twitter
    For Quick Alerts
    ALLOW NOTIFICATIONS  
    For Daily Alerts

    ರಾಯಚೂರು ವಿದ್ಯಾರ್ಥಿನಿ ಸಾವು: ಹೃದಯಸ್ಪರ್ಶಿ ಪತ್ರ ಬರೆದ ಯೋಗರಾಜ್ ಭಟ್

    |

    ರಾಯಚೂರು ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಅನುಮಾನಸ್ಪಾದ ಸಾವಿಗೆ ತೀವ್ರ ಖಂಡನೆ ವ್ಯಕ್ತವಾಗಿದೆ. ಸಾರ್ವಜನಿಕರು, ಸಿನಿಮಾ ತಾರೆಯರು, ರಾಜಕಾರಣಿಗಳೂ ಎಲ್ಲರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದ್ರೆ, ಈ ಘಟನೆಯ ಬಗ್ಗೆ ಮಾಧ್ಯಮಗಳು, ಸರ್ಕಾರ ಎಲ್ಲವೂ ತಡವಾಗಿ ಎಚ್ಚೆತ್ತುಗೊಂಡಿದ್ದು ನಿಜಕ್ಕೂ ದುರಂತ.

    ಈ ಬಗ್ಗೆ ನಿರ್ದೇಶಕ ಯೋಗರಾಜ್ ಭಟ್ ಕೂಡ ಬೇಸರ ವ್ಯಕ್ತಪಡಿಸಿದ್ದು, ಭಾವನಾತ್ಮಕ ಪತ್ರ ಬರೆದು ತಮ್ಮ ನೋವು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಜನಸಾಮಾನ್ಯರಿಗೆ ಅದರಲ್ಲೂ ಬೆಂಗಳೂರಿನ ಜನತೆಗೆ ಕೆಲವು ಪ್ರಶ್ನೆಗಳನ್ನ ಮುಂದಿಟ್ಟಿದ್ದಾರೆ.

    ರಾಯಚೂರಿನ ವಿದ್ಯಾರ್ಥಿನಿ ಸಾವು : ನ್ಯಾಯಕ್ಕಾಗಿ ನಟ, ನಟಿಯರ ಕೂಗು ರಾಯಚೂರಿನ ವಿದ್ಯಾರ್ಥಿನಿ ಸಾವು : ನ್ಯಾಯಕ್ಕಾಗಿ ನಟ, ನಟಿಯರ ಕೂಗು

    ಮಕ್ಕಳು ಅಂದ್ರೆ ಎಲ್ಲ ಮಕ್ಕಳು ಒಂದೇ ಅಲ್ವಾ. ಇಂತಹ ಕೃತ್ಯಗಳು ನಡೆಯದಂತೆ ಎಚ್ಚರವಹಿಸಬೇಕು ಎಂದು ಭಟ್ ಸಲಹೆ ನೀಡಿದ್ದಾರೆ. ಯೋಗರಾಜ್ ಭಟ್ಟರ ಭಾವನಾತ್ಮಕ ಪತ್ರದಲ್ಲಿ ಏನಿದೆ? ಮುಂದೆ ಓದಿ....

    ಅಂದು ಭಾರತವೇ ಕೂಗಿತು

    ಅಂದು ಭಾರತವೇ ಕೂಗಿತು

    ''ವಿಕೃತನೊಬ್ಬನ ಕೆಲಸಕ್ಕೆ ಹೂವೊಂದು ಸುಟ್ಟು ಹೋಗಿದೆ. ಎಲ್ಲ ಕಡೆಗೆ ಮರುಕ ಮಡುಗಟ್ಟುತ್ತಿದೆ 'ಮಧು' ಎಂಬ ಅಮಾಯಕಿ ಕೊಲೆಗೆ. ಇದೇ ರೀತಿಯ ಕೃತ್ಯ ದೆಹಲಿಯಲ್ಲಿ ನಡೆದಾಗ ಇಡೀ ಭಾರತ ಕೂಗಿತು. ಆದರೆ ನಮ್ಮ ರಾಜಧಾನಿ ಬೆಂಗಳೂರು ಮಾತ್ರ ಮೊನ್ನೆಯಿಂದಲೂ ಪ್ರತಕ್ರಿಯೆ ನೀಡಲು, ಮಾತನಾಡಲು ಮನಸ್ಸು ಮಾಡುತ್ತಿಲ್ಲ''

    ಬೆಂಗಳೂರು ಜನರು ಯಾಕೆ ಹೀಗೆ?

    ಬೆಂಗಳೂರು ಜನರು ಯಾಕೆ ಹೀಗೆ?

    ''ಹೋಗಲಿ ಏನೋ ವೋಟು ಹಾಕುವ ಕೆಲಸ ಇತ್ತು ಅನ್ನುವುದಾದರೆ ಅದೂ ಇಲ್ಲ. 45 % ಜನ ಮಾತ್ರ ಮತ ಹಾಕಿದ್ದಾರೆ. ಬಾಕಿ ಜನರು ದಿವ್ಯ ನಿದ್ದೆಯಲ್ಲಿದ್ದಾರಾ? ಯಾರು ಎಬ್ಬಿಸುವುದು ಇವರನ್ನು? ಮಧು ಆತ್ಮಕ್ಕೆ ನೆಮ್ಮದಿಕೋರುವುದು ಪ್ರತಿಯೊಬ್ಬ ಕರ್ತವ್ಯ ಅಲ್ಲವೇ? ಯಾರ ಮನೆಯ ಮಗುವಾದರೇನು ಸಾವೆಂಬ ಸಂಕಟ ಎಲ್ಲರಿಗು ತೀವ್ರವಾಗಿ ಕಾಡಬೇಕಲ್ಲವೇ?''

    ರಾಯಚೂರಿನಲ್ಲಿ ವಿದ್ಯಾರ್ಥಿನಿಯ ನಿಗೂಢ ಸಾವು, ಕಟ್ಟೆಯೊಡೆದ ಆಕ್ರೋಶ

    ಮೊದಲು ಪ್ರತಿಕ್ರಯಿಸಿ ಮಾನವೀಯತೆ ತೋರಿಸಿ

    ಮೊದಲು ಪ್ರತಿಕ್ರಯಿಸಿ ಮಾನವೀಯತೆ ತೋರಿಸಿ

    ''ದಯಮಾಡಿ ಈ ಮಾನಭಂಗ ಕೊಲೆಯಂತಹ ವಿಕೃತಿಗಳನ್ನು ತಡೆಯಲು ತಡವಾದರೂ ಪರವಾಗಿಲ್ಲ ಕೊನೆ ಪಕ್ಷ ಪ್ರತಿಕ್ರಿಯಿಸಿ.. ಒಂದೇ ದನಿಯಲ್ಲಿ ಒಂಚೂರು ಆವೇಶದಲ್ಲಿ ಭವಿಷ್ಯದ ಹೂವುಗಳನ್ನು ಸುಡಲು ಬರುವ ಬೆಂಕಿಯನ್ನು ಒಂದೇ ಒಂದು 'ಕಿಡಿ' ಕೂಡ ಉಳಿಯದಂತೆ ನಂದಿಸಲು ಮುಂದಾಗಿ...ಮಧು...ಕಂದಮ್ಮ...ನಿನಗೆ ನ್ಯಾಯ ನೀ ಇಲ್ಲದಿದ್ದರೂ..ಸಿಗಲಿ....ಹೋಗಿ ಬಾ ತಾಯಿ...''

    ಶಿಕ್ಷೆಯಾಗಲೇ ಬೇಕು

    ಶಿಕ್ಷೆಯಾಗಲೇ ಬೇಕು

    ರಾಯಚೂರಿನ ಮಾಣಿಕ್ ಪ್ರಭು ದೇವಸ್ಥಾನದ ಗುಡ್ಡದಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ವಿದ್ಯಾರ್ಥಿನಿಯ ಶವ ಪತ್ತೆಯಾಗಿತ್ತು. ಏಪ್ರಿಲ್ 16ರಂದು ಈ ಪ್ರಕರಣ ಬೆಳಕಿಗೆ ಬಂದಿದ್ದು, ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.

    English summary
    Kannada director Yogaraj bhat condemns death of engineering student in Raichur. he wrote emotion letter on this issuse.
    Saturday, April 20, 2019, 17:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X