ್ ಸ್ಟೋರಿ, ಟೋಪಿವಾಲ, ನೆನಪಿಂಗಳ ಸದ್ದು ಮಾಡಿದವು.
* ಸಿಂಪಲ್ಲಾಗೊಂದು ಲವ್ ಸ್ಟೋರಿ 7 ವಾರ, ರಜನಿಕಾಂತ 4 ವಾರ ಬಿಟ್ಟರೆ ಟೋಪಿವಾಲ 5 ವಾರ ಓಡಿದರೂ ಹಣ ಗಳಿಸಲಿಲ್ಲ. ನೆನಪಿಂಗಳ 5 ವಾರ ಓಡಿ ಹಾಕಿದ ದುಡ್ಡು ಎತ್ತಿಕೊಂಡಿತು.

ಏಪ್ರಿಲ್

* ತಿಂಗಳಲ್ಲಿ ಒಟ್ಟು 16 ಚಿತ್ರ ರಿಲೀಸ್ ಆಗಿದ್ದು, ಬಚ್ಚನ್, ಪರಾರಿ, ಮದರಂಗಿ ಹೆಚ್ಚು ಸದ್ದು ಮಾಡಿದರೆ, ಅಂದರ್ ಬಾಹರ್ ಸೋಲು ಕಂಡಿತ್ತು.
* ಬಚ್ಚನ್ 8 ವಾರ, ಪರಾರಿ 4 ವಾರ, ಛತ್ರಿಗಳು ಸಾರ್ ಛತ್ರಿಗಳು 4 ವಾರ ಓಡಿದವು. ಬಚ್ಚನ್ 11 ಕೋಟಿ ರು ಹೂಡಿಕೆ ಮಾಡಿ 20 + 3.5 ಕೋಟಿ ರು ಬಾಚಿಕೊಂಡಿತು.

ಮೇ

* ತಿಂಗಳಲ್ಲಿ ಒಟ್ಟು 11 ಚಿತ್ರ ರಿಲೀಸ್ ಆಗಿದ್ದು, ಬುಲ್ ಬುಲ್ ಭರ್ಜರಿ ಹಿಟ್ ಆಯ್ತು. ಮದರಂಗಿ, ಜಿಂಕೆಮರಿ ಹಾಕಿದ ದುಡ್ಡು ತಂದುಕೊಟ್ಟಿತು.

* ದರ್ಶನ್ ಅವರ ಬುಲ್ ಬುಲ್ ನರ್ತಕಿ ಚಿತ್ರಮಂದಿರವೊಂದರಲ್ಲೇ 15 ವಾರ ಓಡಿತು. ಮದರಂಗಿ ಸಂತೋಷ್ ನಿಂದ ಮೇನಕಾಗೆ ಹಾರಿ ಒಟ್ಟಾರೆ 7 ವಾರ ಚಿತ್ರಮಂದಿರದಲ್ಲಿತ್ತು. ಅನುಪಮದಲ್ಲಿ ಜಿಂಕೆಮರಿ 5 ವಾರ ಓಡಿ ಅಚ್ಚರಿ ಮೂಡಿಸಿತು. ಮತ್ತೊಂದು ವಾರ ಭೂಮಿಕಾದಲ್ಲಿ ಪೂರೈಸಿತು.

* ಬಹುನಿರೀಕ್ಷಿತ ಮಠ ಗುರುಪ್ರಸಾದ್ ಅವರ ಡೈರೆಕ್ಟರ್ಸ್ ಸ್ಪೆಷಲ್ ತ್ರಿವೇಣಿ ಹಾಗೂ ಕೈಲಾಶ್ ನಲ್ಲಿ ಕಂಡರೂ ನೆಲಕಚ್ಚಿತ್ತು.

ಜೂನ್

* ತಿಂಗಳಲ್ಲಿ ಒಟ್ಟು 9ಚಿತ್ರ ರಿಲೀಸ್ ಆಗಿದ್ದು, ಕಡ್ಡಿಪುಡಿ, ಆಟೋ ರಾಜ, ಚಂದ್ರ ತಕ್ಕಮಟ್ಟಿಗೆ ಯಶಸ್ಸು ಪಡೆದವು. ಆದರೆ, ನಿರೀಕ್ಷೆ ಮಟ್ಟ ಮುಟ್ಟಲಿಲ್ಲ.

* ಸಂತೋಷ್ ನಲ್ಲಿ ಕಡ್ಡಿಪುಡಿ 6 ವಾರಗಳ ಓಡಿದ್ದೇ ಸಾಧನೆ. ಶಿವರಾಜ್ ಗೆ ತೃಪ್ತಿ ಕೊಟ್ಟ ಪಾತ್ರ ಪ್ರೇಕ್ಷಕರಿಗೆ ಅಷ್ಟಾಗಿ ಮೆಚ್ಚುಗೆ ಎನಿಸಲಿಲ್ಲ.

* ನಿರ್ದೇಶಕಿ ರೂಪಾ ಅಯ್ಯರ್ ವಾದ ನಾಯಕ ಪ್ರೇಮ್ ಕುಮಾರ್ ವಿವಾದಗಳು ಶ್ರಿಯಾ ಸರನ್ ಗ್ಲಾಮರ್ ಚಂದ್ರ ಚಿತ್ರ ಕೈ ಹಿಡಿಯಲಿಲ್ಲ. ತ್ರಿಭುವನ್, ಕೈಲಾಶ್ ಎರಡು ಚಿತ್ರಮಂದಿರ ಸೇರಿ 7 ವಾರ ಓಡಿತು.

* ಆಟೋರಾಜ ಬಗ್ಗೆ ಗಣೇಶ್ ಗೆ ಭಾರಿ ನಿರೀಕ್ಷೆ ಇತ್ತು ಆದರೆ ಕಪಾಲಿಯಲ್ಲಿ 6 ವಾರ ಓಡಿದ ಆಟೋ ಯಾಕೋ ಗೇರ್ ಬದಲಾಯಿಸು. ಸಪ್ನದಲ್ಲಿ 2 ವಾರ ಓಡಿ ಸುಸ್ತಾಗಿ ಮೂಲೆ ಸೇರಿತು.

* ಪ್ರೀತಂ ಗುಬ್ಬಿ ನಮ್ ದುನಿಯಾ ನಮ್ ಸ್ಟೈಲ್ ಎಂಬ ಫ್ಲಾಪ್ ಚಿತ್ರ ಕೊಟ್ಟು ನಿರಾಶೆ ಮೂಡಿಸಿದರು.

ಜುಲೈ

* ತಿಂಗಳಲ್ಲಿ ಒಟ್ಟು 10 ಚಿತ್ರ ರಿಲೀಸ್ ಆಗಿದ್ದು, ಗೂಗ್ಲಿ ನಿರೀಕ್ಷೆಗೂ ಮೀರಿ ಅದ್ಭುತ ಯಶಸ್ಸು ಪಡೆಯಿತು.

* ನಿರೀಕ್ಷೆ ಹುಟ್ಟಿಸಿದ್ದ ರಿಮೇಕ್ ಚಿತ್ರ ವಿಷಲ್ ತ್ರಿವೇಣಿಯಲ್ಲಿ ನಾಲ್ಕನೇ ವಾರ ಓಡಲಿಲ್ಲ.

* ನಾಟಕರಂಗದ ಪ್ರತಿಭೆ ರಾಜೇಂದ್ರ ಕಾರಂತ್, ರಮೇಶ್ ಅರವಿಂದ್ ಜೋಡಿಯ ಮಂಗನ ಕೈಲಿ ಮಾಣಿಕ್ಯ ಒಂದೇ ವಾರಕ್ಕೆ ನೆಲಕಚ್ಚಿತು.

* ಗೋವಿಂದಾಯ ನಮಃ ನಂತರ ಪವನ್ ಒಡೆಯರ್ ಅವರು ಯಶ್ ನಾಯಕತ್ವದಲ್ಲಿ ಗೂಗ್ಲಿ ಚಿತ್ರವನ್ನು 16 ವಾರಗಳ ಸಂತೋಷ್ ಚಿತ್ರಮಂದಿರದಲ್ಲಿ ಕಾಯ್ದುಕೊಂಡರು.

ಆಗಸ್ಟ್

* ತಿಂಗಳಲ್ಲಿ ಒಟ್ಟು 13 ಚಿತ್ರ ರಿಲೀಸ್ ಆಗಿದ್ದು, ಸಿಲ್ಕ್ ಸಕತ್ ಹಾಟ್ ಮಗಾ, ಜಯಮ್ಮನ ಮಗ, ವಿಕ್ಟರಿ, ಹಿಟ್ ಪಟ್ಟಿ ಸೇರಿತು.

* ವಿಭಿನ್ನ ಕಥೆ ಎಂದೇ ಹೇಳಲಾಗಿದ್ದ ದಿಗಂತ್ ಅವರ ಬರ್ಫಿ ಚಿತ್ರ ನರ್ತಕಿ ಹಾಗೂ ಕೈಲಾಶ್ ಚಿತ್ರಮಂದಿರದಲ್ಲಿ ತಲಾ 3 ವಾರ ಓಡಿತು.

* ಜಯಮ್ಮನ ಮಗ ಭೂಮಿಕಾದಲ್ಲಿ 2 ವಾರ ಓಡಿದರೂ ಅನುಪಮದಲ್ಲಿ 5 ವಾರ ಓಡಿ ನಿರ್ದೇಶಕ ವಿಕಾಸ್ ಪ್ರಯತ್ನಕ್ಕೆ ಫಲ ನೀಡಿತು.

* ಸಿಲ್ಕ್ ಚಿತ್ರ ಕಪಾಲಿಯಲ್ಲಿ 10 ವಾರ ಓಡಿ ಭರ್ಜರಿ ಗಳಿಕೆ ಮಾಡಿತು.

* ಕೇಸ್ ನಂ 18/9 ಚಿತ್ರ ಅನುಪಮದಲ್ಲಿ 3 ವಾರ ಓಡಿದರೂ ಮುಂದೆ ರೀಲೀಸ್ ಭಾಗ್ಯ ಪಡೆಯಿತು.

* ವಿಕ್ಟರಿ ತ್ರಿಭುವನ್ ನಲ್ಲಿ 8 ವಾರ, ಮೇನಕಾದಲ್ಲಿ 1 ವಾರ ಓಡಿ ಜನ ಮೆಚ್ಚುಗೆ ಗಳಿಸಿ ಶರಣ್ ಕನಸು ನನಸು ಮಾಡಿತು.

ಸೆಪ್ಟೆಂಬರ್

* ತಿಂಗಳಲ್ಲಿ ಒಟ್ಟು 8 ಚಿತ್ರ ರಿಲೀಸ್ ಆಗಿದ್ದು, ಲೂಸಿಯಾ, ಬೃಂದಾವನ ಭರ್ಜರಿ ಯಶಸ್ಸು ಕಂಡಿತು.

* ಮೂವಿಲ್ಯಾಂಡ್ ನಲ್ಲಿ 8 ವಾರ ಓಡಿದ ಪವನ್ ಕುಮಾರ್ ಅವರ ಲೂಸಿಯಾ ದೇಶ ವಿದೇಶಗಳಲ್ಲಿ ಸದ್ದು ಮಾಡುತ್ತಲೇ ಇದೆ.

* ಬೃಂದಾವನ ನರ್ತಕಿಯಲ್ಲಿ 8 ಹಾಗೂ ಕೈಲಾಶ್ ನಲ್ಲಿ 4 ವಾರ ಓಡಿ ದರ್ಶನ್ ಗೆ ಗೆಲುವು ತಂದು ಕೊಟ್ಟಿತು.

ಅಕ್ಟೋಬರ್

* ತಿಂಗಳಲ್ಲಿ ಒಟ್ಟು 8 ಚಿತ್ರ ರಿಲೀಸ್ ಆಗಿದ್ದು, ಎರಡು ಹಿಟ್ ಸಿನಿಮಾ ಬಂದಿದೆ.

* ದಿಲ್ ವಾಲ ಹಾಗೂ ಹೀಗೂ ತ್ರಿವೇಣಿಯಲ್ಲಿ 6 ವಾರ ಓಡಿ ಯಶಸ್ಸು ಗಳಿಸಿದರೂ ಹಣಗಳಿಕೆ ಬಗ್ಗೆ ವರದಿ ಸಿಕ್ಕಿಲ್ಲ.

* ಗಿರಿರಾಜ್ ಅವರ ಚೊಚ್ಚಲ ರಿಲೀಸ್ ಜಟ್ಟ ವಿಶಿಷ್ಟ ಕಥೆಯಿಂದ ಜನಕ್ಕೆ ಇಷ್ಟವಾಯಿತು ಸಪ್ನದಲ್ಲಿ 5 ವಾರ ಓಡಿತು.

* ಸಕ್ಕರೆ ಸೋತಿದ್ದು ಏಕೆ? ಗೊತ್ತಿಲ್ಲ 3 ವಾರ ಮಾತ್ರ ಚಿತ್ರಮಂದಿರದಲ್ಲಿತ್ತು.

ನವೆಂಬರ್

* ತಿಂಗಳಲ್ಲಿ ಒಟ್ಟು 12 ಚಿತ್ರ ರಿಲೀಸ್ ಆಗಿದ್ದು, ಎರಡು ಹಿಟ್ ಸಿನಿಮಾ ಬಂದಿದೆ.

* ಯಶ್ ಅವರ ಯಶಸ್ವಿ ಚಿತ್ರ ರಾಜಾಹುಲಿ ಇನ್ನೂ ಕಪಾಲಿಯಲ್ಲಿ 7 ವಾರದಿಂದ ಗರ್ಜಿಸುತ್ತಲೇ ಇದೆ.

* ತಿಂಗಳ ಕೊನೆಯಲ್ಲಿ ಬಂದ 6-5=2 ಚಿತ್ರ ಭಯಾನಕ ಹಿಟ್ ಎನಿಸಿದೆ. ಮೇನಕಾದಲ್ಲಿರುವ ಈ ಚಿತ್ರ ಮಲ್ಟಿಪ್ಲೆಕ್ಸ್ ಗಳಲ್ಲಿ ಧೂಳೆಬ್ಬಿಸಿದೆ.

* ಚಡ್ಡಿ ದೋಸ್ತ್ ಹಾಗೂ ಹೀಗೂ ತ್ರಿಭುವನ್ ನಲ್ಲಿ ನಾಲ್ಕನೇ ವಾರವನ್ನು ಎದುರು ನೋಡುತ್ತಿದೆ.

* ಖತರ್ನಾಕ್, ಕಾಫಿ ವಿಥ್ ಮೈ ವೈಫ್ , ಲೇಟ್ ಆಗಿ ರಿಲೀಸ್ ಆದ ಅಂಬರ, ರಾಧಿಕಾ ಅವರ ಸ್ವೀಟಿ ಹಿಟ್ ಲಿಸ್ಟ್ ಸೇರಲಿಲ್ಲ.

ಡಿಸೆಂಬರ್

* ತಿಂಗಳಲ್ಲಿ ಒಟ್ಟು 8 ಚಿತ್ರ ರಿಲೀಸ್ ಆಗಿದ್ದು, ಎರಡು ಹಿಟ್ ಸಿನಿಮಾ ಬಂದಿದೆ.

* ಜಟ್ಟ ಚಿತ್ರದಿಂದ ಸಿಕ್ಕ ಯಶಸ್ಸು ಅದ್ವೈತದಲ್ಲಿ ಗಿರಿರಾಜ್ ಗೆ ಸಿಗಲಿಲ್ಲ. ಚಿತ್ರ ಒಂದೇ ವಾರಕ್ಕೆ ಎತ್ತಂಗಡಿಯಾಗಿಬಿಟ್ಟಿತು.

* ಬಿ 3, ದ್ಯಾವ್ರೇ ಯಶಸ್ಸಿನ ದಾಹದಲ್ಲಿತ್ತು ತಲಾ 2 ವಾರ ಕಂಡಿವೆ.

* ಭಜರಂಗಿ ಮೊದಲ ವಾರದಲ್ಲೇ 10-12 ಕೋಟಿ ರು ಬಾಚಿದ್ದು ಸ್ವತಃ ಶಿವರಾಜ್ ಕುಮಾರ್ ಅವರೇ ದೃಢಪಡಿಸಿದ್ದಾರೆ. ಇದೇ ವೇಗದಲ್ಲಿ ಚಿತ್ರ ಮುನ್ನುಗ್ಗಿದರೆ ವರ್ಷದ ಹೆಚ್ಚು ಗಳಿಕೆ ಚಿತ್ರ ಎನಿಸಬಹುದು. ಐಂದ್ರಿತಾ ರೇ ಸಿಲ್ಲಿ ನಟನೆ, ಅನಗತ್ಯ ದೃಶ್ಯಗಳನ್ನು ತೆಗೆದು ಹಾಕಿದ್ದರೆ ಚಿತ್ರ ಶಿವಣ್ಣನಂತೆ ಟ್ರಿಮ್ ಆಗಿರುತ್ತಿತ್ತು ಎಂಬುದು ಅಭಿಮಾನಿಗಳ ಅಂಬೋಣ.

ದಿಗ್ಗಜರ ಚಿತ್ರಗಳು

ಪಿ ಶೇಷಾದ್ರಿ ಅವರು ಭಾರತ್ ಸ್ಟೋರ್ಸ್ ಚಿತ್ರ ಮಾಡಿ ವಿದೇಶಗಳಿಂದ ಪ್ರಶಸ್ತಿ ಬಾಚಿದರು.

* ಗಿರೀಶ್ ಕಾಸರವಳ್ಳಿ ಅವರು ಕುರ್ಮಾವಾತಾರ ಚಿತ್ರ ಮಾಡಿ ಪಿವಿಆರ್ ನಲ್ಲಿ ರಿಲೀಸ್ ಮಾಡಿದ್ದು ಸಾಧನೆ.

* ಪಿಆರ್ ರಾಮದಾಸ್ ನಾಯ್ಡು ಅವರ ಹೆಜ್ಜೆಗಳು ಈ ಸಾಲಿಗೆ ಸೇರುತ್ತದೆ.

English summary
Kannada Films 2013 yearly report includes Box office Success and popularity meter rate. Out of 120 odd movies Bachchan, Bulbul, Googly, Bhajarangi considered as run away hit movies. Here is a report on Kannada film industry in 2013
Please Wait while comments are loading...