For Quick Alerts
  ALLOW NOTIFICATIONS  
  For Daily Alerts

  ವಿದೇಶದಲ್ಲೂ ಹಾರುತ್ತಿದೆ ಕನ್ನಡದ 'ಗಾಳಿಪಟ'!

  |

  'ಗಾಳಿಪಟ' ಎನ್ನುವ ಟೈಟಲ್ ಕನ್ನಡ ಪ್ರೇಕ್ಷಕರಿಗೆ ಹೊಸದೇನಲ್ಲ. ಈ ಮೊದಲು 'ಗಾಳಿಪಟ' ಸಿನಿಮಾ ಮಾಡಿದ್ದ ನಿರ್ದೇಶಕ ಯೋಗ್‌ರಾಜ್ ಭಟ್ ಈಗ 'ಗಾಳಿಪಟ 2' ಮಾಡಿದ್ದಾರೆ. ನಿರ್ದೇಶಕ ಯೋಗರಾಜ್ ಭಟ್ಟರನ್ನು ಕನ್ನಡದ ವಿಕಟ ಕವಿ ಅಂತಲೇ ಕರೆಯುತ್ತಾರೆ. ಮೊದಲ ಸಿನಿಮಾ ಸೂಪರ್ ಹಿಟ್ ಆಗಿದ್ದ ಕಾರಣ ಗಾಳಿಪಟ 2 ಚಿತ್ರದ ಮೇಲೆ ನಿರೀಕ್ಷೆ ಮೂಡಿತ್ತು.

  'ಗಾಳಿಪಟ 2' ಚಿತ್ರ ನಿರೀಕ್ಷೆಯನ್ನು ತಲುಪಿದೆ. ಸಿನಿಮಾ ಮೊದಲ ದಿನವೇ ಉತ್ತಮ ಓಪನಿಂಗ್

  ಮುಗಿಲೆತ್ತರಕ್ಕೆ ಹಾರಿದ 'ಗಾಳಿಪಟ 2': ಶೋ ಸಂಖ್ಯೆಯಲ್ಲಿ ದಿಢೀರ್ ಏರಿಕೆ!ಮುಗಿಲೆತ್ತರಕ್ಕೆ ಹಾರಿದ 'ಗಾಳಿಪಟ 2': ಶೋ ಸಂಖ್ಯೆಯಲ್ಲಿ ದಿಢೀರ್ ಏರಿಕೆ!

  ಪಡೆದುಕೊಂಡಿದೆ. ಸಿನಿಮಾ ಪ್ರೇಕ್ಷಕರಿಂದಲೂ ಕೂಡ 'ಗಾಳಿಪಟ 2' ಸಿನಿಮಾ ಉತ್ತಮ ಪ್ರತಿಕ್ರಿಯೆ ಗಳಿಸಿಕೊಂಡಿದೆ. ಸಿನಿಮಾ ನೋಡಿವರೆಲ್ಲಾ ಗಣೇಶ್, ಭಟ್ರು ಜೋಡಿ ಈಸ್ ಬ್ಯಾಕ್ ಅಂತಿದ್ದಾರೆ.

  ದೇಶದಾತ್ಯಂತ ಮಾತ್ರವಲ್ಲ, ಈ ಸಿನಿಮಾ ವಿಶ್ವದಾದ್ಯಂತ ಸದ್ದು ಮಾಡುತ್ತಿದೆ. ಸಿನಿಮಾ ರಿಲೀಸ್ ಆಗಿ ಮೊದಲ ವೀಕೆಂಡ್ ಕಳೆದ ಬಳಿಕವೂ, ಸಿನಿಮಾ ನೋಡುಗರ ಸಂಖ್ಯೆ ದೊಡ್ಡ ಮಟ್ಟದಲ್ಲಿ ಕ್ಷೀಣಿಸಿಲ್ಲ. ವಿದೇಶದಲ್ಲೂ ಕೂಡ ಗಾಳಿಪಟ 2 ಸಿನಿಮಾ ಸದ್ದು ಮಾಡುತ್ತಿದೆ.

  ಗಣಿ ಈಸ್ ಬ್ಯಾಕ್; ಮೊದಲ ದಿನ 'ಗಾಳಿಪಟ'-2 ಕಲೆಕ್ಷನ್ ಎಷ್ಟು ಕೋಟಿ?ಗಣಿ ಈಸ್ ಬ್ಯಾಕ್; ಮೊದಲ ದಿನ 'ಗಾಳಿಪಟ'-2 ಕಲೆಕ್ಷನ್ ಎಷ್ಟು ಕೋಟಿ?

  ಲಿಥುವೇನಿಯಾದ ಗಾಳಿಪಟ 2!

  ಲಿಥುವೇನಿಯಾದ ಗಾಳಿಪಟ 2!

  'ಗಾಳಿಪಟ 2' ಸಿನಿಮಾ ಕರ್ನಾಟಕ ಭಾರತದಲ್ಲಿ ಮಾತ್ರವಲ್ಲ, ಪ್ಯಾನ್ ಇಂಡಿಯ ಸಿನಿಮಾ ಅಲ್ಲದೇ ಇದ್ದರು, ಈ ಸಿನಿಮಾ ವಿದೇಶಗಳಲ್ಲೂ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಲಿಥುವೇನಿಯಾದ ವಿಲ್ಲೇನಿಯಸ್‌ನಲ್ಲಿ ಮೊಟ್ಟ ಮೊದಲ ಬಾರಿಗೆ ಕನ್ನಡ ಸಿನಿಮಾ ಪ್ರದರ್ಶನ ಕಂಡಿದೆ. ಅಲ್ಲಿನ ಕನ್ನಡಿಗರೇ ಸೇರಿ 'ಗಾಳಿಪಟ 2' ಚಿತ್ರವನ್ನು ಪ್ರದರ್ಶಿಸಿ ಸಂಭ್ರಮಿಸಿದ್ದಾರೆ.

  ಗಾಳಿಪಟ ಶೋ ಹೆಚ್ಚಳ!

  ಗಾಳಿಪಟ ಶೋ ಹೆಚ್ಚಳ!

  ಸದ್ಯಕ್ಕಂತೂ ಸ್ಯಾಂಡಲ್‌ವುಡ್‌ನಲ್ಲಿ 'ಗಾಳಿಪಟ 2' ಸಿನಿಮಾದ್ದೇ ಸದ್ದು. ಸಿಂಗಲ್ ಸ್ಕ್ರೀನ್, ಮಲ್ಟಿಪ್ಲೆಕ್ಸ್ ಯಾವುದೇ ಇರಲಿ. ಎರಡೂ ಕಡೆಗಳಲ್ಲಿಯೂ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಪ್ರೇಕ್ಷಕರು ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಹರಿದು ಬರ್ತಿದ್ದಾರೆ. ಈ ಸಿನಿಮಾಗೆ ಸಿಕ್ಕಿರೋ ರೆಸ್ಪಾನ್ಸ್ ನೋಡಿ ವಿತರಕರು ಶೋಗಳ ಸಂಖ್ಯೆ ಹೆಚ್ಚಿಸಿಕೊಂಡಿದ್ದಾರೆ. ಈ ಬಗ್ಗೆ 'ಗಾಳಿಪಟ 2' ವಿತರಣೆ ಮಾಡಿರೋ ಕೆವಿಎನ್ ಸಂಸ್ಥೆಯ ಸುಪ್ರೀತ್ ಫಿಲ್ಮಿ ಬೀಟ್‌ಗೆ ಮಾಹಿತಿ ನೀಡಿದ್ದಾರೆ.

  ಕಲೆಕ್ಷನ್‌ನಲ್ಲಿ ದಾಖಲೆ!

  ಕಲೆಕ್ಷನ್‌ನಲ್ಲಿ ದಾಖಲೆ!

  ಗಾಳಿಪಟ 2, ರಾಜ್ಯದಲ್ಲಿ 700 ಶೋ, ಹೊರ ರಾಜ್ಯಗಳಲ್ಲಿ 200, ವಿದೇಶಗಳಲ್ಲಿ 250 ಶೋ ಸೇರಿ ಮೊದಲ ದಿನವೇ 1000ಕ್ಕೂ ಅಧಿಕ ಶೋಗಳಲ್ಲಿ 'ಗಾಳಿಪಟ'-2 ಪ್ರದರ್ಶನ ಕಂಡಿದೆ. ಪ್ರೀಮಿಯರ್ ಶೋಗಳ ಕಲೆಕ್ಷನ್ ಕೂಡ ಸೇರಿ ಮೊದಲ ದಿನ ಅಂದಾಜು 13 ಕೋಟಿ ರೂ. ಮಾಡಿದೆ ಎನ್ನಲಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್‌ ಸಿನಿಕರಿಯರ್‌ನಲ್ಲಿ ಇದು ಉತ್ತಮ ಓಪನಿಂಗ್ ಎನ್ನಬಹುದು.

  Recommended Video

  Gaalipata 2 | Yograj Bhat | ಜೈ 'ಗಾಳಿಪಟ 2' ಎಂದ ಭಟ್ರು *Sandalwood
  ಗಣೇಶ್ ಸರ್ಪ್ರೈಸ್!

  ಗಣೇಶ್ ಸರ್ಪ್ರೈಸ್!

  ಗಾಳಿಪಟ-2 ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಅಭಿಮಾನಿಗಳು ಸಿನಿಮಾ ನೋಡಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಹಾಗಾಗಿ ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾಮಂದಿರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಗಣೇಶ್ ಸರ್ಪ್ರೈಸ್ ಎಂಟ್ರಿಗೆ ಪ್ರೇಕ್ಷಕರು ಥ್ರಿಲ್ ಆಗದ್ದಾರೆ. ಗಣೇಶ್ ತನ್ನ ಕುಟುಂಬದ ಜೊತೆ ಚಿತ್ರಮಂದಿರಕ್ಕೆ ಭೇಟಿ ಕೊಟ್ಟಿದ್ದರು. ಪತ್ನಿ, ಮಗಳು ಮತ್ತು ಮಗನ ಜೊತೆ ಗಣೇಶ್ ಚಿತ್ರಮಂದಿರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೇಕ್ಷಕರ ಜೊತೆ ಮಾತನಾಡಿ ಫೋಟೋಗೆ ಪೋಸ್ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  English summary
  Yogaraj Bhat Directional Ganesh, Diganth, Ananthnag Starrer Gaalipata 2 Movie Success In Overseas,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X