ಮುಗಿಯದ 'ದನಕಾಯೋರ' ರಗಳೆ: ಕೋರ್ಟ್ ಮೆಟ್ಟಿಲೇರಿದ ಭಟ್ಟರು

By Bharath Kumar

ನಿರ್ದೇಶಕ ಯೋಗರಾಜ್ ಭಟ್ ಮತ್ತು 'ದನಕಾಯೋನು' ಚಿತ್ರದ ನಿರ್ಮಾಪಕ ಕನಕಪುರ ಶ್ರೀನಿವಾಸ್ ನಡುವಿನ ಸಂಭಾವನೆಯ ಕಿರಿಕ್ ಇನ್ನು ಮುಗಿದಿಲ್ಲ.

'ಭರ್ಜರಿ' ಚಿತ್ರದ ರಿಲೀಸ್ ವೇಳೆ ಶ್ರೀನಿವಾಸ್ ಅವರು ನೀಡಿದ್ದ ಚೆಕ್ ಗಳು ಬೌನ್ಸ್ ಆಗಿರುವ ಕಾರಣ ಭಟ್ಟರು ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಈ ಹಿಂದೆ ಯೋಗರಾಜ್ ಮತ್ತು ಶ್ರೀನಿವಾಸ್ ಅವರನ್ನ ಕರೆಯಿಸಿ ವಾಣಿಜ್ಯ ಮಂಡಳಿಯಲ್ಲಿ ಮಾತುಕತೆ ಮೂಲಕ ಸಂಭಾವನೆ ಕುರಿತು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದ್ರೆ, ನಿರ್ಮಾಪಕರ ಸಂಭಾವನೆ ನೀಡದ ಕಾರಣ ಅಂತಿಮವಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಘಟನೆಯ ಪೂರ್ತಿ ವಿವರ ಮುಂದೆ ಓದಿ....

'ದನ ಕಾಯೋನು' ಚಿತ್ರದ ಕಿರಿಕ್

'ದನ ಕಾಯೋನು' ಚಿತ್ರದ ಕಿರಿಕ್

ದುನಿಯಾ ವಿಜಯ್ ಅಭಿನಯಿಸಿ, ಯೋಗರಾಜ್ ಭಟ್ ನಿರ್ದೇಶನ ಮಾಡಿದ್ದ 'ದನ ಕಾಯೋನು' ಚಿತ್ರಕ್ಕಾಗಿ ತಮಗೆ ಬರಬೇಕಿದ್ದ ಸಂಭಾವನೆಯನ್ನ ನಿರ್ಮಾಪಕ ಕನಕಪುರ ಶ್ರೀನಿವಾಸ್ ಇನ್ನೂ ನೀಡದ ಕಾರಣ ಯೋಗರಾಜ್ ಭಟ್ ಅವರು ಕೋರ್ಟ್ ಮೆಟ್ಟಿಲೇರಿದ್ದಾರೆ.

23 ಲಕ್ಷ ಹಣ ಕೊಡಬೇಕಂತೆ

23 ಲಕ್ಷ ಹಣ ಕೊಡಬೇಕಂತೆ

ನಿರ್ಮಾಪಕರಿಂದ ತಮಗೆ ಬರಬೇಕಾಗಿರುವ 23 ಲಕ್ಷ ಹಣವನ್ನ ಕೊಡಿಸಿ ಎಂದು ಯೋಗರಾಜ್ ಭಟ್ ಅವರು ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ.

ಚೆಕ್ ಬೌನ್ಸ್ ಆಗಿದೆ

ಚೆಕ್ ಬೌನ್ಸ್ ಆಗಿದೆ

ಈ ಹಿಂದೆ 'ಭರ್ಜರಿ' ಚಿತ್ರದ ವೇಳೆ ಶ್ರೀನಿವಾಸ ಅವರು ಭಟ್ ಅವರಿಗೆ ಮೂರು ಚೆಕ್ ನೀಡಿದ್ದರು. ಆದ್ರೆ, ಚೆಕ್ ಬೌನ್ಸ್ ಆಗಿರುವ ಹಿನ್ನೆಲೆ ಭಟ್ಟರು ನ್ಯಾಯಾಲಯದ ಮೊರೆ ಹೋಗಿದ್ದಾರೆ.

ವಿಚಾರಣೆ ನಡೆಯಲಿದೆ

ವಿಚಾರಣೆ ನಡೆಯಲಿದೆ

ಯೋಗರಾಜ್ ಭಟ್ ಅವರು ದಾಖಲಿಸಿರುವ ದೂರಿನ ವಿಚಾರಣೆ ನವೆಂಬರ್ 22 ರಂದು ಮ್ಯಾಜಿಸ್ಟ್ರಿಟ್ ಕೋರ್ಟ್ ನಲ್ಲಿ ನಡೆಯಲಿದೆ. ವಿಚಾರಣೆ ಬಳಿಕ ಕೋರ್ಟ್ ಅದೇ ದಿನ ತೀರ್ಪು ನೀಡುವ ಸಾಧ್ಯತೆ ಇದೆ.

More from Filmibeat

English summary
Director Yogaraj Bhat moves to court against 'Dana Kayonu' Producer Kanakapura Srinivas over Remuneration settlement for directing 'Dana Kayonu'. ದನಕಾಯೋನು ಚಿತ್ರದ ಸಂಭಾವನೆ ಕಿರಿಕ್ ಗೆ ಸಂಬಂಧಪಟ್ಟಂತೆ ನಿರ್ದೇಶಕ ಯೋಗರಾಜ್ ಭಟ್ ಅವರು ಕೋರ್ಟ್ ಮೆಟ್ಟಿಲೇರಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X