'Zooಮ್' ಸೂಪರ್ ಹಿಟ್.! ನಾಳೆ ದಾಖಲೆ ಸಮೇತ ಸಾಬೀತು.!
ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ರಾಧಿಕಾ ಪಂಡಿತ್ ಅಭಿನಯದ 'Zooಮ್' ಚಿತ್ರ ತೆರೆಕಂಡು ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. 'ವಯಸ್ಕರ' ಕಾಮಿಡಿ ಪ್ರಿಯರಿಗೆ ಹೇಳಿ ಮಾಡಿಸಿದ ಚಿತ್ರವಾಗಿರುವ 'Zooಮ್' ನೋಡಲು ಪಡ್ಡೆ ಹುಡುಗರು ಮುಗಿ ಬೀಳುತ್ತಿದ್ದಾರೆ.
ಕಲೆಕ್ಷನ್ ವಿಚಾರದಲ್ಲಿ ಗಣೇಶ್ ಅಭಿನಯದ 'Zooಮ್' ಚಿತ್ರ ಕಮಾಲ್ ಮಾಡಿದ್ಯಂತೆ. ಕರ್ನಾಟಕ ಹಾಗೂ ವಿದೇಶಗಳಲ್ಲಿ ಏಕಕಾಲಕ್ಕೆ ತೆರೆಕಂಡಿದ್ದ 'Zooಮ್' ಸಿನಿಮಾ ಕಳೆದ ಮೂರು ದಿನಗಳಲ್ಲಿ ಮಾಡಿರುವ ಬಂಪರ್ ಕಲೆಕ್ಷನ್ ರಿಪೋರ್ಟ್ ನಾಳೆ ಹೊರಬೀಳಲಿದೆ. ['ಜೂಮ್' ಲೆನ್ಸ್ ಹಾಕಿ ನೋಡಿದ ವಿಮರ್ಶಕರಿಗೆ ಕಂಡಿದ್ದೇನು?]

ನಾಳೆ (ಜುಲೈ 5) ಬೆಳಗ್ಗೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಇರುವ ಗಣೇಶ್ ನಿವಾಸದಲ್ಲಿ 'Zooಮ್' ಚಿತ್ರತಂಡ ಪತ್ರಿಕಾಗೋಷ್ಠಿ ಕರೆದಿದೆ. ಅದರಲ್ಲಿ ಕಲೆಕ್ಷನ್ ಮ್ಯಾಟರ್ ನ ನಿರ್ದೇಶಕ ಪ್ರಶಾಂತ್ ರಾಜ್ ಬಾಯ್ಬಿಡಲಿದ್ದಾರಂತೆ. ಜೊತೆಗೆ 'Zooಮ್' ಚಿತ್ರದ ಸಕ್ಸಸ್ ಪಾರ್ಟಿ ಕೂಡ ಅಲ್ಲೇ ನಡೆಯಲಿದೆ. [ಚಿತ್ರ ವಿಮರ್ಶೆ: 'Zooಮ್' ಮಾಡಿ ನೋಡಿದ್ರೂ, 'ಜುಮ್' ಎನಿಸದು.!]
ಮೂಲಗಳ ಪ್ರಕಾರ, ಎಲ್ಲರ ಊಹೆಗೂ ಮೀರಿ 'Zooಮ್' ಚಿತ್ರ ಸಖತ್ತಾಗಿ ಪೈಸಾ ವಸೂಲ್ ಮಾಡಿದೆ. ಹೀಗಾಗಿ ಗಣೇಶ್, ರಾಧಿಕಾ ಪಂಡಿತ್ ಹಾಗೂ ನಿರ್ದೇಶಕ ಪ್ರಶಾಂತ್ ರಾಜ್ ಫುಲ್ ಝೂಮಿಂಗ್ ಮೂಡ್ ನಲ್ಲಿದ್ದಾರೆ.


Click it and Unblock the Notifications











