For Quick Alerts
  ALLOW NOTIFICATIONS  
  For Daily Alerts

  ಶಿವರಾಜ್ ಕುಮಾರ್, ಪ್ರಭುದೇವ 'ಕುಲದಲ್ಲಿ ಕೀಳ್ಯಾವುದೋ' ಶೂಟಿಂಗ್ ಶುರು!

  |

  ನಟ ಶಿವರಾಜ್ ಕುಮರ್ ಮತ್ತು ಪ್ರಭುದೇವ ಒಟ್ಟಾಗಿ ಸಿನಿಮಾ ಮಾಡುತ್ತಾ ಇದ್ದಾರೆ ಎನ್ನುವ ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಾ ಇದೆ. ಈ ಸುದ್ದಿಯನ್ನು ಸಿನಿಮಾ ನಿರ್ದೇಶಕ ಯೋಗರಾಜ್ ಭಟ್ ಖಚಿತ ಪಡಿಸಿದರು. ಸಮಾಜಿಕ ಜಾಕತಣದಲ್ಲಿ ಸಿನಿಮಾ ಮಾಡುವ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿದ್ದರು. ಬಳಿಕ ಚಿತ್ರ ಮುಹೂರ್ತ ಕೂಡ ನೆರವೇರಿದೆ.

  ನಟ ಶಿವರಾಜ್ ಕುಮಾರ್ ಮತ್ತು ಯೋಗರಾಜ್ ಭಟ್ ಕಾಂಬಿನೇಷನ್‌ನಲ್ಲಿ ಸಿನಿಮಾ ಬರುತ್ತೆ ಎನ್ನುವ ಸುದ್ದಿ ಬಂದಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಸಿನಿಮಾ ಕಥೆ ಹಳೆ ಕಾಲದ ಅಂಶಗಳನ್ನು ಹೊಂದಿದೆ ಎನ್ನುವುದು ಕೂಡ ಹೆಚ್ಚಿನ ಕುತೂಹಲಕ್ಕೆ ಕಾರಣ ಆಗಿದೆ.

  ಶಿರಸಿ ಸಹಸ್ರಲಿಂಗ ದೇವಸ್ಥಾನದಲ್ಲಿ ಪತ್ನಿ ಜೊತೆಗೆ ಶಿವರಾಜ್ ಕುಮಾರ್!ಶಿರಸಿ ಸಹಸ್ರಲಿಂಗ ದೇವಸ್ಥಾನದಲ್ಲಿ ಪತ್ನಿ ಜೊತೆಗೆ ಶಿವರಾಜ್ ಕುಮಾರ್!

  ಈ ಚಿತ್ರಕ್ಕೆ ನಾಯಕಿಯರು ಯಾರಾಗಬಹುದು ಎನ್ನುವ ಪ್ರಶ್ನೆ ಇತ್ತು. ಆದರೆ ಈಗಾಗಲೆ ನಾಯಕ ನಟಿಯರ ಆಯ್ಕೆ ಕೂಡ ಮುಗಿದಿದ್ದು, ಸಿನಿಮಾ ಶೂಟಿಂಗ್ ಬಗ್ಗೆ ಇದ್ದ ಕುತೂಹಲಕ್ಕೆ ತೆರೆ ಬಿದ್ದಿದೆ. ಈ ಸಿನಿಮಾದ ಶೂಟಿಂಗ್ ಅಪ್ಡೇಟ್ ಬಗ್ಗೆ ಮುಂದೆ ಓದಿ...

  'ಕುಲದಲ್ಲಿ ಕೀಳ್ಯಾವುದೋ' ಶೂಟಿಂಗ್!

  'ಕುಲದಲ್ಲಿ ಕೀಳ್ಯಾವುದೋ' ಶೂಟಿಂಗ್!

  'ಕುಲದಲ್ಲಿ ಕೀಳ್ಯಾವುದೋ' ಎಂದು ತಾತ್ಕಾಲಿಕವಾಗಿ ಈ ಚಿತ್ರಕ್ಕೆ ಹೆಸರಿಡಲಾಗಿದೆ. ಸರಳ ಮುಹೂರ್ತದೊಂದಿಗೆ ಈ ಚಿತ್ರದ ಕೆಲಸಗಳನ್ನು ಹಲವು ದಿನಗಳ ಹಿಂದೆಯೇ ಪ್ರಾರಂಭಿಸಲಾಯಿತು. ಆಗಸ್ಟ್ 20ರಿಂದ ಈ ಚಿತ್ರದ ಶೂಟಿಂಗ್ ಶುರುವಾಗಲಿದೆ ಎನ್ನಲಗಿತ್ತು. ಆದರೆ ಕೊಂಚ ತಡವಾಗಿ ಇಂದಿನಿಂದ (ಆಗಸ್ಟ್ 27) ಚಿತ್ರ ಅಧಿಕೃತವಾಗಿ ಚಿತ್ರೀಕರಣ ಆರಂಭಿಸಿದೆ. ಮೊದಲ ದಿನದ ಶೂಟಿಂಗ್‌ನಲ್ಲಿ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಕೂಡ ಖಾಕಿ ತೊಟ್ಟು ಕಾಣಿಸಿಕೊಂಡಿದ್ದಾರೆ.

  ಅಜ್ಜಿ ಮನೆಗೆ ಶಿವಣ್ಣ ಭೇಟಿ, ಹಳೆ ನೆನಪುಗಳ ಮೆಲುಕುಅಜ್ಜಿ ಮನೆಗೆ ಶಿವಣ್ಣ ಭೇಟಿ, ಹಳೆ ನೆನಪುಗಳ ಮೆಲುಕು

  ಸೆಟ್‌ನಲ್ಲಿ ಶಿವಣ್ಣ, ಪ್ರಭುದೇವ!

  ಸೆಟ್‌ನಲ್ಲಿ ಶಿವಣ್ಣ, ಪ್ರಭುದೇವ!

  ಮೊದಲ ದಿನದ ಚಿತ್ರೀಕರಣದಲ್ಲಿ ನಟ ಶಿವರಾಜ್ ಕುಮಾರ್ ಮತ್ತು ಪ್ರಭುದೇವ ಇಬ್ಬರೂ ಭಾಗಿಯಾಗಿದ್ದಾರೆ. ನಿರ್ದೇಶಕ ಯೋಗರಾಜ್ ಭಟ್ ಮತ್ತು ಇಡೀ ತಂಡ ಇರುವ ಫೋಟೋಗಳು ರಿವೀಲ್ ಆಗಿದ್ದು, ವೈರಲ್ ಲಿಸ್ಟ್ ಸೇರಿವೆ. ಇನ್ನು ನಟ ಶಿವರಾಜ್ ಕುಮಾರ್ ಮತ್ತು ಪ್ರಭುದೇವ ಅವ್ರ ಲುಕ್ ಫೋಟೋದಲ್ಲಿ ರಿವೀಲ್ ಆಗಿಲ್ಲ. ಅವರು ಕಾಸ್ಟ್ಯೂಂ ಹಾಕಿಕೊಳ್ಳದೆ, ಸಹಜವಾಗಿ ತಮ್ಮ ರಿಲಯ್ ಲುಕ್‌ನಲ್ಲೇ ಈ ಫೊಟೋಗಳಲ್ಲಿ ಕಾಣಿಸಿಕೊಂಡಿದ್ದಾರೆ.

  ಭಟ್ಟರ ಚಿತ್ರದಲ್ಲಿ ಪ್ರಿಯಾ ಆನಂದ್!

  ಭಟ್ಟರ ಚಿತ್ರದಲ್ಲಿ ಪ್ರಿಯಾ ಆನಂದ್!

  ನಟಿ ಪ್ರಿಯಾ ಆನಂದ್ ಕನ್ನಡದಲ್ಲಿ ಮೊದಲು ಕಾಣಿಸಿಕೊಂಡಿದ್ದೇ, ರಾಜ್‌ಕುಟುಂಬದ ಜೊತೆಗೆ. ಈ ಹಿಂದೆ ಪುನೀತ್ ರಾಜ್‌ಕುಮಾರ್ ಜೊತೆಗೆ, ಸಂತೋಷ್ ಆನಂದ್‌ರಾಮ್ ನಿರ್ದೇಶನದ 'ರಾಜಕುಮಾರ' ಮತ್ತು ಚೇತನ್ ಕುಮಾರ್ ನಿರ್ದೇಶನದ 'ಜೇಮ್ಸ್' ಚಿತ್ರದಲ್ಲಿ ಪ್ರಿಯಾ ಆನಂದ್ ನಟಿದ್ದಾರೆ. ಈಗ ಯೋಗರಾಜ್ ಭಟ್ ಸಾರಥ್ಯದಲ್ಲಿ ಬರುತ್ತಿರುವ ಈ ಚಿತ್ರದ ಮೂಲಕ ಮತ್ತೇ ಕನ್ನಡದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಮಾತುಕಥೆ ಮುಗಿದ್ದು, ಸಿನಿಮಾ ಶೂಟಿಂಗ್‌ಗೆ ಹಾಜರಾಗುವುದೊಂದೇ ಬಾಕಿಯಂತೆ.

  ನಿಶ್ವಿಕಾ ನಾಯ್ಡುಗೆ ಬಿಗ್ ಬ್ರೇಕ್!

  ನಿಶ್ವಿಕಾ ನಾಯ್ಡುಗೆ ಬಿಗ್ ಬ್ರೇಕ್!

  ಈ ಚಿತ್ರದಲ್ಲಿ ಇಬ್ಬರು ನಾಯಕರು ಇರುವ ಕಾರಣಕ್ಕೆ ಇಬ್ಬರು ನಟಿಯರೂ ಕೂಡ ಇದ್ದಾರೆ. ಇತ್ತೀಚೆಗೆ ಯೋಗರಾಜ್ ಭಟ್‌ ಅವ್ರ ಗಾಳಿಪಟ 2 ಚಿತ್ರದಲ್ಲಿ ಅತಿಥಿ ಪಾತ್ರವನ್ನು ನಿರ್ವಹಿಸಿದ ನಿಶ್ವಿಕಾ ನಾಯ್ಡು ಕೂಡ ಈ ಚಿತ್ರದಲ್ಲಿ ಇರಲಿದ್ದಾರೆ. ಇದು ನಿಶ್ವಿಕಾಗೆ ಒಲಿದಿರುವ ಮೊದಲ ದೊಡ್ಡ ಸಿನಿಮಾ. ಈ ಚಿತ್ರದ ಮೂಲಕ ನಿಶ್ವಿಕಾಗೆ ಬಿಗ್ ಬ್ರೇಕ್ ಸಿಗುವ ಸಾಧ್ಯತೆ ಕೂಡ ಇದೆ. ಪ್ರಿಯಾ ಆನಂದ್ ಮತ್ತು ನಿಶ್ವಿಕಾ ಈ ಚಿತ್ರಕ್ಕೆ ನಾಯಕಿಯರಾಗಿ ಆಯ್ಕೆ ಆಗಿದ್ದಾರೆ. ಆದರೆ ಈ ವಿಚಾರವನ್ನು ಸದ್ಯದಲ್ಲೇ ಅಧಿಕೃತವಾಗಿ ಚಿತ್ರತಂಡ ಪ್ರಕಟ ಮಾಡಲಿದೆ.

  English summary
  Yogaraj Bhat’s next with Shivarajkumar and Prabhudheva Shooing Started In Bengaluru, Know More,
  Saturday, August 27, 2022, 13:47
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X