ಹುಟ್ಟುಹಬ್ಬಕ್ಕೆ ಶುಭಕೋರಿದವರಿಗೆ ಭಟ್ಟರ ಸ್ಪೆಷಲ್ ಧನ್ಯವಾದ

'ವಿಕಟಕವಿ' ಎಂದೇ ಗುರುತಿಸಿಕೊಂಡಿರುವ ನಿರ್ದೇಶಕ, ಚಿತ್ರ ಸಾಹಿತಿ ಯೋಗರಾಜ್ ಭಟ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅದ್ಭುತವಾದ ಗೀತೆಗಳು, ಸಂಭಾಷಣೆ, ಸಿನಿಮಾ ನಿರ್ದೇಶನ, ಕಥೆಗಳ ಮೂಲಕ ಸ್ಯಾಂಡಲ್ ವುಡ್ ನಲ್ಲಿ ವಿಶೇಷ ಅಭಿಮಾನಿಗಳನ್ನ ಹೊಂದಿರುವ ಚಿತ್ರಕರ್ಮಿ ಯೋಗರಾಜ್ ಭಟ್.

ಭಟ್ಟರ ಗರಡಿಯಿಂದ ಅನೇಕ ಪ್ರತಿಭೆಗಳು ಬೆಳಕಿಗೆ ಬಂದಿದ್ದಾರೆ. ಸದಭಿರುಚಿ ಚಿತ್ರಗಳನ್ನ ನೀಡಿರುವ ಭಟ್ಟರಿಗೆ ಕನ್ನಡ ಚಿತ್ರರಂಗದ ನಟ, ನಟಿ, ನಿರ್ದೇಶಕ, ಸಂಗೀತ ನಿರ್ದೇಶಕರು ಸೇರಿದಂತೆ ಬಹುತೇಕರು ಶುಭಕೋರಿದ್ದಾರೆ.

ಭಟ್ಟರ ಬರ್ತಡೇಗೆ ಶುಭ ಕೋರಿದವರಿಗೆ ಪತ್ರದ ಮೂಲಕ ವಿಶೇಷವಾಗಿ ಧನ್ಯವಾದ ತಿಳಿಸಿದ್ದಾರೆ. ಯೋಗರಾಜ್ ಭಟ್ಟರ ಹಾಡಿನಷ್ಟೇ ವಿಶೇಷವಾಗಿ ಧನ್ಯವಾದ ತಿಳಿಸಿರುವುದು ಗಮನ ಸೆಳೆಯುತ್ತಿದೆ.

Yogaraj Bhat Said Thanks To Fans

ಭಟ್ಟರು ಬರೆದಿರುವ ಪತ್ರದಲ್ಲಿ ಏನಿದೆ?

ನಮಸ್ತೆ,

ನನ್ನ ಹುಟ್ಟುಹಬ್ಬ ಈವುತ್ತು..

ಎಲ್ರಿಗೂ ಧನ್ಯವಾದ...

ಬಾಲ್ಯದಿಂದ ಇದೆಲ್ಲ ಆಚರಣೆ ಮಾಡಿಲ್ಲವಾದ್ದರಿಂದ, ಯಾರಾದರೂ ಶುಭ ಹಾರೈಸಿದರೆ ನಾಚಿಕೆ-ಆತಂಕ-ಗಾಬರಿ ಎಲ್ಲ ಆಗ್ತಿದೆ. ನನಗೆ ಹಾರೈಸಿದ, ಹಾರೈಸುವ ಸದಾ ಹರಸುವ ಎಲ್ರಿಗೂ ದೀರ್ಘದಂಡ ನಮನ...ಒಂದಿಷ್ಟು ಕತ್ತೆ ವಯಸ್ಸಾಯ್ತು ಎಂದು ಟೆನ್ಷನ್ ಆಗ್ತಾ ಇದೆ...ಇನ್ನೊಂಚೂರು ಜವಾಬ್ದಾರು ನನಗೂ ಬರಲಿ ಎಂದು ಸಕಲರೂ ಹಾರೈಸುಬೇಕಾಗಿ ಕೋರುತ್ತೇನೆ....ಪ್ರೀತಿ ಪೂರ್ವಕವಾಗಿ ನಮನಗಳೊಂದಿಗೆ ವಿನಯದಿಂದ ನಿಮ್ಮ ಯೋಗ್ರಾಜ್ ಭಟ್'' ಎಂದಿದ್ದಾರೆ...

'ಪಂಚತಂತ್ರ' ಸಿನಿಮಾ ಮುಗಿದ ಮೇಲೆ 'ಗಾಳಿಪಟ-2' ಚಿತ್ರವನ್ನ ಕೈಗೆತ್ತಿಕೊಂಡಿದ್ದಾರೆ. ಗಣೇಶ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ಶೂಟಿಂಗ್ ಇನ್ನು ಆರಂಭವಾಗಿಲ್ಲ.

More from Filmibeat

English summary
Director Yogaraj Bhat celebrates his 46th birthday today (october 8th)
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X