twitter
    For Quick Alerts
    ALLOW NOTIFICATIONS  
    For Daily Alerts

    ಕೊನೆಗೂ 'ಯಬಸ್' ಪದದ ಅರ್ಥ ಹೇಳಿ ಬಿಟ್ರು ಭಟ್ರು

    |

    'ಯಬಸ್'.. ಹಾಗಾದ್ರೆ ಏನು..? ಇದು ಕನ್ನಡ ಸಿನಿಮಾ ಪ್ರೇಕ್ಷಕರಲ್ಲಿ ಇದ್ದ ದೊಡ್ಡ ಪ್ರಶ್ನೆ. ಹೊಸ ಹೊಸ ಪದಗಳನ್ನು ಬಳಸಿ ಟ್ರೆಂಡ್ ಹುಟ್ಟು ಹಾಕುವ ನಿರ್ದೇಶಕ ಯೋಗರಾಜ್ ಭಟ್ ಸದ್ಯ ಶುರು ಮಾಡಿದ್ದ ಪದವೇ 'ಯಬಸ್'.

    'ಪಂಚತಂತ್ರ' ಸಿನಿಮಾದ ಹಾಡಿನಲ್ಲಿ ಬರುವ 'ಯಬಸ್' ಎನ್ನುವ ಪದ ಸಿಕ್ಕಾಪಟ್ಟೆ ಪಾಫುಲರ್ ಆಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಈ ಪದದ ಬಗ್ಗೆ ಟ್ರೋಲ್ ಗಳು ಹೆಚ್ಚಾಯಿತು. ಬಳಿಕ ಈ ಪದದ ಅರ್ಥ ಏನು? ಎನ್ನುವುದು ದೊಡ್ಡ ಪ್ರಶ್ನೆಯಾಗಿತ್ತು.

    'ಯಬಸ್' ಎನ್ನುವುದು ಕನ್ನಡ ಪದವೇ ಅಥವಾ ಬೇರೆ ಭಾಷೆಯ ಪದವೇ. 'ಯಬಸ್' ಅರ್ಥ ಯಾರಿಗೆ ಗೊತ್ತು? ಹೀಗೆ ಈ ಪದದ ಬಗ್ಗೆ ಚರ್ಚೆ ನಡೆದಿತ್ತು.

    ದಿಢೀರ್ ಅಂತ ಯೋಗರಾಜ್ ಭಟ್ರು ಐಸ್ ಕ್ರೀಮ್ ಮಾರಿದ್ದು ಯಾಕೆ.? ದಿಢೀರ್ ಅಂತ ಯೋಗರಾಜ್ ಭಟ್ರು ಐಸ್ ಕ್ರೀಮ್ ಮಾರಿದ್ದು ಯಾಕೆ.?

    ಎಲ್ಲವುಗಳ ನಂತರ ಈಗ ನಿರ್ದೇಶಕ ಯೋಗರಾಜ್ ಭಟ್ ಅವರೇ 'ಯಬಸ್' ಪದದ ಅರ್ಥವನ್ನು ಹೇಳಿದ್ದಾರೆ. ಇಂದು ಫೇಸ್ ಬುಕ್ ಲೈವ್ ಬಂದಿದ್ದ ಅವರು 'ಯಬಸ್' ಪದವನ್ನು ವಿವರಿಸಿದ್ದಾರೆ. ಮುಂದೆ ಓದಿ...

    ಉತ್ತರ ಕರ್ನಾಟಕದ ಪದ

    ಉತ್ತರ ಕರ್ನಾಟಕದ ಪದ

    ''ಪಂಚತಂತ್ರ' ಸಿನಿಮಾದ ಹಾಡು ಬರೆಯುವಾಗ, ಹಾಡುವಾಗ ಈ ಪದ ಈ ಮಟ್ಟಕ್ಕೆ ಹಿಟ್ ಆಗುತ್ತದೆ ಅಂತ ತಿಳಿದಿರಲಿಲ್ಲ. ಈ ಹಾಡನ್ನು, ಈ ಪದವನ್ನು ಕೇಳಿದ ಪ್ರತಿ ಕಿವಿಗೆ ಧನ್ಯವಾದ. 'ಯಬಸ್' ಇದು ಉತ್ತರ ಕರ್ನಾಟಕದ ಪದವಾಗಿದೆ. ಅಲ್ಲಿಯರಿಗೆ ಇದರ ಅರ್ಥ ಗೊತಿರಬಹುದು 'ಯಬಸ್' ಎಂದರೆ 'ಎಬ್ಬಿಸ್ಸು', 'ನುಗ್ಗು' ಎನ್ನುವ ಅರ್ಥ ಬರುತ್ತದೆ.'' - ಯೋಗರಾಜ್ ಭಟ್, ನಿರ್ದೇಶಕ

    ಶಾಲೆಯಲ್ಲಿ ಬಳಸುತ್ತಿದ್ದ ಪದ

    ಶಾಲೆಯಲ್ಲಿ ಬಳಸುತ್ತಿದ್ದ ಪದ

    'ಯಬಸ್' ಎನ್ನುವುದು ಕಿಕ್ ಸ್ಟಾರ್ಟ್, ಲೆಟ್ಸ್ ಡು ಸಮ್ ಥಿಂಕ್, ಎದ್ದೇಳಿಸು, ಸುಮ್ಮನೆ ಕೂರುವುದು ಬೇಡ...ಏನಾದರೂ ಮಾಡೋಣ ಎನ್ನುವ ಅರ್ಥ ಇರುವ ಪದ. ನನ್ನ ಶಾಲೆ ದಿನಗಳಲ್ಲಿ ಕ್ರಿಕೆಟ್, ವಾಲಿಬಾಲ್ ಆಡುವಾಗ ಈ ಪದ ಬಳಸುತ್ತಿದ್ದೆವು. ಆಟದಲ್ಲಿ ಜೋಶ್ ತುಂಬಲು ಈ ಪದ ಹೇಳುತ್ತಿದ್ದೇವು. ಆ ಪದದ ಮೂಲ ಯಾರು, ಆ ಪದ ಹೇಗೆ ಹುಟ್ಟಿದೆ ಎನ್ನುವುದು ತಿಳಿದಿಲ್ಲ.'' - ಯೋಗರಾಜ್ ಭಟ್, ನಿರ್ದೇಶಕ

    ಕೆ ಮಂಜು ಸ್ಟೈಲ್

    ಕೆ ಮಂಜು ಸ್ಟೈಲ್

    ನಿರ್ಮಾಪಕ ಕೆ ಮಂಜು ಅವರು ನನಗೆ ಒಳ್ಳೆಯ ಗೆಳೆಯರು. ಅವರು ಮಾತನಾಡುವಾಗ ಅವರದ್ದೇ ಸ್ಟೈಲ್ ಇರುತ್ತದೆ. ಅವರನ್ನು ಮೊನ್ನೆ ಕೂಡ ಮೀಟ್ ಆಗಿದ್ದೆ. ಅವರು ಮೂಗಿನಲ್ಲೇ ಮಾತನಾಡುತ್ತಾರೆ. 'ಯಸ್ ಬಾಸ್' ಎನ್ನುವುದಕ್ಕೆ 'ಯಬಸ್'...'ಯಬಸ್' ಎನ್ನುತ್ತಿದ್ದರು. ಅವರ ಪ್ರಕಾರ 'ಯಬಸ್' ಎಂದರೆ, 'ಯಸ್ ಬಾಸ್'.

    ಧಾರವಾಡ ಪದಗಳ ಮಾಂತ್ರಿಕ ಶಕ್ತಿ

    ಶೂಟಿಂಗ್ ನಲ್ಲಿ ಕೂಡ 'ಯಬಸ್' ಅಂದರೆ ಎಲ್ಲರೂ ಕೂಗುತ್ತಿದ್ದರು. ಈ ಪದವನ್ನು ಯುದ್ಧಕ್ಕೆ ಹೊರಟರು ಬಳಸಬಹುದೆನೋ. ಧಾರವಾಡ ಪದಗಳ ಮಾಂತ್ರಿಕ ಶಕ್ತಿ ಇದು. ಇಂತಹ ಪದಗಳು ಸ್ವಲ್ಪ ಸೊಟ್ಟಗೆ ಇದ್ದರೂ, ಅವು ಎಲ್ಲರಲ್ಲಿ ಹುರುಪು ತುಂಬುತ್ತದೆ. ಇಷ್ಟೆಲ್ಲ ಅರ್ಥ ಇರುವ ಈ ಪದ ಜನರಿಗೂ ಮಜಾ ನೀಡಿದೆ ಎನ್ನುವುದು ತಮ್ಮ ತಂಡಕ್ಕೆ ಸಾರ್ಥಕ ಅನಿಸಿದೆ.

    English summary
    Kannada Yogaraj Bhat explains 'Panchatantra' movie 'Yebass' word meaning.
    Thursday, January 17, 2019, 17:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X