ನೆರೆಯಿಂದ ತಲೆಕೆಳಗಾದ 'ಗಾಳಿಪಟ' ಯೋಜನೆ: ಟೆನ್ಷನ್ ನಲ್ಲಿ ಯೋಗರಾಜ್ ಭಟ್
ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಯೋಗಜಾರ್ ಭಟ್ ಸಾರಥ್ಯದಲ್ಲಿ ಗಾಳಿಪಟ-2 ಸಿನಿಮಾ ಸೆಟ್ಟೇರಿ ಅನೇಕ ದಿನಗಳೆ ಆಗಿದೆ. ಭಟ್ರು ಅಂದುಕೊಂಡ ಪ್ಲಾನ್ ಪ್ರಕಾರವೆ ಆಗಿದ್ರೆ ಈಗಾಗಲೆ ಚಿತ್ರೀಕರಣ ಭರ್ಜರಿಯಾಗಿ ನಡೆಯಬೇಕಿತ್ತು. ಆದ್ರೀಗ ಚಿತ್ರೀಕರಣ ತಡವಾದ ಕಾರಣ ಭಟ್ರು ಟೆನ್ಷನ್ ನಲ್ಲಿ ಇದ್ದಾರೆ..
ಗಾಳಿಪಟ-2 ಚಿತ್ರೀಕರಣ ಮಾಡಬೇಕೆಂದು ಕೊಂಡಿದ್ದ ಪ್ರದೇಶಗಳಲ್ಲಿ ಮಳೆ ಅವಾಂತರ ಸೃಷ್ಟಿಸಿದೆ. ಹಾಗಾಗಿ ಚಿತ್ರತಂಡ ಹಾಕಿಕೊಂಡಿದ್ದ ವೇಳಪಟ್ಟಿ ಈಗ ತಲೆಕೆಳಗಾಗಿದೆ. ಇದರಿಂದ ಮಳೆಗಾಗಿಯೆ ಕಾದುಕುಳಿತು ಚಿತ್ರೀಕರಣಕ್ಕೆ ಸಿದ್ಧವಾಗಿದ್ದ ಭಟ್ಟರು ಚಿಂತೆಯಲ್ಲಿದ್ದಾರೆ. ತಿಂಗಳುಗಳಿಂದ ಚಿತ್ರೀಕರಣಕ್ಕೆ ಲೊಕೇಶನ್ ಹುಡುಕ್ಕಿದ್ದ ಭಟ್ಟರ ಶ್ರಮ ನೀರಲ್ಲಿ ಹೋಮ ಮಾಡಿದ ಹಾಗಾಗಿದೆ. ಈಗ ಮತ್ತೆ ಹೊಸದಾಗಿ ವೇಳಪಟ್ಟಿ ತಯಾರಿಕೆಯಲ್ಲಿ ಬ್ಯುಸಿಯಾಗಿದ್ದಾರೆ ಭಟ್ರು ಮತ್ತು ತಂಡ.
ಗಾಳಿಪಟ-2 ಭಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾ. ಗಾಳಿಪಟ ಮೊದಲ ಭಾಗ ಕೂಡ ಸ್ಯಾಂಡಲ್ ವುಡ್ ನಲ್ಲಿ ಭಾರಿ ಸದ್ದು ಮಾಡಿತ್ತು. ಅದೇ ರೀತಿ ಗಾಳಿಪಟ-2 ಚಿತ್ರೀಕರಣ ಪ್ರಾರಂಭಕ್ಕೂ ಮೊದಲೆ ನಿರೀಕ್ಷೆ ಇಮ್ಮಡಿಗೊಳಿಸಿದೆ. ಮೊದಲ ಭಾಗದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ದಿಗಂತ್ ಜೋಡಿ ಅಭಿಮಾನಿಗಳನ್ನು ಮೋಡಿ ಮಾಡಿತ್ತು.

ಈಗ ಮತ್ತೆ ಗಾಳಿಪಟ-2 ಮೂಲಕ ಒಟ್ಟಿಗೆ ಬರುತ್ತಿರುವುದು ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಾಗಿದೆ. ಗಣೇಶ್ ಮತ್ತು ದಿಗಂತ್ ಜೋಡಿಗೆ ಬೇಡಿಕೆ ಹೆಚ್ಚಾದ ಕಾರಣ ಪಾರ್ಟ್-2ಗೂ ಹಿಟ್ ಜೋಡಿಯನ್ನೆ ಆಯ್ಕೆ ಮಾಡಿಕೊಂಡಿದೆ ಚಿತ್ರತಂಡ. ಈ ಜೋಡಿಯ ಜೊತೆ ಲೂಸಿಯ ಖ್ಯಾತಿಯ ಪವನ್ ಕುಮಾರ್ ಸೇರಿಕೊಂಡಿದ್ದಾರೆ. ಭಟ್ರು ಹೊಸ ಯೋಜನೆ ಸಿದ್ಧವಾಗುತ್ತಿದ್ದಂತೆ ಚಿತ್ರೀಕರಣಕ್ಕೆ ಹೊರಡಲಿದೆ ಚಿತ್ರತಂಡ.


Click it and Unblock the Notifications











