ನನ್ನ ಮತ್ತು ದುನಿಯಾ ವಿಜಯ್ ನಡುವೆ ಕಿರಿಕ್ ಆಗಿದ್ದು ನಿಜಾ- ಲೂಸ್ ಮಾದ ಯೋಗಿ..!

ದುನಿಯಾ ಚಿತ್ರದ ಮೂಲಕ ಚಿತ್ರರಂಗಕ್ಕೆ ಜೊತೆ ಜೊತೆಯಾಗಿ ಬಂದವರು ದುನಿಯಾ ವಿಜಯ್ ಮತ್ತು ಲೂಸ್ ಮಾದ ಯೋಗಿ. ನಿಜಾ. ಅಲ್ಲಿಯವರೆಗೆ ವಿಜಯ್ ಕುಮಾರ್ ಹಲವು ಚಿತ್ರಗಳಿಗೆ ಸಾಹಸ ಕಲಾವಿದ ಆಗಿ ದುಡಿದಿದ್ದರು. ಚಿಕ್ಕ ಚಿಕ್ಕ ಪಾತ್ರಗಳನ್ನು ಮಾಡಿದ್ದರು. ಆದರೆ.. ದುನಿಯಾ ವಿಜಯ್ ಕುಮಾರ್ ಅವರನ್ನು ಚಿತ್ರರಂಗದಲ್ಲಿ ನಾಯಕನಾಗಿ ನೆಲೆಯೂರುವಂತೆ ಮಾಡಿತ್ತು.

ಇನ್ನೂ.. ಇದೇ ದುನಿಯಾ ಚಿತ್ರದ ಮೂಲಕ ಲೂಸ್ ಮಾದ ಪಾತ್ರದ ಮೂಲಕ ಭರಪೂರ ಅವಕಾಶ ಪಡೆದು ಹೀರೋ ಆಗಿ ಮಿಂಚಿದವರು ಯೋಗಿ. ಈ ಚಿತ್ರದ ಪ್ರಸಿದ್ದಿ ಎಷ್ಟಿದೆ ಎಂದರೆ ಅವತ್ತು ಇವರ ಹೆಸರಿನ ಹಿಂದೆ ಥಳುಕು ಹಾಕಿಕೊಂಡ ಲೂಸ್ ಮಾದ ಎಂಬ ಹೆಸರು ಇವತ್ತು ಕೂಡ ಹಾಗೇ ಇದೆ. ಎಷ್ಟೇ ಪ್ರಯತ್ನ ಮಾಡಿದರು ಕೂಡ ಯೋಗಿ ಮತ್ತೊಂದು ದುನಿಯಾದ ಭಾಗವಾಗಲಿಲ್ಲ.

yes-there-was-conflict-and-misunderstanding-between-me-and-duniya-vijay-but-now-says-yogi

ಇಂಥಾ ದುನಿಯಾ ವಿಜಯ್ ಮತ್ತು ಲೂಸ್ ಮಾದ ಯೋಗಿ ನಿಜ ಜೀವನದಲ್ಲಿ ಸಂಬಂಧಿಕರು. ವಿಜಯ್ ಅವರ ಸ್ವಂತ ಅಕ್ಕನ ಮಗ ಈ ಯೋಗಿ. ಇನ್ನು ದುನಿಯಾ ಚಿತ್ರಕ್ಕೆ ಬಂಡವಾಳ ಹೂಡಿದ್ದು ಕೂಡ ಯೋಗಿ ಅವರ ತಂದೆಯೇ. ಆದರೆ ಯಶಸ್ಸು ಕೆಲ ಒಮ್ಮೆ ಎಂಥವರ ತಲೆಯನ್ನು ತಿರುಗಿಸುತ್ತೆ. ಸಂಬಂಧವನ್ನು ಹಾಳು ಮಾಡುತ್ತೆ. ವಿಜಯ್ ಮತ್ತು ಯೋಗಿ ವಿಚಾರದಲ್ಲಿ ಇದೇ ಆಗಿದ್ದಾ ಗೊತ್ತಿಲ್ಲ ಆದರೆ ದುನಿಯಾ ನಂತರ ದುನಿಯಾ ವಿಜಯ್ ಮತ್ತು ಲೂಸ್ ಮಾದ ಯೋಗಿ ನಡುವೆ ಬಿರುಕು ಮೂಡಿದ್ದು ಸ್ಪಷ್ಟವಾಗಿತ್ತು. ಯೋಗಿ ಮದ್ವೆ ಸೇರಿ ಅನೇಕ ಸಭೆ ಸಮಾರಂಭದಲ್ಲಿ ದುನಿಯಾ ವಿಜಯ್ ಮತ್ತು ಯೋಗಿ ನಡುವೆ ಮನಸ್ತಾಪ ಇರುವುದು ಜಗಜ್ಜಾಹೀರಾಗಿತ್ತು. ಈಗ ಅನೇಕ ವರ್ಷಗಳ ನಂತರ ಈ ಬಿರುಕಿನ ಕುರಿತು ಲೂಸ್ ಮಾದ ಯೋಗಿ ಮಾತನಾಡಿದ್ದಾರೆ.

ಹೌದು, ಸಾಲು ಸಾಲು ಸೋಲುಗಳಿಂದ ನಿರಾಶಗೊಂಡ ಯೋಗಿ ಸದ್ಯ ಸಿದ್ಲಿಂಗು 2 ಚಿತ್ರವನ್ನು ಮಾಡಿದ್ದಾರೆ. ಈ ಮೂಲಕ ಮೈ ಕೊಡವಿ ಎದ್ದು ನಿಲ್ಲುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಇನ್ನೇನು ಈ ಚಿತ್ರ ಬಿಡುಗಡೆಯಾಗಲಿದೆ. ಹೀಗಾಗಿಯೇ ಚಿತ್ರದ ಪ್ರಚಾರದ ಅಂಗಳಕ್ಕೆ ತಮ್ಮ ನಿರ್ದೇಶಕ ವಿಜಯಪ್ರಸಾದ ಜೊತೆ ಧುಮುಕಿರುವ ಯೋಗಿ ಚಿತ್ರದ ಕುರಿತು ಮಾಧ್ಯಮದವರಿಗೆ ಮಾಹಿತಿಯನ್ನು ನೀಡಿದ್ದಾರೆ. ಇದೇ ಸಮಯದಲ್ಲಿ ದುನಿಯಾ ವಿಜಯ್ ಮತ್ತು ತಮ್ಮ ನಡುವೆ ಹಿಂದೆ ಹದಗೆಟ್ಟಿದ್ದ ಸಂಬಂಧದ ಕುರಿತು ಮಾತನಾಡಿದ್ದಾರೆ.

ದುನಿಯಾ ವಿಜಯ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳಿರುವ ಲೂಸ್ ಮಾದ ಯೋಗಿ ಎರಡು ಚಿತ್ರಗಳ ಫಸ್ಟ್‌ ಲುಕ್ ಚೆನ್ನಾಗಿವೆ. ನಾನು ವಿಜಯ್ ಅವರ ಜೊತೆ ಚಿತ್ರ ಮಾಡಬೇಕಿತ್ತು ಆದರೆ ಅದು ಆಗಲಿಲ್ಲ ಎಂದಿದ್ದಾರೆ. ಹಿಂದೊಮ್ಮೆ ಎರಡು ಕುಟುಂಬಗಳ ನಡುವೆ ಮನಸ್ತಾಪ ಇತ್ತು, ಹೀಗಾಗಿ ಮಾತನಾಡುತ್ತಿರಲಿಲ್ಲ ಎನ್ನುವ ವಿಚಾರವನ್ನು ಯಾವ ಮುಚ್ಚು ಮರೆಯಿಲ್ಲದೆ ಹೇಳಿರುವ ಯೋಗಿ ಸದ್ಯ ನಾವೆಲ್ಲ ಚೆನ್ನಾಗಿದ್ದೇವೆ ನಮ್ಮ ನಡುವೆ ಯಾವ ಸಮಸ್ಯೆ ಕೂಡ ಇಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.

ಮುಂದುವರೆದು ಭೀಮ ಚಿತ್ರದಲ್ಲಿ ನಾನು ಆಕ್ಟ್ ಮಾಡಬೇಕಿತ್ತು ಆದರೆ ಕಾರಣಾಂತರಗಳಿಂದ ಅದು ಕೂಡ ಆಗಲಿಲ್ಲ ಎಂದಿರುವ ಯೋಗಿ ಕಾಲ ಕೂಡಿ ಬಂದರೆ ಇಬ್ಬರು ಜೊತೆಯಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆಯನ್ನು ಕೂಡ ನೀಡಿರುವ ದುನಿಯಾ ವಿಜಯ್ ಅವನು ನನ್ನ ಅಕ್ಕನ ಮಗ ಅವನು ಚಿಕ್ಕವನಿದ್ದಾಗ ಎತ್ತಿ ಆಡಿಸಿದ್ದೇನೆ ಎಂದು ಹೇಳಿದ್ದಾರೆ. ನಮ್ಮ ಮನೆಯಲ್ಲಿ ಹುಟ್ಟಿದ ಮೊದಲ ಮಕ್ಕಳು ಅವರು ಹೀಗಾಗಿ ಪ್ರೀತಿ ಅಭಿಮಾನ ಕೂಡ ಇರುತ್ತೆ ಎಂದು ಹೇಳಿರುವ ವಿಜಿ ಎಷ್ಟೇ ದೂರದಲ್ಲಿ ಇದ್ದರೂ ಕೂಡ ಅವರೆಲ್ಲ ಚೆನ್ನಾಗಿರಲಿ ಎನ್ನುವುದಷ್ಟೇ ನನ್ನ ಪ್ರಾರ್ಥನೆಯಾಗಿರುತ್ತೆ ಎಂದು ಹೇಳಿದ್ದಾರೆ. ಇನ್ನು ಭೀಮ ಸಿನಿಮಾದಲ್ಲಿ ಯೋಗಿ ನಟಿಸಬೇಕಿತ್ತು ಆದರೆ ಆಗಲಿಲ್ಲ ಇನ್ಮುಂದೆ ನಾನು ಮತ್ತು ಯೋಗಿ ಸಿನಿಮಾ ಮಾಡ್ತೀವಿ, ಈಗ ನಾನೇ ನಿರ್ದೇಶಕನಾಗಿರುವುದರಿಂದ ಆ ಅವಕಾಶ ಕೂಡ ಇದೆ ಎಂದು ಹೇಳಿರುವ ವಿಜಿ ಸೋದರ ಮಾವನಾಗಿ ನಾನು ಯೋಗಿಗೆ ಒಳ್ಳೆಯದಾಗಲಿ ಎಂದು ಬಯಸುತ್ತೇನೆ ಎಂದು ಹೇಳಿದ್ದಾರೆ. ಒಂದು ಕಥೆಯ ಮಾತು ಕಥೆ ನಡೆಯುತ್ತಿದೆ, ಯೋಗಿ ಜೊತೆ ಮಾಡೋಣ ಎಂದು ಹೇಳಿದ್ದೇನೆ ಅದಿನ್ನೂ ಫೈನಲ್ ಆಗಬೇಕಿದೆ ಎಂದು ಹೇಳಿದ್ದಾರೆ ಸಲಗ ವಿಜಯ್‌ ಕುಮಾರ್.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X