twitter
    For Quick Alerts
    ALLOW NOTIFICATIONS  
    For Daily Alerts

    'ಆಂಧ್ರ vs ತೆಲಂಗಾಣ' ತೆಲುಗು ಚಿತ್ರಕ್ಕೆ ಭಟ್ರು ನಿರ್ದೇಶನ

    |

    ಸ್ಯಾಂಡಲ್ ವುಡ್ ನಲ್ಲಿ ಸದ್ಯ ಯೋಗರಾಜ್ ಭಟ್ಟರ ಪಂಚತಂತ್ರ ಚಿತ್ರದ್ದೇ ಸದ್ದು. ನಿನ್ನೆ (ಮಾರ್ಚ್-29) ರಾಜ್ಯದಾದ್ಯಂತ ರಿಲೀಸ್ ಆಗಿದ್ದ ಪಂಚತಂತ್ರ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಬೇಸಿಗೆಯಲ್ಲಿ ಹೂ ಬಿಟ್ಟ ಶೃಂಗಾರದ ಹೊಂಗೆ ಮರ ನೋಡಿ ಚಿತ್ರಪ್ರಿಯರು ಫುಲ್ ಫಿದಾ ಆಗಿದ್ದಾರೆ.

    ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿರುವ ಖುಷಿಯ ಜೊತೆಗೆ ಭಟ್ರು ಮತ್ತೊಂದು ಬ್ರೇಕಿಂಗ್ ನ್ಯೂಸ್ ನೀಡಿದ್ದಾರೆ. ಹೌದು, ಪಂಚತಂತ್ರ ಸಿನಿಮಾ ತೆಲುಗು ಮತ್ತು ಬಾಲಿವುಡ್ ನಲ್ಲಿ ರೀಮೇಕ್ ಆಗುತ್ತಿದೆ ಎನ್ನುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಅಷ್ಟೆಯಲ್ಲಾ ತೆಲುಗು ಚಿತ್ರದ ಟೈಟಲ್ ಏನು ಮತ್ತು ನಿರ್ದೇಶಕ ಯಾರು ಎಂಬ ಅಚ್ಚರಿ ವಿಷ್ಯ ಹೇಳಿದ್ದಾರೆ.

    ಪಂಚತಂತ್ರ ಮೂಲಕ ಆಮೆ ಮತ್ತು ಮೊಲದ ಕಥೆಯನ್ನು ಮುದುಕ ಮತ್ತು ಯುವಕರಿಗೆ ಹೋಲಿಸಿ ವಿಭಿನ್ನ ಶೈಲಿಯಲ್ಲಿ ಹೇಳಿದ್ದ ಭಟ್ರು ಈಗ ಅದೇ ಕಥೆಯನ್ನು ತೆಲುಗು ಮತ್ತು ಹಿಂದಿ ಪ್ರೇಕ್ಷಕರ ಮುಂದಿಡುವ ಪ್ರಯತ್ನ ಮಾಡುತ್ತಿದ್ದಾರೆ. ಮುಂದೆ ಓದಿ...

    ಭಟ್ಟರ 'ಪಂಚತಂತ್ರ'ಕ್ಕೆ ವಿಮರ್ಶಕರು ಮನಸೋತ್ರಾ? ಭಟ್ಟರ 'ಪಂಚತಂತ್ರ'ಕ್ಕೆ ವಿಮರ್ಶಕರು ಮನಸೋತ್ರಾ?

    ಬಾಲಿವುಡ್-ಟಾಲಿವುಡ್ ನಲ್ಲಿ ಪಂಚತಂತ್ರ

    ಬಾಲಿವುಡ್-ಟಾಲಿವುಡ್ ನಲ್ಲಿ ಪಂಚತಂತ್ರ

    ಸ್ಯಾಂಡಲ್ ವುಡ್ನಲ್ಲಿ ಸದ್ದು ಮಾಡುತ್ತಿರುವ ಪಂಚತಂತ್ರ ಬಾಲಿವುಡ್ ಮತ್ತು ಟಾಲಿವುಡ್ ಪ್ರೇಕ್ಷಕರನ್ನು ರಂಜಿಸಲು ತಯಾರಾಗುತ್ತಿದೆ. ಯುವಕರು ಮತ್ತು ಮುದುಕರ ಪ್ರತಿನಿಧಿಯಾಗಿ ಕಾಣಿಸಿಕೊಂಡಿರುವ ವಿಹಾನ್ ಗೌಡ ಮತ್ತು ರಂಗಾಯಣ ರಘು ಪಾತ್ರಗಳು ತೆಲುಗು ಮತ್ತು ಬಾಲಿವುಡ್ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದೆ.

    'ಅಂಧ್ರ vs ತೆಲಂಗಾಣ' ಟೈಟಲ್ ಫಿಕ್ಸ್

    'ಅಂಧ್ರ vs ತೆಲಂಗಾಣ' ಟೈಟಲ್ ಫಿಕ್ಸ್

    ಪಂಚತಂತ್ರ ತೆಲುಗು ಮತ್ತು ಬಾಲಿವುಡ್ ಗೆ ರೀಮೇಕ್ ಆಗುತ್ತಿದೆ ಅನ್ನುವುದು ಒಂದು ವಿಶೇಷ ಆದ್ರೆ, ಇನ್ನೊಂದು ತೆಲುಗು ರೀಮೇಕ್ ನ ಟೈಟಲ್ ಗಮನ ಸೆಳೆಯುತ್ತಿದೆ. ಅಂಧ್ರ vs ತೆಲಂಗಾಣ ಅಂತ ಟೈಟಲ್ ಇಡುವ ಮೂಲಕ ಕುತೂಹಲ ಹೆಚ್ಚಿಸಿದ್ದಾರೆ. ಚಿತ್ರದಲ್ಲಿ ಯುವಕರು ಮತ್ತು ಮುದುಕರ ನಡುವಿನ ಜಿದ್ದಾಜಿದ್ದಿ ಇದೆ. ತೆಲುಗಿನಲ್ಲಿ ಈ ಎರಡು ಜನರೇಶನ್ ತೆಲಂಗಾಣ ಮತ್ತು ಆಂಧ್ರ ಆಗಿ ಎರಡು ಗುಂಪುಗಳಾಗಿ ಕಾಣಿಸಿಕೊಳ್ಳಲಿದ್ದಾರಂತೆ.

    'ಪಂಚತಂತ್ರ' ಚಿತ್ರದಲ್ಲಿ ಕಾಣಿಸಿಕೊಂಡ ದಿಗಂತ್ 'ಪಂಚತಂತ್ರ' ಚಿತ್ರದಲ್ಲಿ ಕಾಣಿಸಿಕೊಂಡ ದಿಗಂತ್

    ತೆಲುಗು-ಹಿಂದಿಯಲ್ಲಿ ಭಟ್ರು ನಿರ್ದೇಶನ

    ತೆಲುಗು-ಹಿಂದಿಯಲ್ಲಿ ಭಟ್ರು ನಿರ್ದೇಶನ

    ಎರಡೂ ಭಾಷೆಯಲ್ಲೂ ರೀಮೇಕ್ ಆಗುತ್ತಿರುವ ಪಂಚತಂತ್ರ ಚಿತ್ರಕ್ಕೆ ಯೋಗರಾಜ್ ಭಟ್ ಅವರೇ ನಿರ್ದೇಶನ ಮಾಡುತ್ತಿರುವುದು ವಿಶೇಷ. ಈ ಮೂಲಕ ಭಟ್ರು ಮೊದಲ ಬಾರಿಗೆ ತೆಲುಗು ಮತ್ತು ಬಾಲಿವುಡ್ ಗೂ ಎಂಟ್ರಿ ಕೊಡುತ್ತಿದ್ದಾರೆ. ಕನ್ನಡ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದಂತೆ ಭಟ್ರು ಈಗ ಬಾಲಿವುಡ್ ಮತ್ತು ಟಾಲಿವುಡ್ ನತ್ತ ಹೊರಡಲು ಮುಖ ಮಾಡಿದ್ದಾರೆ.

    Panchatantra Review : ಅತ್ಲಾಗೆ ಹುಡುಗರು.. ಇತ್ಲಾಗೆ ಮುದುಕರು.. Panchatantra Review : ಅತ್ಲಾಗೆ ಹುಡುಗರು.. ಇತ್ಲಾಗೆ ಮುದುಕರು..

    ಚಿತ್ರದಲ್ಲಿರಲಿದೆ ದೊಡ್ಡ ತಾರಬಳಗ

    ಚಿತ್ರದಲ್ಲಿರಲಿದೆ ದೊಡ್ಡ ತಾರಬಳಗ

    ಎರಡು ಭಾಷೆಯಲ್ಲಿ ತಯಾರಾಗುತ್ತಿರುವ ಪಂಚತಂತ್ರ ಚಿತ್ರದಲ್ಲಿ ದೊಡ್ಡ ತಾರಬಳಗ ಇರಲಿದ್ಯಂತೆ. ಯಾರೆಲ್ಲ ಕಲಾವಿದರು ಇರ್ತಾರೆ ಎನ್ನುವುದನ್ನ ಮಾತ್ರ ಭಟ್ರು ಬಹಿರಂಗ ಪಡಿಸಲಿಲ್ಲ. ಜೊತೆಗೆ ದೊಡ್ಡ ಮೊತ್ತಕ್ಕೆ ಸೇಲ್ ಆಗಿರುವ ರೀಮೇಕ್ ರೈಟ್ಸ್ ಬಗ್ಗೆಯೂ ಗುಟ್ಟು ಬಿಟ್ಟುಕೊಡದ ಭಟ್ರು ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮುಂದಿನ ತಿಂಗಳು ಮೊದಲ ವಾರದಲ್ಲಿ ಬಹಿರಂಗಪಡಿಸುತ್ತಾರಂತೆ.

    English summary
    Yogaraj Bhat directed Panchatantra movie remake in Bollywood and Tollywood. Panchatantra released yesterday in kannada.
    Saturday, March 30, 2019, 18:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X