»   » ನಾದಬ್ರಹ್ಮನ ನಾದದಿಂದ ಭಟ್ಟರ ಆಡಿಯೋ ಕಂಪನಿ ಶುರು

ನಾದಬ್ರಹ್ಮನ ನಾದದಿಂದ ಭಟ್ಟರ ಆಡಿಯೋ ಕಂಪನಿ ಶುರು

Posted By:
Subscribe to Filmibeat Kannada

ನಿರ್ದೇಶನದ ಜೊತೆಗೆ ಅಭಿನಯವನ್ನೂ ಮಾಡಿಕೊಂಡು ಬಂದ ಭಟ್ಟರು ನಂತರ ಯೋಗರಾಜ್ ಮೂವೀಸ್ ಹೆಸರಿನಲ್ಲಿ ತಮ್ಮದೇ ಸ್ವಂತ ನಿರ್ಮಾಣದ ಸಂಸ್ಥೆಯನ್ನ ಹುಟ್ಟುಹಾಕಿದ್ರು. ಸದ್ಯ ಭಟ್ಟರು ಆಡಿಯೋ ಕಂಪನಿ ಆರಂಭ ಮಾಡಿರುವ ವಿಚಾರ ಎಲ್ಲರಿಗೂ ತಿಳಿದಿದೆ.

ತಮ್ಮ ಆಡಿಯೋ ಕಂಪನಿಗೆ 'ಪಂಚರಂಗಿ' ಎಂದು ಹೆಸರಿಟ್ಟಿರುವ ಭಟ್ಟರು 'ಕನ್ನಡಕ್ಕಾಗಿ ಒಂದನ್ನು ಒತ್ತಿ' ಸಿನಿಮಾ ಹಾಡುಗಳನ್ನ ತಮ್ಮದೇ ಆಡಿಯೋ ಸಂಸ್ಥೆಯಲ್ಲಿ ಬಿಡುಗಡೆ ಮಾಡಿದ್ದಾರೆ. ಭಟ್ಟರ ಆಡಿಯೋ ಕಂಪನಿಯನ್ನ ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ಉದ್ಗಾಟನೆ ಮಾಡಿಕೊಟ್ಟಿದ್ದಾರೆ. ಅವರಿಂದಲೇ ಮ್ಯೂಸಿಂಕ್ ಕಂಪನಿಯ ಲೋಗೋ ಲಾಂಚ್ ಮಾಡಿಸಲಾಗಿದೆ.

Yogaraj Bhat has launched his own audio company name of Pancharangi.

ಅಧಿಕೃತ ಘೋಷಣೆ ಹೊರಡಿಸಿದ ಯೋಗರಾಜ್ ಭಟ್

ಆಡಿಯೋ ಕಂಪನಿ ಉದ್ಗಾಟನೆ ಮಾಡಿದ ಗುರುಗಳಿಗೆ ಭಟ್ಟರು ಹಾರ್ಮೋನಿಯಂ ಉಡುಗೊರೆಯಾಗಿ ನೀಡಿದ್ದಾರೆ. ತಮ್ಮ ಸಿನಿಮಾ ಹೆಸರಿನಲ್ಲೇ ಆಡಿಯೋ ಕಂಪನಿ ಆರಂಭ ಮಾಡಿರುವುದು ಮತ್ತಷ್ಟು ವಿಶೇಷವಾಗಿದೆ.

Yogaraj Bhat has launched his own audio company name of Pancharangi.

ತಾವೇ ನಿರ್ದೇಶನ ಮಾಡಿ ನಿರ್ಮಾಣ ಮಾಡುತ್ತಿರುವ ಪಂಚತಂತ್ರ ಚಿತ್ರದ ಹಾಡುಗಳನ್ನೂ ಪಂಚರಂಗಿ ಆಡಿಯೋ ಕಂಪನಿಯಲ್ಲಿ ರಿಲೀಸ್ ಆಗಲಿದೆ. ಮುಂದಿನ ದಿನಗಳಲ್ಲಿ ಕನ್ನಡದ ಮತ್ತಷ್ಟು ಚಿತ್ರದ ಹಾಡುಗಳ ಹಕ್ಕನ್ನು ಪಂಚರಂಗಿ ಆಡಿಯೋ ಕಂಪನಿ ಖರೀದಿ ಮಾಡಲಿದೆ.

ನಿರ್ದೇಶನ, ನಿರ್ಮಾಣದ ನಂತರ ಯೋಗರಾಜ್ ಭಟ್ ಹೊಸ ಬಿಜಿನೆಸ್

English summary
Kannada director Yogaraj Bhat has launched his own audio company name of Pancharangi. Music Director Hamsalekha has launch Pancharangi Audio Company logo

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X