RCB ಆಟಗಾರರನ್ನು ಬೈಯಬೇಡಿ ಅಂದ್ರು ಭಟ್ರು! ಯಾಕೆ ಗೊತ್ತೆ?
Recommended Video

IPL ಕ್ರಿಕೆಟ್ ಹಬ್ಬ ಶುರುವಾಗಿ ಕೆಲ ದಿನಗಳು ಕಳೆದಿವೆ. ಸಂಜೆ ಆದ್ರೆ ಸಾಕು ಎಲ್ಲರ ಕಣ್ಣು ಕ್ರಿಕೆಟ್ ಪಂದ್ಯ ವೀಕ್ಷಣೆಗಾಗಿ ಕಾಯುತ್ತಿರುತ್ತದೆ. ಆದರೆ, ಬಾರಿ ಮತ್ತೆ ಬೆಂಗಳೂರು ತಂಡ ಅಭಿಮಾನಿಗಳಿಗೆ ನಿರಾಸೆ ಮೂಡಿಸುತ್ತಿದೆ.
''ಈ ಸಲ ಕಪ್ ನಮ್ದೆ'' ಎಂದು ಖುಷಿಯಲ್ಲಿ ಇದ್ದ ಅಭಿಮಾನಿಗಳಿಗೆ ಏಟಿನ ಮೇಲೆ ಏಟು ಬೀಳುತ್ತಿದೆ. ಆರ್ ಸಿ ಬಿ ತಂಡ ಸತತ 6 ಪಂದ್ಯಗಳನ್ನು ಸೋತಿದೆ. ಒಂದೂ ಪಂದ್ಯವನ್ನು ಗೆಲ್ಲದ ತಂಡ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬೆಳವಣಿಗೆಗಳ ಬಗ್ಗೆ ಇದೀಗ ನಿರ್ದೇಶಕ ಯೋಗರಾಜ್ ಭಟ್ ಮಾತನಾಡಿದ್ದಾರೆ. ಆರ್ ಸಿ ಬಿ ಆಟಗಾರರ ಪರ ಮಾತನಾಡಿರುವ ಅವರು ಆಟಗಾರ ಬಗ್ಗೆ ಸ್ವಲ್ಪ ಪ್ರೀತಿ ಇರಲಿ ಎಂದಿದ್ದಾರೆ. ಭಟ್ಟರ ಪೂರ್ಣ ಮಾತುಗಳು ಮುಂದಿವೆ...

ಗೊತ್ತು...ಆರ್ ಸಿ ಬಿ ಒಂದೂ ಪಂದ್ಯ ಗೆದ್ದಿಲ್ಲ
''ಆರ್ ಸಿ ಬಿ ತಂಡ ಇದುವರೆಗೆ ಒಂದು ಪಂದ್ಯವನ್ನು ಗೆದ್ದಿಲ್ಲ. ಎಂಬುದು ಎಲ್ಲರಿಗೆ ತಿಳಿದಿದೆ. ನಿಜವಾಗಿಯೂ ಇದು ಬೇಸರದ ವಿಷಯ ಹೌದು. ಆದರೆ, ಆ ಬೇಸರದಲ್ಲಿ ಆರ್ ಸಿ ಬಿ ಗೆ ಎಲ್ಲರೂ ಶಾಪ ಹಾಕುವುದನ್ನು, ಬೈಯುವುದನ್ನು ನಿಲ್ಲಿಸಬೇಕಾಗಿ ವಿನಂತಿ ಮಾಡಲು ಈ ವಿಡಿಯೋ ಮಾಡುತ್ತಿದ್ದೇನೆ.'' - ಯೋಗರಾಜ್ ಭಟ್, ನಿರ್ದೇಶಕ

ಸೋಲು ಗೆಲುವು ಇದ್ದದ್ದೆ
''ಸೋಲು.. ಗೆಲುವು.. ಎನ್ನುವುದು ಇದ್ದದ್ದೆ. ಗೆದ್ದ ತಕ್ಷಣ ಒಂದು ತಂಡವನ್ನು ಕೊಂಡಾಡುವುದು, ಸೋತ ತಕ್ಷಣ ಬೈಯುವುದು ಇದ್ದದ್ದೆ. ಅದು ಎಲ್ಲರೂ ಮಾಡುವ ಕೆಲಸ. ನಾವು, ನೀವು ಎಲ್ಲರೂ ಅದನ್ನೇ ಮಾಡುತ್ತೇವೆ. ಆದರೆ, ಸತತವಾಗಿ ಸೋತವರಿಗೆ ಮುಖಕ್ಕೆ ಗುರಿ ಇಟ್ಟು, ಕ್ಯಾಕರಿಸಿ ಉಗಿದರೆ, ಅವರು ಮೂರ್ನಾಲ್ಕು ವರ್ಷ ಎದ್ದೇಳುವುದಿಲ್ಲ.'' - ಯೋಗರಾಜ್ ಭಟ್, ನಿರ್ದೇಶಕ

ವಲ್ಡ್ ಕಪ್ ಮೇಲೆ ಪರಿಣಾಮ
''ಹೀಗೆ ನಾವು ಬೈಯುತ್ತಿದ್ದರೆ ಅವರ ಚೈತನ್ಯ ಕಳೆದುಹೋಗುತ್ತದೆ. ಸದ್ಯದಲ್ಲಿಯೇ ವಲ್ಡ್ ಕಪ್ ಕೂಡ ಇದೆ. ಅದರಲ್ಲಿ ಸುಮಾರು ಜನ ಆರ್ ಸಿ ಬಿ ಆಟಗಾರರು ಇದ್ದಾರೆ. ನಾವು ಇದೇ ರೀತಿ ಬೈಯುತ್ತಿದ್ದರೆ ಅವರು ವಲ್ಡ್ ಕಪ್ ನಲ್ಲಿ ಬ್ಯಾಟ್ ಹಿಡಿದಾಗಲೂ ಇದೇ ನೆನಪಾಗುತ್ತದೆ''. - ಯೋಗರಾಜ್ ಭಟ್, ನಿರ್ದೇಶಕ
ಆಟಗಾರ ಮೇಲೆ ಪ್ರೀತಿ ಇರಲಿ
''ಆಟ ಆಡುವವರಿಗೆ ಯಾವ ರೀತಿ ಸ್ಪೋರ್ಟಿವ್ ನೆಸ್ ಇರುತ್ತದೆಯೋ ನೋಡುವವನಿಗೂ ಅದೇ ರೀತಿಯ ಸ್ಪೋರ್ಟಿವ್ ನೆಸ್ ಇರಬೇಕು. ಆಟಗಾರರ ಕಷ್ಟ ನೋಡುವವರಿಗೆ ಖಂಡಿತ ಗೊತ್ತಾಗುವುದಿಲ್ಲ. ಬೈಯಬೇಡಿ ಆರಾಮಾಗಿ ಇರೀ. ಆಟಗಾರ ಮೇಲೆ, ಆಟದ ಮೇಲೆ ಸ್ವಲ್ಪ ಪ್ರೀತಿ ಇರಲಿ. ಎಲ್ಲ ಸರಿ ಹೋಗುತ್ತದೆ.'' - ಯೋಗರಾಜ್ ಭಟ್, ನಿರ್ದೇಶಕ


Click it and Unblock the Notifications











