ವಿಜಯ ಪ್ರಕಾಶ್ ತಂದೆ ನಿಧನಕ್ಕೆ ಯೋಗರಾಜ್ ಭಟ್ ಸಂತಾಪ
ಕನ್ನಡದ ಖ್ಯಾತ ಗಾಯಕ ವಿಜಯ ಪ್ರಕಾಶ್ ತಮ್ಮ ತಂದೆಯನ್ನು ಕಳೆದುಕೊಂಡಿದ್ದಾರೆ. ವಿಜಯ ಪ್ರಕಾಶ್ ತಂದೆ ಎಲ್.ರಾಮಶೇಷ (72) ನಿನ್ನೆ (ಭಾನುವಾರ) ವಿಧಿವಶರಾಗಿದ್ದಾರೆ.
ಅನಾರೋಗ್ಯ ದಿಂದ ಬಳಲುತ್ತಿದ್ದ ಅವರನ್ನು ರಾಮಶೇಷ ಅವರನ್ನು 5 ದಿನಗಳ ಹಿಂದೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ, ಇಂದು ಭಾನುವಾರ ಬೆಳಗ್ಗೆ 5.30ಕ್ಕೆ ವಿಧಿವಶರಾದರು.
ವಿಜಯ ಪ್ರಕಾಶ್ ತಂದೆಯ ನಿಧನಕ್ಕೆ ನಿರ್ದೇಶಕ ಯೋಗರಾಜ್ ಭಟ್ ಟ್ವಿಟ್ಟರ್ ಖಾತೆಯಲ್ಲಿ ಮೂಲಕ ಸಂತಾಪ ಸೂಚಿಸಿದ್ದಾರೆ. ''ಸಾವಲ್ಲ ಅದು ಅವರ ಹುಟ್ಟು, ಶಾಂತಿ ಶಾಂತಿ ಶಾಂತಿ ಹೀ, ಅಪ್ಪಾವ್ರು ಹೋಗಿ ಬರಲಿ ತುಂಬು ಜೀವನ ಅವ್ರದ್ದು, ಚಿರ ಶಾಂತಿ. ಶ್ರೀ ವಿಜಯ್ ಪ್ರಕಾಶ್ ಕುಟುಂಬಕ್ಕೆ ಹನಿ ಕಂಬನಿಯ ಸಾಂತ್ವನ'' ಎಂದು ಟ್ವೀಟ್ ಮಾಡಿದ್ದಾರೆ.

ಗಾಯಕ ವಿಜಯ ಪ್ರಕಾಶ್ ಅಮೇರಿಕಾಕ್ಕೆ ತೆರಳಿದ್ದು ಅಲ್ಲಿಂದ ಆಗಮಿಸಬೇಕಿರುವ ಹಿನ್ನಲೆಯಲ್ಲಿ ಮಂಗಳವಾರ ಬೆಳಗ್ಗೆ ಅಂತ್ಯಸಂಸ್ಕಾರ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಮೈಸೂರಿನ ಚಾಮುಂಡಿ ಬೆಟ್ಡದ ತಪ್ಪಲಿನ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ವಿಜಯಪ್ರಕಾಶ್ ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.
ಯೋಗರಾಜ್ ಭಟ್ ಅವರ ಅನೇಕ ಸಿನಿಮಾಗಳ ಹಾಡಿಗೆ ವಿಜಯ ಪ್ರಕಾಶ್ ಧ್ವನಿ ನೀಡಿದ್ದಾರೆ.


Click it and Unblock the Notifications











