'ಸೀರೆ' ಹಿಂದೆ ಹೊರಟ ಯೋಗರಾಜ್ ಭಟ್, ಶಶಾಂಕ್

ಸೀರೆಲಿ ಹುಡುಗೀರ ನೋಡಲೇಬಾರದು.. ನಿಲಲ್ಲ ಟೆಂಪ್ರೆಚರು.. ಎಂದು ಹಾಡು ಬರೆದಿದ್ದ ಯೋಗರಾಜ್ ಭಟ್ ಇದೀಗ 'ಸೀರೆ' ಹಿಂದೆ ಹೊರಟಿದ್ದಾರೆ. ಅವರೊಬ್ಬರೆ ಅಲ್ಲ ಕನ್ನಡದ ಇನ್ನೊಬ್ಬ ನಿರ್ದೇಶಕ ಶಶಾಂಕ್ ಕೂಡ ಅವರ ಜೊತೆಗೆ ಸೇರಿದ್ದಾರೆ.

ಅಂದಹಾಗೆ, ಶಶಾಂಕ್ ಹಾಗೂ ಯೋಗರಾಜ್ ಭಟ್ ಸೇರಿ ಒಂದು ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸದ್ಯಕ್ಕೆ, ಈ ಸಿನಿಮಾಗೆ ನಿರ್ಮಾಣ ಸಂಖ್ಯೆ 3 ಎಂದು ಕರೆಯಲಾಗಿತ್ತು. ಆದರೆ, ಈ ಸಿನಿಮಾಗೆ ಈಗ ಟೈಟಲ್ ಫಿಕ್ಸ್ ಆಗಿದೆ. ಸಿನಿಮಾಗೆ 'ಸೀರೆ' ಎಂದು ನಾಮಕರಣ ಮಾಡಲಾಗಿದೆ.

ಈ ಸಿನಿಮಾಗೆ ರಿಷಿ ನಾಯಕನಾಗಿದ್ದಾರೆ. ಕೈ ತುಂಬ ಸಿನಿಮಾ ಅವಕಾಶ ಹೊಂದಿರುವ ಈ ಪ್ರತಿಭಾವಂತ ನಟನ ಚಿತ್ರಕ್ಕೆ ಇಬ್ಬರು ನಿರ್ದೇಶಕರು ಬಂಡವಾಳ ಹಾಕಿದ್ದಾರೆ. ಯೋಗರಾಜ್ ಭಟ್ ಜೊತೆಗೆ 'ಗಾಳಿಪಟ 2' ಸಿನಿಮಾದಲ್ಲಿ ರಿಷಿ ನಟಿಸಬೇಕಾಗಿತ್ತು ಆದರೆ, ಕೊನೆಯ ಕ್ಷಣಗಳ ಬದಲಾವಣೆಯಿಂದ ರಿಷಿ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿಲ್ಲ.

Yogaraj Bhat And Shashank Movie Titeld As Seere

ಯೋಗರಾಜ್ ಭಟ್ ಹಾಗೂ ಶಶಾಂಕ್ ನಿರ್ಮಾಣದ ಸಿನಿಮಾವನ್ನು ಮೋಹನ್ ಸಿಂಗ್ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಇವರು ಯೋಗರಾಜ್ ಭಟ್ ಜೊತೆಗೆ ಕೆಲಸ ಮಾಡುತ್ತಿದ್ದರು. ಸಿನಿಮಾಗೆ 'ಸೀರೆ' ಎಂದು ಹೆಸರಿಟ್ಟಿದ್ದು, ಆದರೆ, ಸೀರೆ ಉಡುವ ನಟಿ ಯಾರು ಎನ್ನುವುದನ್ನು ಇನ್ನು ಬಹಿರಂಗ ಪಡಿಸಿಲ್ಲ.

'ಮುಂಗಾರು ಮಳೆ' ಚಿತ್ರವನ್ನು ಯೋಗರಾಜ್ ಭಟ್ ನಿರ್ದೇಶನ ಮಾಡಿದ್ದು, 'ಮುಂಗಾರು ಮಳೆ 2' ಸಿನಿಮಾಗೆ ಶಶಾಂಕ್ ಡೈರೆಕ್ಷನ್ ಇತ್ತು. ಇದೀಗ 'ಸೀರೆ' ಚಿತ್ರ ಈ ಇಬ್ಬರು ನಿರ್ದೇಶಕರನ್ನು ಒಂದು ಮಾಡಿದೆ.

More from Filmibeat

English summary
Yogaraj Bhat and Shashank movie titeld as 'Seere'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X