ಯೋಗರಾಜ್ ಭಟ್ ಜೊತೆ ಶಿವರಾಜ್ ಕುಮಾರ್ ಸಿನಿಮಾ: ಪ್ರಾರಂಭ ಯಾವಾಗ?

ಪುನೀತ್ ಅಗಲಿಕೆಯ ಆಘಾತದಿಂದ ಸಾವರಿಸಿಕೊಳ್ಳುತ್ತಿರುವ ನಟ ಶಿವರಾಜ್ ಕುಮಾರ್ ಮತ್ತೆ ಸಿನಿಮಾ ಚಿತ್ರೀಕರಣಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಶಿವರಾಜ್ ಕುಮಾರ್ ನಟನೆಯ 125ನೇ ಸಿನಿಮಾ 'ವೇದ' ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಶಿವರಾಜ್ ಕುಮಾರ್ ಜೊತೆಗೆ ಸಾಲು-ಸಾಲು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ.

ಶಿವರಾಜ್ ಕುಮಾರ್ ಮೊದಲ ಬಾರಿಗೆ ಯೋಗರಾಜ್ ಭಟ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದು, ಈ ಸಿನಿಮಾ ಸಿನಿ ಪ್ರಿಯರಲ್ಲಿ ಬಹಳ ನಿರೀಕ್ಷೆ ಹುಟ್ಟಿಸಿದೆ. ಇದೀಗ 'ವೇದ' ಸಿನಿಮಾದ ಎರಡನೇ ಶೆಡ್ಯೂಲ್‌ನ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಶಿವಣ್ಣ, ಆ ಸಿನಿಮಾದ ಬಳಿಕ ಯೋಗರಾಜ್ ಭಟ್ ಸಿನಿಮಾದಲ್ಲಿ ನಟಿಸಲಿದ್ದಾರೆ.

Yogaraj Bhat Shiva Rajkumar Movie Will Start From May
ಯೋಗರಾಜ್ ಭಟ್ ಹಾಗೂ ಶಿವರಾಜ್ ಕುಮಾರ್ ಸಿನಿಮಾದ ಚಿತ್ರೀಕರಣ ಮೇ ತಿಂಗಳಲ್ಲಿದ ಆರಂಭವಾಗುವ ನಿರೀಕ್ಷೆ ಇದೆ. ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಜೊತೆಗೆ ನಟ ಪ್ರಭುದೇವ ಸಹ ನಟಿಸಲಿರುವುದು ವಿಶೇಷ.

ಯೋಗರಾಜ್ ಭಟ್ ಜೊತೆಗಿನ ಸಿನಿಮಾ ಬಗ್ಗೆ ಮಾತನಾಡಿರುವ ಶಿವರಾಜ್ ಕುಮಾರ್, ''ಯೋಗರಾಜ್ ಭಟ್ ಅದ್ಭುತವಾದ ಕತೆಯನ್ನು ಬರೆದುಕೊಂಡಿದ್ದಾರೆ. ಕತೆಯಲ್ಲಿರುವ ಭಾವನಾತ್ಮಕ ಅಂಶಗಳು ಕತೆಯ ತೂಕವನ್ನು ಹೆಚ್ಚಿಸಿವೆ. ಪ್ರಭುದೇವ ಸಹ ಸಿನಿಮಾದ ಕತೆಯನ್ನು ಕೇಳಿ ಬಹಳ ಮೆಚ್ಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ನಟಿಸಲು ಅವರು ಕಾತರರಾಗಿದ್ದಾರೆ'' ಎಂದಿದ್ದಾರೆ.

ಶಿವರಾಜ್ ಕುಮಾರ್ ನಟನೆಯ 'ಭೈರಾಗಿ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈಗ ಹರ್ಷ ನಿರ್ದೇಶಿಸುತ್ತಿರುವ 'ವೇದ' ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಬಳಿಕ 'ನೀ ಸಿಗೋವರೆಗೆ' ಹೆಸರಿನ ಪ್ರೇಮಕಥಾ ಸಿನಿಮಾದಲ್ಲಿ ನಟಿಸಲಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶನದ ಸಿನಿಮಾದಲ್ಲಿಯೂ ನಟಿಸಲಿದ್ದಾರೆ. ಲೋಹಿತ್ ಎಚ್ ನಿರ್ದೇಶನ ಮಾಡುತ್ತಿರುವ 'ಸತ್ಯ ಮಂಗಲ' ಸಿನಿಮಾದಲ್ಲಿ ನಟಿಸಲಿದ್ದಾರೆ. ಇವುಗಳ ಜೊತೆಗೆ ಹೊಸ ನಿರ್ದೇಶಕರೊಬ್ಬರೊಟ್ಟಿಗೆ ರೌಡಿಸಂ ಕತೆಯುಳ್ಳ ಸಿನಿಮಾದಲ್ಲಿ ನಟಿಸಲು ಒಪ್ಪಿಗೆ ನೀಡಿದ್ದಾರೆ.

ಇನ್ನು ನಿರ್ದೇಶಕ ಯೋಗರಾಜ್ ಭಟ್, 'ಗಾಳಿಪಟ 2' ಸಿನಿಮಾದ ಚಿತ್ರೀಕರಣ ಮುಗಿಸಿದ್ದು ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಅದರ ಬಳಿಕ 'ಗರಡಿ' ಹೆಸರಿನ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ. ಈ ಸಿನಿಮಾದಲ್ಲಿ ಯಶಸ್ ಸೂರ್ಯ ನಾಯಕ ನಟರಾಗಿ ನಟಿಸುತ್ತಿದ್ದು, ದರ್ಶನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾಕ್ಕೆ ಬಿ.ಸಿ.ಪಾಟೀಲ್ ಬಂಡವಾಳ ಹೂಡಿದ್ದಾರೆ ಎನ್ನಲಾಗುತ್ತಿದೆ. 'ಗರಡಿ' ಸಿನಿಮಾ ಮುಗಿಸಿದ ಬಳಿಕ ಶಿವರಾಜ್ ಕುಮಾರ್ ಜೊತೆಗಿನ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ ಯೋಗರಾಜ್ ಭಟ್.

More from Filmibeat

English summary
Director Yogaraj Bhat and Shiva Rajkumar's movie will start shooting from month of May. Prabhu Deva also acting in that movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X