ಯೋಗರಾಜ್ ಭಟ್ ಮುಂದಿನ ಚಿತ್ರದ ಟೈಟಲ್ ಫಿಕ್ಸ್

By Naveen

ನಿರ್ದೇಶಕ ಯೋಗರಾಜ್ ಭಟ್ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈಗಾಗಲೇ ಆ ಸಿನಿಮಾಗೆ ನಾಯಕ ನಾಯಕಿಯ ಆಯ್ಕೆ ಕೂಡ ಆಗಿದೆ. ಇದೀಗ ತಮ್ಮ ಹೊಸ ಸಿನಿಮಾಗೆ ಯೋಗರಾಜ್ ಭಟ್ ಒಂದು ಹೆಸರು ಇಟ್ಟಿದ್ದಾರೆ.

ಭಟ್ಟರ ಸಿನಿಮಾಗಳ ಹೆಸರುಗಳು ಸಖತ್ ಮಜವಾಗಿ ಇರುತ್ತದೆ. ತಮ್ಮ ಕಥೆಗೆ ತಕ್ಕಂತೆ ವಿಶೇಷವಾದ ಹೆಸರುಗಳನ್ನು ಅವರು ಸಿನಿಮಾಗೆ ಇಡುತ್ತಾರೆ. 'ಗಾಳಿಪಟ', 'ಪಂಚರಂಗಿ', 'ದನಕಾಯೋನು', 'ಮುಗುಳುನಗೆ' ಹೀಗೆ ಸರಳ ಮತ್ತು ಸುಂದರ ಹೆಸರುಗಳನ್ನು ಹುಡುಕುವುದಕ್ಕೆ ಭಟ್ಟರು ಎತ್ತಿದ ಕೈ. ಅದೇ ರೀತಿ ತಮ್ಮ ಹೊಸ ಚಿತ್ರಕ್ಕೆ ಭಟ್ಟರು 'ಪಂಚತಂತ್ರ' ಎಂಬ ಹೆಸರು ಇಟ್ಟಿದ್ದಾರೆ.

Yogaraj Bhat's next movie titled as Panchatantra

'ಪಂಚತಂತ್ರ' ಸಿನಿಮಾ ಪಕ್ಕಾ ಭಟ್ಟರ ಸ್ಟೈಲ್ ನಲ್ಲಿ ಇರಲಿದೆದ್ದು, ಯೂತ್ ಮತ್ತು ಫ್ಯಾಮಿಲಿಗೆ ಸಿನಿಮಾ ತುಂಬ ಇಷ್ಟ ಆಗಲಿದೆಯಂತೆ. 1/4 ಕೆ.ಜಿ ಪ್ರೀತಿ' ಸಿನಿಮಾದಲ್ಲಿ ನಟಿಸಿದ್ದ ವಿಹಾನ್ ಗೌಡ ಈ ಚಿತ್ರದ ನಾಯಕನಾಗಿದ್ದಾರೆ. ಅಕ್ಷರ ಗೌಡ ಮತ್ತು ಸೋನಾಲ್ ಚಿತ್ರದ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಅಕ್ಷರ ಗೌಡಗೆ ಕನ್ನಡದಲ್ಲಿ ಇದು ಮೊದಲ ಸಿನಿಮಾವಾಗಿದೆ. ಇನ್ನು 'ಪಂಚತಂತ್ರ' ಚಿತ್ರದ ಚಿತ್ರೀಕರಣ ಇದೇ ತಿಂಗಳ 24ರಿಂದ ಶುರು ಆಗಲಿದ್ದು, ಯೋಗರಾಜ್ ಮೂವಿಸ್ ನಲ್ಲಿ ಚಿತ್ರ ನಿರ್ಮಾಣ ಆಗಲಿದೆ.

More from Filmibeat

English summary
Kannada director Yogaraj Bhat's next movie titled as Panchatantra. Actress Akshara Gowda and actor Vihan Gowda selected to play lead role in this movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X