ಯೋಗರಾಜ್ ಭಟ್ಟರ ಹೊಸ ಸಿನಿಮಾ: ಹೆಸರು ಸೂಪರ್

ನಿರ್ದೇಶಕ ಯೋಗರಾಜ್ ಭಟ್ಟರು ಸಾಲು-ಸಾಲು ಸಿನಿಮಾಗಳ ನಿರ್ದೇಶನದಲ್ಲಿ ತೊಡಗಿದ್ದಾರೆ. 'ಗಾಳಿಪಟ 2' ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ನಡೆಯುತ್ತಿರುವಾಗಲೇ ಮೂರು ಸಿನಿಮಾಗಳಲ್ಲಿ ಭಟ್ಟರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಯೋಗರಾಜ್ ಭಟ್ಟರು ನಿರ್ದೇಶಿಸಿ ಗಣೇಶ್, ದಿಗಂತ್, ಪವನ್ ಕುಮಾರ್ ನಟಿಸುತ್ತಿರುವ 'ಗಾಳಿಪಟ 2' ಸಿನಿಮಾ ಈಗಷ್ಟೆ ಚಿತ್ರೀಕರಣ ಮುಗಿಸಿದ್ದು ಎಡಿಟಿಂಗ್ ಕಾರ್ಯ ಭರದಿಂದ ಸಾಗಿದೆ. ಈ ನಡುವೆಯೇ ಮೂರು ಸಿನಿಮಾಗಳ ನಿರ್ದೇಶನಕ್ಕೆ ಯೋಗರಾಜ್ ಭಟ್ ರೆಡಿಯಾಗಿದ್ದಾರೆ.

ಶಿವರಾಜ್ ಕುಮಾರ್, ಪ್ರಭುದೇವಾ ನಟಿಸಲಿರುವ ಸಿನಿಮಾ ಒಂದನ್ನು ಯೋಗರಾಜ್ ಭಟ್ ನಿರ್ದೇಶಿಸಲಿದ್ದಾರೆ ಎಂದು ತಿಂಗಳ ಹಿಂದಷ್ಟೆ ವರದಿ ಆಗಿತ್ತು. ಅದರ ಬಳಿಕ ಇತ್ತೀಚೆಗಷ್ಟೆ ಸಚಿವ ಬಿ.ಸಿ.ಪಾಟೀಲ್‌ರನ್ನು ಭೇಟಿ ಮಾಡಿದ್ದ ಯೋಗರಾಜ್ ಭಟ್ ಮತ್ತು ತಂಡ ಮತ್ತೊಂದು ಸಿನಿಮಾ ಘೋಷಿಸಿದರು. ಇದೀಗ ಇನ್ನೂ ಒಂದು ಸಿನಿಮಾ ಘೋಷಣೆ ಮಾಡಿದ್ದಾರೆ.

Yogaraj Bhats New Movie Name Is Pundaleeka

ಯೋಗರಾಜ್ ಭಟ್‌ರ ಹೊಸ ಸಿನಿಮಾದಲ್ಲಿ ಅನಂತ್‌ ನಾಗ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಅದೇ ಸಿನಿಮಾದಲ್ಲಿ ಹೊಸ ನಾಯಕ ನಟನೊಬ್ಬ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಆ ಸಿನಿಮಾಕ್ಕೆ 'ಪುಂಡಲೀಕ' ಎಂದು ಹೆಸರಿಡಲಾಗಿದೆ.

ಈ ಸಿನಿಮಾಕ್ಕೆ ಹೊಸ ನಿರ್ಮಾಕರೊಬ್ಬರು ಬಂಡವಾಳ ಹೂಡಲಿದ್ದಾರೆ ಎಂದು ಯೋಗರಾಜ್ ಭಟ್ ಹೇಳಿದ್ದು, ಆ ಹೊಸ ನಿರ್ಮಾಪಕ ಬಿ.ಸಿ.ಪಾಟೀಲ್ ಅವರೇನಾ ಅಥವಾ ಇನ್ನೊಬ್ಬರಾ ಎಂಬುದನ್ನು ಕಾದು ನೋಡಬೇಕಿದೆ.

ಇದೆಲ್ಲದರ ಜೊತೆಗೆ ಐದು ಮಂದಿ ನಿರ್ದೇಶಕರು ಸೇರಿ 'ಆದ್ದರಿಂದ' ಎಂಬ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ನಿರ್ದೇಶಕರ ತಂಡದಲ್ಲಿ ಯೋಗರಾಜ್ ಭಟ್ ಸಹ ಇದ್ದಾರೆ. ಯೋಗರಾಜ್ ಭಟ್ಟರ ಕತೆಯಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಗೋವಿಂದೇಗೌಡ ನಾಯಕರಾಗಿದ್ದಾರೆ. ಸಿನಿಮಾ ಚಿತ್ರೀಕರಣ ಚಾಲ್ತಿಯಲ್ಲಿದೆ.

More from Filmibeat

English summary
Director Yogaraj Bhat's new movie name is Pundaleeka. Ananth Nag playing lead role in the movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X