For Quick Alerts
  ALLOW NOTIFICATIONS  
  For Daily Alerts

  ಗಣೇಶ್ ಮತ್ತು ಯೋಗರಾಜ್ ಭಟ್ ಅಡ್ಡದಿಂದ ಇದೀಗ ಬಂದ ಸುದ್ದಿ

  By Harshitha
  |

  ಗಣೇಶ್ ಮತ್ತು ಯೋಗರಾಜ್ ಭಟ್...ಇಬ್ಬರು ಸೇರಿ ಸ್ಯಾಂಡಲ್ ವುಡ್ ನಲ್ಲಿ ಮಾಡಿದ ಅದ್ಭುತ ನಿಮಗೆ ಗೊತ್ತೇ ಇದೆ. 'ಮುಂಗಾರು ಮಳೆ' ಎಂಬ ಸೂಪರ್ ಡ್ಯೂಪರ್ ಹಿಟ್ ಕೊಟ್ಟ ಈ ಜೋಡಿ 'ಗಾಳಿಪಟ' ಹಾರಿಸಿದ ಮೇಲೆ 'ತಾವಾಯ್ತು, ತಮ್ಮ ಕೆಲಸ ಆಯ್ತು' ಎಂಬಂತಿದ್ರು.

  ಇಬ್ಬರನ್ನು ಒಂದು ಮಾಡುವ ಪ್ರಯತ್ನ ಎಷ್ಟೇ ಬಾರಿ ನಡೆದರೂ, ಒಂದಲ್ಲಾ ಒಂದು ಕಾರಣದಿಂದ ಅಡಚಣೆ ಆಗುತ್ತಲೇ ಇತ್ತು. [ಗೋಲ್ಡನ್ ಸ್ಟಾರ್ ಗಣೇಶ್, ಭಟ್ ಹ್ಯಾಟ್ರಿಕ್ ಕಾಂಬಿನೇಷನ್ ಚಿತ್ರ]

  ಎಲ್ಲದಕ್ಕೂ ಕಾಲ ಕೂಡಿ ಬರಬೇಕು ಅಂತಾರಲ್ಲ, ಹಾಗೇ... ಹ್ಯಾಟ್ರಿಕ್ ಬಾರಿಸಲು ಇಬ್ಬರು ಒಂದಾಗುವ ಕಾಲ ಈಗ ಕೂಡಿ ಬಂದಿದೆ. ಯೋಗರಾಜ್ ಭಟ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಅಡ್ಡದಿಂದ ಬ್ರೇಕಿಂಗ್ ನ್ಯೂಸೊಂದು ಹೊರಬಿದ್ದಿದೆ. ಅದೇನು ಅಂತ ಸವಿವರವಾಗಿ ಹೇಳ್ತೀವಿ, ಕೆಳಗಿರುವ ಸ್ಲೈಡ್ ಗಳಲ್ಲಿ ಓದಿರಿ.....

  ಒಂದಾದರು ಯೋಗರಾಜ್ ಭಟ್-ಗಣೇಶ್

  ಒಂದಾದರು ಯೋಗರಾಜ್ ಭಟ್-ಗಣೇಶ್

  'ಮುಂಗಾರು ಮಳೆ' ಹಾಗೂ 'ಗಾಳಿಪಟ' ಚಿತ್ರದ ನಂತರ ನಿರ್ದೇಶಕ ಯೋಗರಾಜ್ ಭಟ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಒಟ್ಟಾಗಿದ್ದಾರೆ. ಭಟ್ರ ನಿರ್ದೇಶನದಲ್ಲಿ ಗಣೇಶ್ ಅಭಿನಯದ ಮೂರನೇ ಸಿನಿಮಾಗೆ ಸದ್ಯದಲ್ಲೇ ಚಾಲನೆ ಸಿಗಲಿದೆ. [ಮತ್ತೆ 'ಮಳೆ'ಯಲ್ಲಿ ನೆನೆಯುತ್ತಾರಾ ಗಣಿ, ಭಟ್ರು..?]

  ಇಬ್ಬರೂ ನಿರ್ಮಾಣ ಮಾಡುತ್ತಿದ್ದಾರೆ.!

  ಇಬ್ಬರೂ ನಿರ್ಮಾಣ ಮಾಡುತ್ತಿದ್ದಾರೆ.!

  ಅಚ್ಚರಿ ಅಂದ್ರೆ ಇದೇ.! ಈ ಚಿತ್ರವನ್ನ ಸ್ವತಃ ಗಣೇಶ್ ಹಾಗೂ ಯೋಗರಾಜ್ ಭಟ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.

  ಸಿನಿಮಾದ ಕಥಾವಸ್ತು ಏನು.?

  ಸಿನಿಮಾದ ಕಥಾವಸ್ತು ಏನು.?

  ಅತ್ಯಂತ ಸರಳ, ದಿನ ನಿತ್ಯದ ಬದುಕಿನಲ್ಲಿ ಗೋಚರಿಸುವ ಹುಡುಗ-ಹುಡುಗಿಯರ ಭಾವನಾ ಪ್ರಪಂಚವೇ ಈ ಸಿನಿಮಾದ ಕಥಾವಸ್ತು.

  ಸಂಗೀತ ಯಾರದ್ದು.?

  ಸಂಗೀತ ಯಾರದ್ದು.?

  ಯೋಗರಾಜ್ ಭಟ್ ಮತ್ತು ಗಣೇಶ್ ಒಂದಾಗುತ್ತಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನೀಡಲಿದ್ದಾರೆ. ಜಯಂತ್ ಕಾಯ್ಕಿಣಿ ಮತ್ತು ಯೋಗರಾಜ್ ಭಟ್ ರವರ ಸಾಹಿತ್ಯ ಇರಲಿದೆ.

  ತಾರಾಗಣ

  ತಾರಾಗಣ

  ಸ್ಕ್ರಿಪ್ಟ್ ಬರವಣಿಗೆ ಮುಗಿದಿದ್ದು, ಉಳಿದ ತಾರಾಬಳಗ ಹಾಗೂ ತಂತ್ರಜ್ಞರ ಆಯ್ಕೆ ನಡೆಯುತ್ತಿದೆ.

  ಶೀರ್ಷಿಕೆ ಏನು.?

  ಶೀರ್ಷಿಕೆ ಏನು.?

  ಈ ಚಿತ್ರದ ಶೀರ್ಷಿಕೆ ಇನ್ನೂ ಫೈನಲ್ ಆಗಿಲ್ಲ.

  ಚಿತ್ರಕ್ಕೆ ಚಾಲನೆ ಯಾವಾಗ.?

  ಚಿತ್ರಕ್ಕೆ ಚಾಲನೆ ಯಾವಾಗ.?

  ಸೆಪ್ಟೆಂಬರ್ 25 ರಂದು ಗಣೇಶ್-ಭಟ್ ಕಾಂಬಿನೇಷನ್ ನ ಹೊಸ ಚಿತ್ರಕ್ಕೆ ಚಾಲನೆ ಸಿಗಲಿದೆ. ಮೈಸೂರು ಸೇರಿದಂತೆ ಕರ್ನಾಟಕದ ನಿಸರ್ಗ ಸಿರಿಯಲ್ಲಿ ಚಿತ್ರೀಕರಣ ನಡೆಯಲಿದೆ.

  English summary
  Director Yogaraj Bhat and Kannada Actor Ganesh have finally come together for their yet-to-be-titled Hat-trick Movie. The movie will be launched on Sept 25th, and will be produced by Yogaraj Bhat and Ganesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X