ದರೋಡೆಕೋರನ ಪಟ್ಟ ಪಡೆದುಕೊಂಡ ನಿರ್ದೇಶಕ 'ಯೋಗರಾಜ್ ಭಟ್'
ನಿರ್ದೇಶಕರು ಕಲಾವಿದರಾಗಿ ಬದಲಾಗಿರುವುದು ಹೊಸ ವಿಚಾರವೇನಲ್ಲ. ದುನಿಯಾ ಸೂರಿ ಹಾಗೂ ಯೋಗರಾಜ್ ಭಟ್ಟರ ಸಿನಿಮಾಗಳಲ್ಲಿ ತೆರೆ ಹಿಂದೆ ಕೆಲಸ ಮಾಡುವ ತಂತ್ರಜ್ಙರೆಲ್ಲರೂ ಕಲಾವಿದರಾಗಿ ಬಣ್ಣ ಹಚ್ಚುವ ಅವಕಾಶವನ್ನ ಪಡೆದುಕೊಂಡಿದ್ದಾರೆ.
ತೆರೆ ಹಿಂದಿರುವವರನ್ನ ತೆರೆ ಮೇಲೆ ತರುತ್ತಿದ್ದ ನಿರ್ದೇಶಕ ಯೋಗರಾಜ್ ಭಟ್ ಈಗ ಕಲಾವಿದರಾಗಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ 'ದ್ಯಾವ್ರೇ' ಚಿತ್ರದಲ್ಲಿ ಮುಖ್ಯ ಪಾತ್ರವನ್ನ ನಿರ್ವಹಿಸಿದ್ದ ನಿರ್ದೇಶಕ ಯೋಗರಾಜ್ ಭಟ್ ಈಗ ತಮ್ಮ ಕಾಲ್ ಶೀಟ್ ಅನ್ನು ಮತ್ತೊಂದು ಸಿನಿಮಾಗೆ ನೀಡಿದ್ದಾರೆ.
ಪೋಲೀಸ್ ಪಾತ್ರದಲ್ಲಿ ಮಿಂಚಿದ್ದ ಭಟ್ಟರು ಈ ಭಾರಿ ದರೋಡೆಕೋರನಾಗಿ ಅಭಿಮಾನಿಗಳ ಮುಂದೆ ಬರಲಿದ್ದಾರಂತೆ. ಹಾಗಾದರೆ ಯೋಗರಾಜ್ ಭಟ್ ಅಭಿನಯ ಮಾಡುತ್ತಿರುವ ಸಿನಿಮಾ ಯಾವುದೆ? ಹೇಗಿರಲಿದೆ ಭಟ್ಟರ ಅಭಿನಯ? ಯೋಗರಾಜರಿಗೆ ಆಕ್ಷನ್ ಕಟ್ ಹೇಳುವವರು ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ

ದರೋಡೆಕೋರ ಪಾತ್ರದಲ್ಲಿ ಯೋಗರಾಜ್ ಭಟ್
ನಟ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಸಿನಿಮಾದಲ್ಲಿ ಅಭಿನಯಿಸಲು ಸಿದ್ದರಾಗಿದ್ದಾರೆ. ವಿಭಿನ್ನ ಹಾಗೂ ವಿಶೇಷ ಎನ್ನಿಸುವ ಚಿತ್ರದಲ್ಲಿ ಆಕ್ಟ್ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದು ಭಟ್ಟರು ದರೋಡೆಕೋರನಾಗಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

ಬೆಲ್ ಬಾಟಂ ಟೀಂ ಸೇರಿದ ಭಟ್ಟರು
ಯೋಗರಾಜ್ ಭಟ್ ಜಯತೀರ್ಥ ನಿರ್ದೇಶನದ 'ಬೆಲ್ ಬಾಟಂ' ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. 80 ರ ದಶಕದಲ್ಲಿ ನಡೆಯುವ ಕಥೆಯಲ್ಲಿ ಭಟ್ಟರು ಕೂಡ ಒಂದು ಪಾತ್ರವಾಗಲಿದ್ದಾರೆ.

ಜಯತೀರ್ಥ ನಿರ್ದೇಶನದ ಸಿನಿಮಾ
ಬೆಲ್ ಬಾಟಂ ಚಿತ್ರವನ್ನ ಜಯತೀರ್ಥ ನಿರ್ದೇಶನ ಮಾಡುತ್ತಿದ್ದು ಸಿನಿಮಾದಲ್ಲಿ ನಾಲ್ಕು ನಿರ್ದೇಶಕರು ಅಭಿನಯ ಮಾಡುತ್ತಿದ್ದಾರೆ. ಯೋಗರಾಜ್ ಭಟ್, ಶಿವಮಣಿ, ಟಿ ಕೆ ದಯಾನಂದ್ ಹಾಗೂ ರಿಷಬ್ ಶೆಟ್ಟಿ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮುಕ್ತಾಯ ಹಂತದಲ್ಲಿ ಸಿನಿಮಾ
ಬೆಲ್ ಬಾಟಂ ಸಿನಿಮಾದ ಚಿತ್ರೀಕರಣ ಶೇಕಡಾ 80% ರಷ್ಟು ಮುಕ್ತಾಯವಾಗಿದೆ. ಯೋಗರಾಜ್ ಭಟ್ ಅವರ ಚಿತ್ರೀಕರಣ ಹಾಗೂ ಹಾಡುಗಳ ಶೂಟಿಂಗ್ ಬಾಕಿ ಉಳಿಸಿಕೊಂಡಿದ್ದು ಆದಷ್ಟು ಬೇಗ ಸಿನಿಮಾ ಪ್ರೇಕ್ಷಕರ ಎದುರು ಬರಲಿದೆ.


Click it and Unblock the Notifications











